ಕಲಬುರಗಿಯಲ್ಲಿ ರಾವೂರ್ ಮಾತ್ರವಲ್ಲ ಆಳಂದದಲ್ಲೂ ಜಾತ್ರೆ ಮಾಡಿದ ಮಂದಿ!

ನಿನ್ನೆಯಷ್ಟೇ ರೆಡ್ ಅಲರ್ಟ್ ಪ್ರದೇಶ ಕಲಬುರಗಿಯ ರಾವೂರ್ ನಲ್ಲಿ ನೂರಾರು ಜನ ಸೇರಿ ಜಾತ್ರೆ ಮಾಡಿದ ಘಟನೆ ನಡೆದಿತ್ತು. ಸದ್ಯ ರಾವುರ್ ನಲ್ಲಿ ಮಾತ್ರವಲ್ಲ  ಕಲಬುರಗಿಯ ಆಳಂದ ತಾಲುಕೀನ ಭೂಸನೂರಿನಲ್ಲಿ ಹನುಮದೇವರ ಜಾತ್ರೆ ಆಗಿದೆ.

ಹೌದು… ಏ.15 ನೇ ತಾರೀಖು ಭೂಸನೂರಿನಲ್ಲಿ ಹನುಮದೇವರ ಜಾತ್ರೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ಪದೇ ಪದೇ ಲಾಕ್ ಡೌನ್ ಉಲ್ಲಂಘಿಸಿ ಜಾತ್ರೆಗಳನ್ನು ಮಾಡುತ್ತಿರುವುದರ ಹಿಂದೆ ದೊಡ್ಡ ಕೈಗಳಿರಬಹುದು ಎನ್ನುವ ಅನುಮಾನ ಶುರುವಾಗಿದೆ.

ಇದನ್ನ ನೋಡಿದರೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾಡಳಿತದ ಬಗ್ಗೆ ಯಾರಿಗೂ ಭಯ ಇಲ್ಲ. ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆಯಿಂದಾಗಿ ರಥೋತ್ಸವ ಮಾಡಲಾಗಿದೆ. ಜೊತೆಗೆ ಇಲ್ಲಿನ ಕಬ್ಬು ಬೆಳಗಾರರ ಅಧ್ಯಕ್ಷರ ನೇತೃತ್ವದಲ್ಲಿ ಜಾತ್ರೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಮಾಸ್ಕ್ ಹಾಕಿಕೊಮಡಿರಲಿಲ್ಲ. ಜನ ಕೂಡ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಆಳಂದ ಶಾಸಕ ಸುಭಾಷ್ ಗುತ್ತೇದಾರ, ಈ ಬಗ್ಗೆ ಜನರಿಗೆ ತಿಳಿ ಹೇಳುತ್ತೇವೆ. ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕಳೆದ ಬಾರಿ ರಾವುರ್ ನಲ್ಲಿ ಜಾತ್ರೆ ನಡೆದಾಗ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ,  “ರಾವುರ್ ನಲ್ಲಿ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಪಿಎಸ್ ಐ ಸಸ್ಪಂಡ್ ಮಾಡಲಾಗಿದೆ. ದೇವಸ್ಥಾನದ ಕಮಿಟಿ ಮೆಂಬರ್ಸ್ ಮೇಲೆ ಎಫ್ ಐ ಆರ್ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಜೊತೆ ಈ ಹಿಂದೆ ಜಾತ್ರೆ ನಡೆಸಬಾರದೆಂದು ಸಭೆ ಮಾಡಲಾಗಿತ್ತು. ಆದರೆ ಸಭೆ ವೇಳೆ ಜಾತ್ರೆ ನಡೆಸುವುದಿಲ್ಲ ಎಂದಿದ್ದ ಮಂಡಳಿ ಏಕಾಏಕಿ ಜಾತ್ರೆ ಮಾಡಿದ್ದಾರೆ. ಇದರ ವಿರುದ್ಧ ಕ್ರಮ ಜಾರಿಗೊಳಿಸಿದ್ದೇವೆ” ಎಂದಿದ್ದರು.

ಹೀಗೆ ಕ್ರಮ ನಿಜವಾಗಲೂ ಕೈಗೊಂಡಿದ್ದರೆ ಇಂತಹ ತಪ್ಪು ಮತ್ತೆ ಆಗಲು ಸಾಧ್ಯವೇ ಎನ್ನುವುದು ಸದ್ಯ ಪ್ರಶ್ನೆಯಾಗಿದೆ. ಯಾಕಂದ್ರೆ ಲಾಕ್ ಡೌನ್ ಜಾರಿಯಾದಾಗಿನಿಂದ ಬೇಲೂರು, ಮೇಲುಕೋಟೆ, ಮೈಸೂರು ರಾಜ್ಯದ ಹಲವಾರು ಕಡೆ ನಡೆಯುವ ದೊಡ್ಡ ಜಾತ್ರೆಗಳೇ ನಡೆದಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿ ಜನ ಸೇರುವುತ್ತಾರೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾಡಳಿತ ಭಯವಿಲ್ಲದೇ ಅಂದರೆ ಇದಕ್ಕೆ ಏನೇಳಲು ಸಾಧ್ಯ. ಮುಂದಾದರೂ ರೆಡ್ ಝೋನ್ ಆದ ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಕೊರೊನಾ ತಡೆಗಟ್ಟುವುದು ಕಷ್ಟ ಸಾಧ್ಯ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights