ಜಗತ್ತಿನಲ್ಲಿ 93.1 ಕೋಟಿ ಟನ್ ಆಹಾರ ಪೋಲು; ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆ ಎಷ್ಟು ಗೊತ್ತೇ?

ಜಗತ್ತಿನಲ್ಲಿ ಒಂದೆಡೆ ಕೋಟ್ಯಾಂತರ ಜನರು ಅಪೌಷ್ಟಿಕತೆ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ. ಮತ್ತೊಂದೆಡೆ ಟನ್ ಗಟ್ಟಲೆ ಆಹಾರ ಅನಗತ್ಯವಾಗಿ ಪೋಲಾಗುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಭಾರತದಲ್ಲಿಯೂ ಲಕ್ಷಗಟ್ಟಲೆ ಟನ್‌ ಆಹಾರವನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ.

ವಿಶ್ವಸಂಸ್ಥೆಯ ಆಹಾರ ಪೋಲು ಸೂಚ್ಯಂಕ-2021ರ ಪ್ರಕಾರ, 2019ರ ವರ್ಷದಲ್ಲಿ ಜಗತ್ತಿನಾದ್ಯಂತ ಉತ್ಪಾದಿಸಲಾಗುವ ಒಟ್ಟು ಆಹಾರದಲ್ಲಿ 17%  ಅಂದರೆ, 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ. ಇದರಲ್ಲಿ 61% ಆಹಾರ ಮನೆಗಳಲ್ಲಿ ಪೋಲಾಗಿದೆ.  26% ಆಹಾರ ತಯಾರಿಕಾ ಉದ್ದಿಮೆಗಳಲ್ಲಿ ಹಾಗೂ 13% ಆಹಾರ ಇತರ ಕಡೆಗಳಿಂದ ಪೋಲಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಪೋಲಾಗುತ್ತಿರುವ ಆಹಾರದ ಪ್ರಮಾಣದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅದರೆ, ಮನೆಗಳಿಂದ ಪೋಲಾಗುತ್ತಿರುವ ಆಹಾರದ ಪ್ರಮಾಣದ ಬಗ್ಗೆಯಷ್ಟೇ ಮಾಹತಿ ದೊರೆತಿದೆ. ಇದರ ಪ್ರಕಾರ, 2019ರಲ್ಲಿ ಭಾರತದಲ್ಲಿ ಮನೆಗಳಿಂದ 6.8 ಕೋಟಿ ಟನ್‌ ಅಷ್ಟು ಆಹಾರ ವ್ಯರ್ಥವಾಗಿದೆ. ಇದನ್ನು ವಾರ್ಷಿಕ ತಲಾವಾರು ಪ್ರಮಾಣದಲ್ಲಿ ಅಳೆದಾಗ ತಲಾ 50ಕೆ.ಜಿಯಷ್ಟು ಆಹಾರ ಪೋಲಾಗಿದೆ ಎಂದು ಸೂಚ್ಯಂಕ ತಿಳಿಸಿದೆ.

ಶ್ರೀಮಂತ ರಾಷ್ಟ್ರಗಳಲ್ಲಿ ಹೆಚ್ಚು ಆಹಾರ ಪದಾರ್ಥ ಪೋಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಹಿಂದುಳಿದ-ಅಭಿವೃದ್ಧಿಶೀಲ ರಾಷ್ಟ್ರಗಳೂ ಹೊರತಾಗಿಲ್ಲ ಎಂದು ಸೂಚ್ಯಂಕ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ತಲಾವಾರು ಆಹಾರ ಪೋಲು ಪ್ರಮಾಣ ವಾರ್ಷಿಕ 121ಕೆ.ಜಿ.ಯಷ್ಟಿದೆ. ಇದರಲ್ಲಿ 74 ಕೆ.ಜಿ.ಯಷ್ಟು ಮನೆಗಳಲ್ಲೇ ಪೋಲಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

2019ರಲ್ಲಿ ಜಗತ್ತಿನ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ.

ಭಾರತದಲ್ಲಿ ಜನರು ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕಾಗಿ ಪಡಿತರ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದರೂ, ಪಡಿತರ ವ್ಯವಸ್ಥೆಯಲ್ಲೂ ಸಾಕಷ್ಟು ಸಮಸ್ಯೆಗಳಿದ್ದು, ಅಗತ್ಯವಿರುವ ಹಲವಾರು ಜನರಿಗೆ ಇದರ ಸೌಲಭ್ಯ ದೊರೆತಿಲ್ಲ ಎಂದು ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ: ಒಂದು ದೇಶ- ಒಂದೇ ಚುನಾವಣೆ; ಸಾಂವಿಧಾನಿಕ ಸರ್ವಾಧಿಕಾರಕ್ಕೆ BJP ಸಂಚು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights