ಫ್ಯಾಕ್ಟ್‌ಚೆಕ್ : ಚಂದ್ರನ ನೆಲದಲ್ಲಿ ಭಾರತದ ಸಿಂಹ ಲಾಂಚನವನ್ನು ಶಾಶ್ವತವಾಗಿ ಮುದ್ರಿಸಿದ ಚಿತ್ರ ಎಂಬುದು ನಿಜವೇ?

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹಿರಿಮೆಗೆ ಭಾರತ ಪಾತ್ರವಾಗುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿಗೆ ‘ವಿಶ್ವ ಗುರು’ವಾಗಿ ಹೊರಹೊಮ್ಮಿದೆ. ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಅವರು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋದ ‘ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್’ (ಐಎಸ್‌ಟಿಆರ್‌ಎಸಿ) ಕೇಂದ್ರದಲ್ಲಿ’ಭಾರತ ಚಂದ್ರನ ಮೇಲಿದೆ,’ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.

ಈ ಸಾಧನೆಯನ್ನು ದೇಶದೆಲ್ಲಡೆ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ, ಭಾರತದ ಲಾಂಛನ ಮತ್ತು ISRO ಲೋಗೋವನ್ನು ಚಂದ್ರನ ಮೇಲ್ಮೈಯಲ್ಲಿ ಮುದ್ರಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Laxmikant Devargonal  ಎಂಬ ಸಾಮಾಜಿಕ ಮಾಧ್ಯಮದ ಬಳೆದಾರರೋಬ್ಬರು ಈ ಫೋಟೊವನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಮುಂದಿನ ಹದಿನಾಲ್ಕು ದಿನ, ಚಂದ್ರನ ನೆಲದಲ್ಲಿ ಎಲ್ಲೆಲ್ಲಾ ನಮ್ಮ ಪ್ರಜ್ಞಾನ್ ಸಾಗುತ್ತಾ ಹೋಗುತ್ತೋ, ಅಲ್ಲೆಲ್ಲಾ ಭಾರತದ ಲಾಂಛನವನ್ನು ಮುದ್ರೆ ಒತ್ತುತ್ತಾ ಹೋಗುತ್ತಿರುತ್ತೆ. ಚಂದ್ರ ಇರೋವರೆಗೂ ಇಸ್ರೋ ಹೆಸರು ಹಾಗೂ ನಮ್ಮ ರಾಷ್ಟ್ರೀಯ ಲಾಂಛನದ ಮುದ್ರೆಗಳು ಚಂದ್ರನ ನೆಲದಲ್ಲಿರುತ್ತೆ. ಎಂಬ ಸಾಲುಗಳೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಇದೇ ರೀತಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೋಟೊವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಾಗಿದ್ದರೆ ಚಂದ್ರನ ನೆಲದಲ್ಲಿ ಈ ರೀತಿ ಚಿತ್ರ ಮೂಡಿಬರುವಂತೆ ಇಸ್ರೋ ವಿಜ್ಞಾನಿಗಳು ಪ್ರಜ್ಞಾನ್ ನನ್ನು ಡಿಸೈನ್ ಮಾಡಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಪ್ರಜ್ಞಾನ್ ನೌಕೆಯ ಹಿಂದಿನ ಎರಡೂ ಚಕ್ರಗಳಲ್ಲೂ,ಇಸ್ರೋ ಲೋಗೋ ಹಾಗೂ ಭಾರತದ ರಾಷ್ಟ್ರೀಯ ಲಾಂಛನದ ಉಬ್ಬು ಮುದ್ರೆಯನ್ನು ರಚಿಸಿ ಕಳಿಸಲಾಗಿದೆ ಎಂದು ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಇಸ್ರೋದ ವೆಬ್‌ಸೈಟ್‌ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಸರ್ಚ್ ಮಾಡಿದಾಗ, ಚಂದ್ರನ ನೆಲದಲ್ಲಿ ರೋವರ್ ಸಂಚರಿಸಿದ ಚಿತ್ರಗಳನ್ನು ಇಸ್ರೋ ಟ್ವೀಟ್ ಮಾಡಿಲ್ಲ.

 

View this post on Instagram

 

A post shared by Krishanshu Garg (@krishanshugarg)

ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ‘ಕೃಷ್ಣಾಂಶು ಗರ್ಗ್’ ಎಂಬ ಹೆಸರಿನ ವಾಟರ್‌ ಮಾರ್ಕ್ ಕಂಡುಬಂದಿದೆ. ‘ಕೃಷ್ಣಾಂಶು ಗರ್ಗ್’ ಎಂಬ ವ್ಯಕ್ತಿಯು 24 ಆಗಸ್ಟ್ 2023, ತಮ್ಮ Instagram ಹ್ಯಾಂಡಲ್‌ನಲ್ಲಿ ರಚಿಸಲಾದ ಕಲಾಕೃತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ಈ ಚಿತ್ರವನ್ನು ಪೋಟೋಶಾಪ್ ಮೂಲಕ ರಚಿಸಿರುವುದು ಎಂದು ಸ್ಪಷ್ಟವಾಗಿದೆ.

Image

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಏರೋಸ್ಪೇಸ್ ಇಂಜಿನಿಯರ್ ಟೋಬಿ ಲಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಚಂದ್ರಯಾನ-3 ರ ಪ್ರಗ್ಯಾನ್ ರೋವರ್ ಬಗ್ಗೆ ಹಂಚಿಕೊಂಡಿದ್ದು, ಪೋಸ್ಟ್‌ ಮಾಡಿದ ಚಿತ್ರಗಳಲ್ಲಿ ತೋರಿಸಿರುವಂತೆ ಭಾರತದ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋದ ಲಾಂಛನವನ್ನು ಅದರ ಎರಡು ಹಿಂಬದಿಯ ಚಕ್ರಗಳಲ್ಲಿ ಇಂಡೆಂಟ್ ಒಳಗೊಂಡಿದೆ ಎಂದು ಹೇಳಿದ್ದಾರೆ.

ವಾಸ್ತವವಾಗಿ ಪ್ರಜ್ಞಾನ್ ರೋವರ್ ಚಂದ್ರನ ನೆಲದಲ್ಲಿ ಸೆರೆಹಿಡಿದಿದೆ ಎನ್ನಲಾದ ಚಿತ್ರವನ್ನು ಗ್ರಾಫಿಕ್ಸ್ ಮೂಲಕ ಮೂರು ವರ್ಷದ ಹಿಂದಯೇ ಇಸ್ರೋ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ.

ಆದರೆ ಚಂದ್ರಯಾನ 3ರ ರೋವರ್ ಸೆರೆಹಿಡಿದಿರುವ ನೈಜ ಚಿತ್ರಗಳನ್ನು ಇದುವರೆಗೂ ಇಸ್ರೋ ಎಲ್ಲಿಯೂ ಹಂಚಿಕೊಂಡಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಚಿತ್ರಗಳನ್ನು ರೋವರ್ ಚೆಂದ್ರನ ಮೇಲೆ ನಡೆದಾಡಿದಾಗ ಮೂಡಿ ಬಂದ ಭಾರತದ ಲಾಂಛನ ಮತ್ತು ಇಸ್ರೋದ ಲೋಗೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಇಸ್ರೋ ವಿಜ್ಞಾನಿಗಳ ಡ್ಯಾನ್ಸ್‌ನ ವೈರಲ್ ವಿಡಿಯೋ ಯಾವಾಗಿನದು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

2 thoughts on “ಫ್ಯಾಕ್ಟ್‌ಚೆಕ್ : ಚಂದ್ರನ ನೆಲದಲ್ಲಿ ಭಾರತದ ಸಿಂಹ ಲಾಂಚನವನ್ನು ಶಾಶ್ವತವಾಗಿ ಮುದ್ರಿಸಿದ ಚಿತ್ರ ಎಂಬುದು ನಿಜವೇ?

Leave a Reply

Your email address will not be published.

Verified by MonsterInsights