ಫ್ಯಾಕ್ಟ್‌ಚೆಕ್ : ತಿಳಿಯದೆ ಬಿಜೆಪಿಗೆ ಮತ ಹಾಕಿದ ಕಾರಣ ವ್ಯಕ್ತಿಯೊಬ್ಬ ತನ್ನ ಕೈ ಬೆರಳನ್ನು ಕತ್ತರಿಸಿಕೊಂಡಿದ್ದು ನಿಜವೇ?

ವ್ಯಕ್ತಿಯೊಬ್ಬ ಹರಿತವಾದ ಮಚ್ಚಿನಿಂದ ತನ್ನ ಕೈ ಬೆರಳನ್ನು ಕತ್ತರಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ವ್ಯಕ್ತಿಯು ತನ್ನ ಬಲಗೈನ ಬೆರಳನ್ನು ಕತ್ತರಿಸಿಕೊಳ್ಳುವ ದೃಶ್ಯಗಳನ್ನು ತಾನೇ ವಿಡಿಯೋ ಮಾಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್‌ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದು, ತಾನು ಮತ ಹಾಕಿದ್ದ ಬೆರಳನ್ನೇ ಕತ್ತರಿಸಲು ನಿರ್ಧರಿಸಿದ್ದಾನೆ ಎಂದು ಹೇಳಲಾಗಿದೆ. ಪವನ್ ಕುಮಾರ್ ಎಂಬ ವ್ಯಕ್ತಿ ಆಕಸ್ಮಿಕವಾಗಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದರಿಂದ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಟ್ವೀಟ್ ಮಾಡಲಾಗಿದೆ.

“ಪ್ರತಿ ದಿನ ನಾನು ನನ್ನ ದೇಹದ ಒಂದು ಭಾಗವನ್ನು ಉಡುಗೊರೆಯಾಗಿ ಕಳುಹಿಸುತ್ತೇನೆ. ಇದನ್ನು ನೋಡಿ (ಬೆರಳನ್ನು ಕತ್ತರಿಸುವಾಗ). ನಾನು ಅದನ್ನು ಮೋದಿ ಸರ್ಕಾರಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇದು ಚೆನ್ನಾಗಿದೆ ಎಂದು ಅನಿಸುತ್ತದೆಯೇ? ನಾನು ಪ್ರತಿದಿನ ನನ್ನ ದೇಹದ ಒಂದು ಭಾಗವನ್ನು ನಿಮಗೆ ಉಡುಗೊರೆಯಾಗಿ ನೀಡುತ್ತೇನೆ . ನಾನು ಪ್ರತಿ ವಾರ ನನ್ನ ದೇಹದ ಒಂದು ಭಾಗವನ್ನು ನಿಮಗೆ ಉಡುಗೊರೆಯಾಗಿ ನೀಡುತ್ತೇನೆ. ಎಂದು ಹೇಳುವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಹಿಂದೂಸ್ಥಾನ್ ಟೈಮ್ಸ್‌ನ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ಮಹಾರಾಷ್ಟ್ರದ ಫಾಲ್ತಾನ್ ಮೂಲದ ಧನಂಜಯ್ ನಾನಾವರೆ ಎಂಬಾತ ತನ್ನ ಸಹೋದರನ ಆತ್ಮಹತ್ಯೆ ಪ್ರಕಣವನ್ನು ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿ ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದಾನೆ ಎಂದು ವರದಿ ಮಾಡಿದೆ.

ತನ್ನ ಸಹೋದರ ನಂದಕುಮಾರ ನಾನಾವರೆ (45) ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ತನ್ನ ಬಲಗೈ ತೋರುಬೆರಳನ್ನು ಕತ್ತರಿಸಿಕೊಂಡು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ ಎಂದುವರದಿಯಲ್ಲಿ ಉಲ್ಲೇಖಿಸಲಾಗಿದೆ.

ತನ್ನ ಸಹೋದರನ ಮೇಲೆ ನಡೆಯುತ್ತಿದ್ದ ಕಿರುಕುಳದ ಬಗ್ಗೆ ಮಾತನಾಡಿರುವ ಧನಂಜಯ್, “ನನ್ನ ಸಹೋದರ ಆತ್ಮಹತ್ಯೆಗೆ ಒಂದು ದಿನದ ಮೊದಲು ವ್ಯಕ್ತಿಯೊಬ್ಬನಿಗೆ ₹ 10 ಲಕ್ಷ ನಗದು ನೀಡಿದ್ದ. ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಸ್ಕ್ಯಾನ್ ಮಾಡುವಾಗ ನನಗೆ ಈ ವಿಷಯ ತಿಳಿಯಿತು. ಆರೋಪಿಗಳು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಕಾರಣ ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕು. “ನನ್ನ ಸಹೋದರನ ಸಾವಿಗೆ ನ್ಯಾಯ ಸಿಗುವವರೆಗೂ ನಾನು ನನ್ನ ದೇಹದ ಭಾಗಗಳನ್ನು ಒಂದೊಂದಾಗಿ ಕತ್ತರಿಸುತ್ತೇನೆ ಎಂದು ನನಗೆ ಇನ್ನೂ ಖಚಿತವಾಗಿದೆ” ಎಂದು ಧನಂಜಯ್ ಹೇಳಿದ್ದಾರೆ,

ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕತ್ತರಿಸಿರುವ ಕೈಬೆರಳನ್ನು  ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಧನಂಜಯ್ ನಾನಾವರೆ ಎಂಬ ವ್ಯಕ್ತಿ ತನ್ನ ಸಹೋದರ ಮತ್ತು ಅತ್ತಿಗೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೋರಿಸುತ್ತಿದ್ದ ನಿರ್ಲಕ್ಷ್ಯದ ಬಗ್ಗೆ ಗಮನ ಸೆಳೆಯುವಂತೆ ಮಾಡಲು ತನ್ನ ಕೈ ಬೆರಳನ್ನು ಕತ್ತರಿಸಿಕೊಂಡಿರುವುದು ಸ್ಪಷ್ಟವಾಗಿದೆ. ಆದರೆ ಇದನ್ನು ಬಿಜೆಪಿಗೆ ಮತ ಹಾಕಿದ್ದರಿಂದ ಆ ವ್ಯಕ್ತಿ ತನ್ನ ಬೆರಳನ್ನು ಕತ್ತರಿಸಿಒಂಡಿದ್ದಾನೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಚಂದ್ರನ ನೆಲದಲ್ಲಿ ಭಾರತದ ಸಿಂಹ ಲಾಂಚನವನ್ನು ಶಾಶ್ವತವಾಗಿ ಮುದ್ರಿಸಿದ ಚಿತ್ರ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights