ಅದಾನಿ ಮಾಲಿಕತ್ವದ ಬಂದರಿನಲ್ಲಿ 20 ಸಾವಿರ ಕೋಟಿ ರೂ. ಮೌಲ್ಯದ ಹೆರಾಯಿನ್ ವಶ!

ತಾಲಿಬಾನ್‌‌‌ ಅಫ್ಘಾನ್‌‌‌ ಅನ್ನು ಸ್ವಾಧೀನಪಡಿಸಿಕೊಂಡ ತಿಂಗಳ ನಂತರ ಅಲ್ಲಿಂದ ಬಂದಿದ್ದ 20 ಸಾವಿರ ಕೋಟಿ ರೂ. ಮೌಲ್ಯದ ಸುಮಾರು ಮೂರು ಟನ್‌ಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದಾನಿ ಮಾಲಕತ್ವದಲ್ಲಿರುವ ಗುಜರಾತ್‌ನ ಮುಂದ್ರಾ ಬಂದರಿನ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಅಫ್ಘಾನಿಸ್ತಾನವು ವಿಶ್ವದ ಅತಿದೊಡ್ಡ ಅಕ್ರಮ ಅಫೀಮು ಪೂರೈಕೆದಾರ ದೇಶವಾಗಿದೆ. ದೇಶವನ್ನು ತಾಲಿಬಾನ್‌ ವಶಪಡಿಸಿದ ನಂತರ ಮಾದಕವಸ್ತು ವ್ಯಾಪಾರವನ್ನು ನಿಷೇಧಿಸಲು ಯೋಜಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಹೇಗೆ ಎಂಬುದರ ಬಗ್ಗೆ ಅವರು ವಿವರಗಳನ್ನು ನೀಡಿಲ್ಲ.

ಮಾದಕ ದ್ರವ್ಯಗಳು ದೆಹಲಿಗೆ ಕಡೆಗೆ ಹೊರಟಿದ್ದವು ಎಂದು ಹೇಳಲಾಗಿದ್ದು, ಸಾಗಾಟಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಗುಜರಾತ್‌ನ ಅಧಿಕಾರಿಯೊಬ್ಬರು ಹೇಳಿದ್ದಾಗಿ ದಿ ವೈರ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ವಿರುದ್ದದ KCOCA ರದ್ದತಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌!

ಭಾರತದ ಉನ್ನತ ಮಟ್ಟದ ಕಳ್ಳಸಾಗಣೆ ವಿರೋಧಿ ಸಂಸ್ಥೆಯಾದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಸೆಪ್ಟೆಂಬರ್ 15 ರಂದು ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಎರಡು ಕಂಟೇನರ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಮಾದಕವಸ್ತುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೇನರ್‌ಗಳನ್ನು ದಕ್ಷಿಣ ಕರಾವಳಿ ನಗರ ವಿಜಯವಾಡದ ಸಂಸ್ಥೆಯಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. “ಇದುವರೆಗೆ ನಡೆಸಿದ ತನಿಖೆಯು ಅಫಘಾನ್ ಪ್ರಜೆಗಳು ಇದರಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

ಗೌತಮ್‌ ಅದಾನಿ ಮಾಲಕತ್ವದ ಅದಾನಿ ಗ್ರೂಪ್ ಮುಂದ್ರಾ ಬಂದರನ್ನು 2012 ರಲ್ಲಿ ತನ್ನ ತೆಕ್ಕೆಗೆ ಪಡೆದಿತ್ತು. ಕಂಪೆನಿಯು ಬಂದರಿನ ಹೆಸರನ್ನು, ‘ಮುಂದ್ರಾ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್’ ನಿಂದ ‘ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್’ ಎಂದು 2012 ಜನವರಿ 6 ರಂದು ಬದಲಾಯಿಸಿತ್ತು.

ಘಟನೆಯ ಬಗ್ಗೆ ಅದಾನಿ ಗ್ರೂಪ್‌ ಸ್ಪಷ್ಟೀಕರಣ ನೀಡಿದ್ದು, ಬಂದರನ್ನು ತಾನು ಕಾರ್ಯಾಚರಣೆ ಮಾತ್ರ ಮಾಡುತ್ತಿದ್ದು, ಬಂದರಿಗೆ ಬರುವ ಸಾಗಣೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: “ಆರ್‌ಎಸ್‌ಎಸ್‌ ನಿಷೇಧ?” ಎಂಬ ಮೂರು ಪ್ರಹಸನಗಳು!; ಸರ್ಕಾರಗಳು ಸಂಘ-ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights