ಇನ್ ಸ್ಟಾಗ್ರಾಮ್ ನಲ್ಲಿ ನಟಿ ಸಂಜನಾ ಆಕ್ಟಿವ್ : ಅಭಿಮಾನಿಗಳಿಗೆ ಹೇಳಿದ್ದೇನು?
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆ ಹೊಂದಿದ ನಟಿ ಸಂಜನಾ ಗಲ್ರಾನಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನು ರವಾನಿಸಿದ್ದಾರೆ.
ಹೌದು.. ಸಂಜನಾ ಜೈಲಿನಿಂದ ಹೊರ ಬಂದು ಒಂದು ತಿಂಗಳು ಕಳೆದ ಬಳಿಕ ಇನ್ ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿದ್ದು ಅಭಿಮಾನಿಗಳಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಆರಂಭದಲ್ಲಿ ತಮ್ಮ ಸಹೋದರಿಯೊಂದಿಗೆ ಫೋಟೋ ಶೇರ್ ಮಾಡಿದ್ದ ಸಂಜನಾ ಸದ್ಯ ಸಂದೇಶವನ್ನು ಹಳುಹಿಸಿದ್ದಾರೆ.
ತಮ್ಮನ್ನು ಪ್ರೀತಿಸುವ, ತಮಗಾಗಿ ಶ್ರಿಮಿಸಿದ ಹಾಗೂ ಪ್ರಾರ್ಥಿಸಿದ ಎಲ್ಲರಿಗೂ ಹೃದಯ ತುಂಬಿ ಧನ್ಯವಾದಗಳು ಎಂದು ಸಂಜನಾ ಬರೆದಿದ್ದಾರೆ. ನಾನು ಬಿಡಿಗಡೆಯಾಗಿ ಬಂದ ಬಳಿಕ ಎಲ್ಲರ ಸಂದೇಶಗಳನ್ನು ನೋಡಿದ್ದೇನೆ. ನನಗೆ ತುಂಬಾ ಪ್ರೀತಿ, ಕಾಳಜಿ ತೋರಿಸಿದ್ದೀರಾ. ನಿಮಗೆಲ್ಲಾ ನಾನು ನನ್ನ ಕುಟುಂಬ ಹಾಗೂ ಸ್ನೇಹಿತರು ಎಷ್ಟು ಕೃತಜ್ಞತೆ ತಿಳಿಸಿದರೂ ಕಡಿಮೆಯೇ. ನನ್ನ ಆರೋಗ್ಯ ಸದ್ಯ ಸುಧಾರಿಸಿದೆ. ಶೀಘ್ರವೇ ಮೊದಲಿನಂತೆ ಸಾಮಾಜಿಕ ಜಾಲತಾಣಕ್ಕೆ ಮರಕಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
2020ರ ಸೆಪ್ಟೆಂಬರ್ 8 ರಂದು ಸ್ಯಾಂಡಲ್ ವುಡ್ ಡ್ರಗ್ ಕೇಸ್ ನಲ್ಲಿ ಭಾಗಿಯಾಗಿದ್ದ ಗಂಡ-ಹೆಂಡತಿ ಸಿನಿಮಾದ ನಟಿ ಸಂಜನಾ ಬೆಂಗಳೂರು ಕೇಂದ್ರ ಅಪರಾಧ ವಿಭಾಗ ಬಂಧಿಸಲಾಗಿತ್ತು. ಡಿಸೆಂಬರ್ 12ಕ್ಕೆ ಅನಾರೋಗ್ಯದ ಕಾರಣ ಹೇಳಿ 90 ದಿನಗಳ ಬಳಿಕ ಜಾಮೀನು ಪಡೆದರು.