ಮೋದಿ ಸರ್ಕಾರದ‌ ದ್ವೇಷದ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಪರ್ಯಾಯ ರಾಜಕಾರಣ ಅಗತ್ಯ: ಯೆಚೂರಿ

ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕಾರಣವನ್ನು ಪ್ರಜಾಪ್ರಭುತ್ವ ರಾಜ್ಯವೊಂದರಲ್ಲಿ ಎದುರಿಸಲು ಪರ್ಯಾಯ ರಾಜಕಾರಣದ ಅವಶ್ಯಕತೆಯಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

“ಪ್ರಧಾನಿ ಮೋದಿ ಅವರು ರಾಮ ಮಂದಿರ ಮತ್ತು ಕೇಂದ್ರ ವಿಸ್ಟಾ ಯೋಜನೆಯನ್ನು ರಾಜ್ಯ ಚುನಾವಣೆಯ ದಾಳವಾಗಿ ಬಳಸಲು ಮುಂದಾಗಿದ್ದಾರೆ. ಇದು ಭಾರತದ ಸಂವಿಧಾನವನ್ನು ಅವಮಾನಿಸಿದಂತೆ. ಅಲ್ಲದೆ, ರಾಜ್ಯದ ಜಾತ್ಯತೀತ ಕಲ್ಯಾಣ ಸಂಸ್ಕೃತಿಯನ್ನು ದೂರ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

“ಪ್ರಜಾಪ್ರಭುತ್ವವಾದಿ ರಾಜ್ಯದಲ್ಲಿ  ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರ ಹಿಡಿಯಲು ಹವಣಿಸುತ್ತಿವೆ. ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ ಮೂಲಕ ತಮ್ಮ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಪರ್ಯಾಯ ರಾಜಕಾರಣದ ಬಲದಿಂದ ಪ್ರತಿದಾಳಿ ನಡೆಸಬೇಕು” ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಮಾಧ್ಯಮಗಳು ಬಿಜೆಪಿ ವರ್ಸಸ್ ತೃಣಮೂಲ ಕಾಂಗ್ರೆಸ್ ಎಂದು ಬಿಂಬಿಸಲು ಮುಂದಾಗಿವೆ. ಈ ಕಾರ್ಪೋರೇಟ್‌ ಮಾಧ್ಯಮಗಳ ಧೋರಣೆಗಳು ಒಂದೇ ಆಗಿವೆ ಎಂದು ಯೆಚೂರಿ ಹೇಳಿದ್ದಾರೆ.


Read Also: 2020ರಲ್ಲಿ ದಾಖಲೆಯ ನಿರುದ್ಯೋಗ ಹಂತಕ್ಕೆ ಭಾರತ; ಮೋದಿ ಸರ್ಕಾರವೆಷ್ಟು ಕಾರಣ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights