ಫ್ಯಾಕ್ಟ್‌ಚೆಕ್ : ಎರಿಟ್ರಿಯಾ ದೇಶದಲ್ಲಿ ಪ್ರತಿಯೊಬ್ಬ ಪುರುಷನು ಕಡ್ಡಾಯವಾಗಿ 2 ಮದುವೆ ಆಗಬೇಕು ಎಂಬುದು ಸುಳ್ಳು

ಆಫ್ರಿಕನ್ ದೇಶವಾದ ಎರಿಟ್ರಿಯಾದಲ್ಲಿ ಪ್ರತಿಯೊಬ್ಬ ಪುರುಷನು ಇಬ್ಬರು ಮಹಿಳೆಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ, ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.

“ಇಷ್ಟ ಇಲ್ಲದಿರಲಿ, ಸುಖ ಇಲ್ಲದಿರಲಿ, ಆದ್ರೆ ಈ ದೇಶದಲ್ಲಿ ಮಾತ್ರ ಪುರುಷರು 2 ಮದುವೆ ಆಗಲೇಬೇಕು. ಮಹಿಳೆಯರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ಏನು ವಿಚಿತ್ರ ಅಲ್ವಾ? ಕೆಲವರು ಒಂದಲ್ಲ 2 ಮದುವೆಯಾಗಲೂ ಸಿದ್ಧರಿರುತ್ತಾರೆ. ಆದ್ರೆ ಕೆಲವರು ಇದಕ್ಕೆ ವಿರುದ್ಧ ಅಂದರೆ ಒಂದೇ ಮದುವೆಯಾಗುತ್ತಾರೆ. ಆದ್ರೆ ಈ ದೇಶದ ಸಂಪ್ರದಾಯವನ್ನು ನೀವು ಕೇಳಿದರೆ ಆಶ್ಚರ್ಯಗೊಳ್ಳುವುದು ಖಂಡಿತ. ಪ್ರತಿಯೊಂದು ದೇಶದಲ್ಲಿ ಮದುವೆಗೆ ಸಂಬಂಧಿಸಿದ ವಿಭಿನ್ನ ಕಾನೂನುಗಳಿವೆ. ಆದ್ರೆ ಈ ದೇಶದಲ್ಲಿ ಮಾತ್ರ ಪುರುಷರು 2 ಮದುವೆಯಾಗುವುದು ಕಡ್ಡಾಯ. ಇದು ಕಾನೂನು ಕೂಡ ಹೌದು. ಇದಕ್ಕೆ ಒಪ್ಪದಿದ್ದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಾಗಿದ್ದರೆ ವೈರಲ್  ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆಯ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಂಬಂಧಿತ ಕೀವರ್ಡ್‌ಗಳೊಂದಿಗೆ  ಗೂಗಲ್ ಸರ್ಚ್ ಮಾಡದಾಗ, 2016 ರಲ್ಲಿ ಹಂಚಿಕೊಳ್ಳಲಾದ ಈ ಕಥೆಯ ಕುರಿತು ಕೆಲವು ಮಾಧ್ಯಮ ವರದಿಗಳು ಲಭ್ಯವಾಗವೆ. BBC ಯ ವರದಿಯ ಪ್ರಕಾರ, ಈ ವಂಚನೆಯ ಕಥೆಯನ್ನು ಮೊದಲು ಕೀನ್ಯಾದ Crazy Monday ಎಂಬ ವಿಡಂಬನಾತ್ಮಕ ಅಂಕಣದಿಂದ ಪ್ರಕಟಿಸಲಾಗಿದೆ. ಈ ಕಥೆಯು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿದೆ. ಈ ಕಥೆಯ ಕುರಿತು ಕೆಲವು ಇತರ ಮಾಧ್ಯಮ ವರದಿಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ಓದಬಹುದು.

ಎರಿಟ್ರಿಯನ್ ಸರ್ಕಾರದ ಪ್ರತಿಕ್ರಿಯೆ

2016 ರಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಎರಿಟ್ರಿಯಾದ ಮಾಹಿತಿ ಸಚಿವ ಯೆಮನ್ ಜಿ. ಮೆಸ್ಕೆಲ್, “ಕಡ್ಡಾಯ ಬಹುಪತ್ನಿತ್ವದ ಕುರಿತಾದ ಮುಫ್ತಿಯವರ ಊಹೆಯ ಧಾರ್ಮಿಕ ತೀರ್ಪಿನ  ಹಾಸ್ಯಾಸ್ಪದ, ಇದು ಕಟ್ಟುಕಥೆಯಾಗಿದ್ದು ಮಾಧ್ಯಮಗಳು ವೈಭವೀಕರಿಸಿ ಸುಖಿಸುತ್ತಿವೆ” ಎಂದು ಹೇಳಿದ್ದಾರೆ. ಎರಿಟ್ರಿಯಾದ ಮತ್ತೊಬ್ಬ ಅಧಿಕಾರಿ [ಎರಿಟ್ರಿಯನ್ ರಾಜಧಾನಿ] “ಅಸ್ಮಾರಾದಲ್ಲಿ ಒಬ್ಬ ಹುಚ್ಚನಿಗೆ ಈ ಕಥೆ ನಿಜವಲ್ಲ ಎಂದು ತಿಳಿಯುತ್ತದೆ ಆದರೆ ಈ ಮಾಧ್ಯಮಗಳಿಗೆ ತಿಳಿಯುವುದಿಲ್ಲವೆ ? ಎಂದು ಹೇಳಿರುವುದನ್ನು, BBC ವರದಿ ಮಾಡಿದೆ.

ಎರಿಟ್ರಿಯಾದ ದಂಡಸಂಹಿತೆಯ ಪ್ರಕಾರ, ಬಹುಪತ್ನಿತ್ವ ಕಾನೂನುಬಾಹಿರವಾಗಿದೆ. ಈ ಕಥೆಯು ಕಟ್ಟುಕತೆಯಾಗಿದ್ದು , ಒಬ್ಬ ಪುರುಷ ಕಡ್ಡಾಯವಾಗಿ ಇಬ್ಬತು ಮಹಿಳೆಯರನ್ನು ಮದುವೆಯಾಗಲೇಬೇಕು ಎನ್ನುವ ಯಾವ ಕಾನೂನು ಇಲ್ಲ. ಇದೊಂದು ಹಳೆಯ ಕಥೆಯನ್ನು ಈಗ ಮತ್ತೆ ನಿಜವಾದ ಘಟನೆ ಎಂಬಂತೆ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎರಿಟ್ರಿಯಾದಲ್ಲಿ ಬಹುಪತ್ನಿತ್ವವನ್ನು ಕಾನೂನುಬದ್ಧಗೊಳಿಸಲಾಗಿಲ್ಲ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕಥೆಯು ಕಟ್ಟುಕಥೆಯಾಗಿದೆ. ಈ ಕಥೆ 2016 ರಲ್ಲಿ ಹೆಚ್ಚು ಈ ಕಥೆ ಹೆಚ್ಚು ಪ್ರಚಾರಗೊಂಡಾಗ, ಎರಿಟ್ರಿಯನ್ ಸರ್ಕಾರವು ಪ್ರತಿಕ್ರಿಯೆ ನೀಡಿ ಈ ಕಥೆ ಸುಳ್ಳು ಎಂದು ಹೇಳಿತ್ತು. ಎರಿಟ್ರಿಯಾದ ದಂಡಸಂಹಿತೆಯ ಪ್ರಕಾರ, ಬಹುಪತ್ನಿತ್ವ ಕಾನೂನುಬಾಹಿರವಾಗಿದೆ. ಈ ಕಥೆಯು ಕಟ್ಟುಕತೆಯಾಗಿದ್ದು , ಈಗ ಮತ್ತೆ ನಿಜವಾದ ಘಟನೆ ಎಂಬಂತೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕ್‌ನಲ್ಲಿ ಪ್ರವಾಹ ಎಂದು, ಜಪಾನ್‌ನ ಹಳೆಯ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights