ರಿಯಲ್ ಹೀರೋ ಸೋನು ಸೂದ್ ನಟಿಸಲಿರುವ ಚಿತ್ರದ ಹೆಸರು ಇದೇ ನೋಡಿ…!

ಕೊರೊನಾ ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದ ನಟ ಸೋನು ಸೂದ್ ನಟಿಸಲಿರುವ ಮುಂದಿನ ಚಿತ್ರದ ಹೆಸರು ರಿವೀಲ್ ಮಾಡಲಾಗಿದೆ. ನಟ ಸೋನು ಸೂದ್ ಮುಂದಿನ ಬಾಲಿವುಡ್ ಚಿತ್ರ ‘ಕಿಸಾನ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶೂಲ್ ಖ್ಯಾತಿಯ ‘ಈ ನಿವಾಸ್’ ನಿರ್ದೇಶಿಸಲಿದ್ದಾರೆ.

ಕಿಸಾನ್ ನಿರ್ಮಾಣ ಮಾಡಲಿರುವ ಡ್ರೀಮ್ ಗರ್ಲ್ ನಿರ್ದೇಶಕ ರಾಜ್ ಶಾಂಡಿಲ್ಯ ಅವರು ಈ ಹೆಸರನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ. ರೈತರನ್ನು ನಮ್ಮ ದೇಶದ ಹೆಮ್ಮೆ ಎಂದು ಕರೆದ ಅವರು ತಾವು ‘ಕಿಸಾನ್’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಬಹಿರಂಗಗೊಳಿಸಿದ್ದಾರೆ.

ಚಿತ್ರ ಘೋಷಣೆಯ ನಂತರ ತಂಡಕ್ಕೆ ಶುಭ ಹಾರೈಸಿದ ಮೊದಲ ನಟರಲ್ಲಿ ಅಮಿತಾಬ್ ಬಚ್ಚನ್ ಒಬ್ಬರು. “# ಕಿನಾನ್ ಚಿತ್ರಕ್ಕೆ ಶುಭಾಶಯಗಳು#” ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಸೂದ್ “ತುಂಬಾ ಧನ್ಯವಾದಗಳು ಸರ್” ಎಂದು ಉತ್ತರಿಸಿದ್ದಾರೆ.

https://twitter.com/SonuSood/status/1345978327752957953?ref_src=twsrc%5Etfw%7Ctwcamp%5Etweetembed%7Ctwterm%5E1345978327752957953%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Fentertainment%2Fbollywood%2Fsonu-sood-to-star-in-a-film-titled-kisaan-7132075%2F

ಕೊರೋನವೈರಸ್-ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಅವರ ಲೋಕೋಪಕಾರಿ ಕೆಲಸದಿಂದಾಗಿ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳೊಂದಿಗೆ ಅವರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ ಎಂದು ಈ ಹಿಂದೆ ಸೋನು ಸೂದ್ ಹೇಳಿದ್ದರು. ಅದರಂತೆ ವಿಭಿನ್ನ ಹೆಸರಿನ ಚಿತ್ರ ಸೂನು ಸೂದ್ ನಟನೆಯಲ್ಲಿ ತೆರೆ ಕಾಣಲು ಸಿದ್ದವಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights