12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ!

ಕ್ಲಿನಿಕಲ್ ಟ್ರಯಲ್ ಮೋಡ್ ನಲ್ಲಿ ಮಾತ್ರ ಕೋವಿಡ್ -19 ಲಸಿಕೆ ನೀಡಲು ತುರ್ತು ಅನುಮೋದನೆ ಪಡೆದ ಭಾರತ್ ಬಯೋಟೆಕ್, 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಮೇಲೆ ತನ್ನ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಲಸಿಕೆಯನ್ನು ಈಗಾಗಲೇ ಕೊನೆಯ ಸುತ್ತಿನಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಬಳಸಲಾಗಿದ್ದು ಇದು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

ಇಲ್ಲಿಯವರೆಗೆ ವ್ಯಾಕ್ಸಿನೇಷನ್ ಡ್ರೈವ್ ವಯಸ್ಕರಿಗೆ ಮಾತ್ರ ಉದ್ದೇಶಿಸಲಾಗಿದೆ ಎಂದು ಸರ್ಕಾರ ಹೇಳಿದೆ ಆದರೆ ಸಾಕಷ್ಟು ಡೇಟಾ ಇದ್ದರೆ ಭವಿಷ್ಯದಲ್ಲಿ ಇದನ್ನು ಮಕ್ಕಳಿಗೆ ಸಂಪೂರ್ಣವಾಗಿ ವಿಸ್ತರಿಸಬಹುದು ಎಂಬ ಭರವಸೆ ನೀಡಿದೆ. ಹೀಗಾಗಿ 12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ ಸಿಕ್ಕಂತಾಗಿದೆ.

ಇನ್ನೂ ಕೋವಾಕ್ಸಿನ್‌ನ ತುರ್ತು ಅನುಮೋದನೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್‌ಗಿಂತ ಭಿನ್ನವಾಗಿದೆ. ಏಕೆಂದರೆ ಕೋವಾಕ್ಸಿನ್ ಬಳಕೆ ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿರುತ್ತದೆ. ಪ್ರಯೋಗದಲ್ಲಿ ಭಾಗವಹಿಸುವ ಜನರಿಗೆ ಲಸಿಕೆ ನೀಡಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ನಿನ್ನೆ ಸ್ಪಷ್ಟಪಡಿಸಿದ್ದರು.

ಆದರೆ ಕೊವಾಕ್ಸಿನ್‌ಗೆ ಸರ್ಕಾರದ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಇದು ಇನ್ನೂ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿಲ್ಲ. ಪರಿಣಾಮಕಾರಿತ್ವದ ಬಗ್ಗೆ ಡೇಟಾವನ್ನು ಹೊಂದಿಲ್ಲ. ಹೀಗಾಗಿ ಇದು ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ.

ಕ್ಲಿನಿಕಲ್ ಪ್ರಯೋಗಗಳು ಮುಗಿಯುವವರೆಗೂ ಅದರ ಬಳಕೆಯನ್ನು ತಪ್ಪಿಸಬೇಕು ಎಂಬ ಕಾಂಗ್ರೆಸ್ ಬೇಡಿಕೆಗೆ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಪಕ್ಷವು “ನಿರ್ಣಾಯಕ ವಿಷಯ” ವನ್ನು ರಾಜಕೀಯಗೊಳಿಸುತ್ತಿದೆ. ಲಸಿಕೆಗೆ ಅನುಮೋದನೆ ನೀಡಲು “ವಿಜ್ಞಾನ ಬೆಂಬಲಿತ ಪ್ರೋಟೋಕಾಲ್” ಗಳನ್ನು ಅನುಸರಿಸಲಾಗಿದೆ ಎಂದು ಹೇಳಿದ್ದಾರೆ. ಕೋವಾಕ್ಸಿನ್, ಯುಕೆನಲ್ಲಿ ಹೊರಹೊಮ್ಮಿದಂತೆಯೇ ವೈರಸ್ನ ರೂಪಾಂತರಿತ ತಳಿಗಳ ವಿರುದ್ಧ ಕೆಲಸ ಮಾಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights