ಉದ್ಧವ್ ಠಾಕ್ರೆ ಉದ್ದಟತನದ ಟ್ವೀಟ್ಗೆ ಪ್ರಜ್ಞಾವಂತ ಮರಾಠಿಗರಿಂದಲೇ ಪ್ರತ್ಯುತ್ತರ…!

ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಟ್ವೀಟ್ಗೆ ಸದ್ಯ ಪ್ರಜ್ಞಾವಂತ ಮರಾಠಿಗರಿಂದಲೇ ಪ್ರತ್ಯುತ್ತರ ನೀಡಿದ್ದಾರೆ.

‘ಬೆಳಗಾವಿ ನಮ್ಮದಾಗುವವರೆಗೂ ಹೋರಾಡೋಣ’ ಎನ್ನುವ ಟ್ವೀಟ್ ಮಾಡಿ ಶಾಂತವಾಗಿದ್ದ ಕನ್ನಡಿಗರನ್ನು ಕೆರಳಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪ್ರಜ್ಞಾವಂತ ಮರಾಠಿಗರೇ ಪ್ರತ್ಯುತ್ತರ ಕೊಟ್ಟಿದ್ದಾರೆ. ‘ಮಹಾರಾಷ್ಟ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಸಾಕಷ್ಟು ನಿರುದ್ಯೋಗಿಗಳಿದ್ದಾರೆ ಮಹಾರಾಷ್ಟ್ರ ಸಿಎಂ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕು’ ಎಂದು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ ಮರಾಠಿ ಭಾಷಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಹೇಳಿಕೆಯನ್ನು ನೀಡಿದ ಶಿವಸೇನೆ ಪುಂಡರ ಘೋಷಣೆ ಮತ್ತು ಉದ್ಧವ್ ಠಾಕ್ರೆ ಟ್ವೀಟ್ ವಿರುದ್ಧ ವಾಟಾಳ್ ನಾಗರಾಜ್ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್, ” ಮರಾಠ ಅಭಿವೃದ್ಧಿ ನಿಗಮವನ್ನು ತೆಗೆದು ಹಾಕಿ. ಇಲ್ಲವಾದರೆ ಫೆ21ಕ್ಕೆ ಒಂದು ಲಕ್ಷ ಜನ ಬೆಳಗಾವಿಗೆ ಹೋಗುತ್ತೇವೆ. ನಾವೂ ಮಹಾರಾಷ್ಟ್ರ ಗಡಿಯನ್ನು ನುಗ್ಗುತ್ತೇವೆ. ನೀವು ಹೇಗೆ ನಮ್ಮ ಬೆಳಗಾವಿಗೆ ಬಂದ್ರೋ ಹಾಗೇ ನಾವು ನುಗ್ಗುತ್ತೇವೆ. ಸರ್ಕಾರ ಎಂಇಎಸ್ ನಿಷೇದ ಮಾಡಬೇಕು.” ಎಂದು ಆಗ್ರಹಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights