ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಊಹಾಪೋಹಗಳಿಗೆ ತೆರೆ ಎಳೆದ ಮೋದಿ..!

ದೇಶದಲ್ಲಿರುವ ಮೋದಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಟ್ವೀಟ್ ನ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಹೌದು… ಮೋದಿ ಅವರು ಸೋಷಿಯಲ್ ಮೀಡಿಯದಿಂದ ಖಾತೆಗಳನ್ನೆಲ್ಲಾ ಬಿಡಲಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರಧಾನಿ ಮೋದಿಯವರೇ ಉತ್ತರ ಕೊಟ್ಟಿದ್ಧಾರೆ. ನಾನು ನನ್ನ ಸಾಮಾಜಿಕ ಜಾಲತಾಣದ ಖಾತೆಗಳನ್ನು ಬಿಟ್ಟುಕೊಡ್ತಿದ್ದೇನೆ. ಆದ್ರೆ, ಒಂದು ದಿನದ ಮಟ್ಟಿಗೆ ಎಂದಿರುವ ಪ್ರಧಾನಿ ಮೋದಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಿಳೆಯರಿಗೆ, ಸ್ಫೂರ್ತಿದಾಯಕವಾಗಿ ಬದುಕಿದ ಮಹಿಳೆಯರಿಗಾಗಿ ಒಂದು ದಿನ ಮಟ್ಟಿಗೆ ನಾನು ನನ್ನ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಗಳನ್ನು ಬಿಟ್ಟುಕೊಡ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಕೂಡಾ ಮಾಡಿರುವ ಪ್ರಧಾನಿ ಮೋದಿ, ಆ ರೀತಿಯ ಸಾಧಕ ಮಹಿಳೆಯರ ಪೈಕಿ ನೀವು ಒಬ್ಬರಾ..? ಅಥವಾ ಸ್ಫೂರ್ತಿದಾಯಕ ಮಹಿಳೆಯರನ್ನು ನೀವು ಬಲ್ಲಿರಾ..? ಹಾಗಾದ್ರೆ, ಅವರ ಕಥೆಯನ್ನು, ಅವರ ಸಾಧನೆಯನ್ನು #ShelnspiresUs ಎಂಬ ಹ್ಯಾಷ್‌ ಟ್ಯಾಗ್ ಅಡಿ ನನಗೆ ಶೇರ್ ಮಾಡಿ ಎಂದು ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights