ಮೊಬೈಲ್ ನುಂಗಿ ಆರು ತಿಂಗಳು ಹೊಟ್ಟಯಲ್ಲಿ ಇಟ್ಟುಕೊಂಡಿದ್ದ ಭೂಪ; ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು!

ವ್ಯಕ್ತಿಯೋರ್ವ ಮೊಬೈಲ್ ನುಂಗಿದ್ದು, ಬರೋಬ್ಬರಿ 6 ತಿಂಗಳು ಹೊಟ್ಟೆಯಲ್ಲಿಯೇ ಇಟ್ಟುಕೊಂಡು ಬದುಕಿದ್ದಾನೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮೊಬೈಲ್ಅನ್ನು ಹೊರತೆಗೆದಿದ್ದಾರೆ. ಈ ಘಟನೆ

ಈಜಿಪ್ಟ್​ನಲ್ಲಿ ನಡೆದಿದೆ.

ವಿಪರೀತ ಹೊಟ್ಟೆನೋವೆಂದು ಡಾಕ್ಟರ್ ಬಳಿ ವ್ಯಕ್ತಿಯೋರ್ವ ಬಂದಿದ್ದ, ನಂತರ ಎಕ್ಸ್​ರೇ ತೆಗೆದು ನೋಡಿದ ವೈದ್ಯರಿಗೆ ಬಿಗ್ ಶಾಕ್ ಎದುರಾಗಿತ್ತು. ಯಾಕೆಂದರೆ ಆತನ ಹೊಟ್ಟೆಯಲ್ಲಿ ಒಂದು ಮೊಬೈಲ್ ಫೋನ್ ಇತ್ತು, ಆತ ಮೊಬೈಲನ್ನು ನುಂಗಿದ 6 ತಿಂಗಳ ಬಳಿಕ ಆತನ ಹೊಟ್ಟೆಯಿಂದ ಆಪರೇಷನ್ ಮೂಲಕ ಮೊಬೈಲನ್ನು ಹೊರಗೆ ತೆಗೆಯಲಾಗಿದೆ.

ಮೊಬೈಲನ್ನು ನುಂಗಿದ ನಂತರ ವೈದ್ಯರ ಬಳಿ ಹೋಗಲು ಮುಜುಗರನಾಗಿ ಸುಮ್ಮನಿದ್ದ. ಆ ಮೊಬೈಲ್ ತನ್ನಷ್ಟಕ್ಕೆ ತಾನೇ ದೇಹದಿಂದ ಹೊರಗೆ ಹೋಗುತ್ತದೆ ಎಂದು ಆತ ಭಾವಿಸಿದ್ದ. ಆದರೆ, ಹೊಟ್ಟೆಯಲ್ಲಿದ್ದ ಮೊಬೈಲ್​ನಿಂದಾಗಿ ಆತನಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು, ನೋವು ತಾಳಲಾರದೇ ಆಸ್ಪತ್ರೆಗೆ ಹೋಗಿ ಎಕ್ಸ್ ರೇ ಮಾಡಿಸಿದ್ದಾನೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights