ಪ್ರತ್ಯೇಕ ಪ್ರಕರಣ: ಅಪ್ರಾಪ್ತ ಬಾಲಕಿ ಮೇಲೆ ಪ್ರೇಮಿಯಿಂದ; ನಾಲ್ಕು ವರ್ಷದ ಮಗು ಮೇಲೆ ಕಾಮುಕನಿಂದ ಅತ್ಯಾಚಾರ

ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳಿಂದ ತೆಲಂಗಾಣ ರಾಜಧಾನಿ ಹೈದರಾಬಾದ್‌ ಬೆಚ್ಚಿ ಬಿದ್ದಿದೆ. ಕಾಮುಕ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ನಾಲ್ಕು ವರ್ಷದ ಮಗು ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಅಮಾನುಷ ಘಟನೆಗಳು ಹೈದರಾಬಾದ್‌ನಲ್ಲಿ ನಡೆದಿದೆ.

ಅಕ್ಟೋಬರ್ 15ರಂದು ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

23 ವರ್ಷದ ಆರೋಪಿ ಮಗುವಿನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ. ಆತ ಹಲವು ವರ್ಷಗಳಿಂದ ಮಗುವಿನ ಮನೆಯವರಿಗೆ ಪರಿಚಿತನಾಗಿದ್ದ. ಆಗಾಗ ಅವರ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಮಗು ಆಟವಾಡುತ್ತಿರುವಾಗ ಚಾಕಲೇಟ್ ಕೊಡಿಸುವುದಾಗಿ ಕೊರೆದೊಯ್ದು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಾರಿಗೂ ಹೇಳದಂತೆ ಬೆದರಿಸಿ, ಆಕೆಯನ್ನು ವಾಪಸ್​ ಕಳಿಸಿದ್ದಾನೆ.

ಘಟನೆ ನಡೆದ ಕೆಲವು ದಿನಗಳ ನಂತರ ಮಗುವಿನ ಕುಟುಂಬ ತಮ್ಮ ಊರಿಗೆ ಹೋಗಿದ್ದಾರೆ. ಆಗ ಮಗು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೋಷಕರಿಗೆ ಹೇಳಿಕೊಂಡಿದೆ. ನಂತರ, ಕುಟುಂಬಸ್ಥರು ಹೈದರಾಬಾದ್‌ಗೆ ಹಿಂದಿರುಗಿ ಕಾಮುಕ ಯುವಕನ ವಿರುದ್ದ ದೂರು ನೀಡಿದ್ದಾರೆ.

ದೂರು ದಾಖಸಿಕೊಂಡ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಅಪ್ರಾಪ್ತ ಪ್ರೇಯಸಿಯ ಮೇಲೆ ಪ್ರಿಯಕರನಿಂದ ಅತ್ಯಾಚಾರ: 

ಮದುವೆಯಾಗುವಾಗಿ ನಂಬಿಸಿ ಅಪ್ರಾಪ್ತ ಪ್ರೇಯಸಿಯನ್ನು ದೈಹಿಕವಾಗಿ ಬಳಸಿಕೊಂಡಿರುವ ಕಾಮುಕ ಪ್ರೇಮಿಯೊಬ್ಬ ಆಕೆಗೆ ಮೋಸ ಮಾಡಿರುವ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮತ್ತು ಸಂತ್ರಸ್ಥೆ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಸಂತ್ರಸ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆಕೆಗೆ ಮದುವೆಗೂ ಮುನ್ನವೇ ದೈಹಿಕ ಸಂಪರ್ಕ ಇಷ್ಟವಿಲ್ಲದಿದ್ದರೂ, ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.

ಇಬ್ಬರೂ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದು, ಬಾಲಕಿ ಇನ್ನೂ ಅಪ್ರಾಪ್ತೆಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು; ಮಹಿಳಾ ಸೇನಾ ಅಧಿಕಾರಿಗಳಿಗೆ ಖಾಯಂ ಆಯೋಗ ರಚನೆಗೆ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights