ತಮ್ಮ ವೈಫಲ್ಯ ಮರೆಮಾಚಲು ಸರ್ಕಾರದಿಂದ ಅಸಂವಿಧಾನಿಕ ಕಾನೂನು ಜಾರಿ – ಯು.ಟಿ. ಖಾದರ್

ತಮ್ಮ ವೈಫಲ್ಯಗಳನ್ನು ಮರೆಮಾಚಲು ಕೇಂದ್ರ ಸರ್ಕಾರ ಅಸಂವಿಧಾನಿಕ ಕಾನೂನು ಜಾರಿಗೆ ತಂದಿದೆ ಎಂದು ಕೊಪ್ಪಳದ ಕುಷ್ಟಗಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಹರಿಹಾಯ್ದಿದ್ದಾರೆ.

ಜನರ ಭಾವನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಜಾತಿ-ಧರ್ಮದ ಹೆಸರಿನಲ್ಲಿ ಕಾಯಿದೆ ರೂಪಿಸುತ್ತಿರುವ ಕೇಂದ್ರ ಸರ್ಕಾರ, ದೇಶದ ಜನರನ್ನು ವೈರಿಗಳಂತೆ ಕಾಣುತ್ತಿದೆ. ಕಾಯಿದೆ ಜಾರಿಯಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ.

ಪಾಕಿಸ್ತಾನದತ್ತ ಬೆರಳು ಮಾಡಿ ತೋರಿಸಿ ಮತ ಪಡೆಯುವುದು ಬಿಜೆಪಿಗೆ ಅನಿವಾರ್ಯ. ಪಾಕಿಸ್ತಾನಕ್ಕೆ ಹೋಗಿ ಬರುವುದು, ಬಸ್ ಆರಂಭ ಇತ್ಯಾದಿ ನೋಡಿದರೆ ಬಿಜೆಪಿಯವರಿಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬುದು ಗೊತ್ತಾಗುತ್ತದೆ. ಪೌರತ್ವ ಕಾಯ್ದೆ ಜಾರಿ ವಿರುದ್ಧದ ಹೋರಾಟದಲ್ಲಿ ನಾನು ಗಲ್ಲಿಗೂ ಸಿದ್ಧನಿದ್ದೇನೆ ಎಂದ ಮಾಜಿ ಸಚಿವ ಖಾದರ್ ಆಕ್ರೋಶ ಹೊರಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights