ಉತ್ತರಾಖಂಡ ಹಿಮದುರಂತ: ಚಾರಣಿಗರ ಸಾವಿನ ಸಂಖ್ಯೆ 11ಕ್ಕೆ ಏರಿಕೆ; ಉಳಿದವರಿಗೆ ಹುಡುಕಾಟ

ಪ್ರತಿಕೂಲ ಹವಮಾನದಿಂದಾಗಿ ಉತ್ತರಾಖಂಡದಲ್ಲಿ ಉಂಟಾದ ಮೇಘಸ್ಪೋಟದಲ್ಲಿ ನಾಪತ್ತೆಯಾಗಿದ್ದ ಚಾರಣಿಗರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅ.18 ರಂದು ಉಂಟಾದ ಹಿಮದುರಂತದಲ್ಲಿ 17 ಚಾರಣಿಗರು ನಾಪತ್ತೆಯಾಗಿದ್ದರು. ಅವರ 07 ಮಂದಿ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ತಿಳಿದು ಬಂದಿತ್ತು. ನಿನ್ನೆ ಮತ್ತಿಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಇಂದು ಇನ್ನಿಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆಗೆ 11 ಏರಿಕೆಯಾಗಿದೆ.

ಕಾಣೆಯಾಗಿದ್ದವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. 11 ಮಂದಿ ಸಾವನಪ್ಪಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.

ಗುರುವಾರ ರಕ್ಷಿಸಲಾಗಿದ್ದ ಇಬ್ಬರು ಚಾರಣಿಗರಿಗೆ ಗಾಯಗಳಾಗಿದ್ದು, ಅವರನ್ನು ಹರ್ಸಿಲ್ ಮತ್ತು ಉತ್ತರಕಾಶಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ತೆಯಾಗದ ನಾಲ್ಕು ಜನರನ್ನು ಹುಡುಕಲು ಭಾರತೀಯ ವಾಯುಪಡೆಯು ಲಂಖಗಾ ಪಾಸ್‌ನ 17,000 ಅಡಿ ಎತ್ತರದಲ್ಲಿ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಹೃದಯಾಘಾತ; ಪ್ರಯಾಣಿಕ ಸಾವು

Spread the love

Leave a Reply

Your email address will not be published. Required fields are marked *