ಮೇ 3ರ ವರೆಗೆ ಲಾಕ್‌ಡೌನ್‌ ಮುಂದೂಡಿರುವ ಮೋದಿ ಭಾಷಣದ ಮುಖ್ಯಾಂಶಗಳು

ದೇಶದ್ಯಂತ 21 ದಿನಗಳ ಕಾಲ ವಿಧಿಸಲಾಗಿದ್ದ ಲಾಕ್‌ಡೌನ್‌ ಇಂದಿಗೆ ಕೊನೆಯಾಗಿದೆ. ಲಾಕ್‌ಡೌನ್ ಇನ್ನೆರಡು ವಾರ ವಿಸ್ತರಿಸಬೇಕು ಎಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದ್ದರು. ಏಪ್ರಲ್ 14ರ ನಂತರ ಹಲವಾರು ಬದಲಾವಣೆಗಳಾಗಲಿವೆ, ಲಾಕ್‌ಡೌನ್‌ ಸಡಿಲಿಕೆಯಾಗಲಿದೆ ಎಂಬ ಹಲವಾರು ಚರ್ಚೆಗಳು ಸಾರ್ವಜನಿಕರಲ್ಲಿ ಗೊಂದಲ ಮೂಢಿಸಿತ್ತು. ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿರುವ ಮೋದಿಯವರು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

ಮೇ 03ನೇ ತಾರೀಖಿನವರೆಗೆ ಲಾಕ್‌ಡೌನ್‌ ವಿಸ್ತರಿಸಲಾಗಿದ್ದು,  ಎರಡನೇ ಹಂತದ ಲಾಕ್‌ಡೌನ್ (2.0) ಹೇಗಿರುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸುತ್ತಿದ್ದಾರೆ.

 

ಮೋದಿ ಭಾಷಣದ ಮುಖ್ಯಾಂಶಗಳು:

ನಿಮ್ಮ ಸಹಕಾರದಿಂದ ಕೊರೊನಾ ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಅನುಕೂಲವಾಗಿದೆ.

ಸಾಮೂಹಿಕ ಶಕ್ತಿಯ ಪ್ರದರ್ಶನದ ಸಂಕಲ್ಪವೇ ಬಾಬಾ ಸಾಹೇಬರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ.

ಉತ್ಸವದಿಂದ ಭಾರತ ತುಂಬಿದೆ , ಸದಾ ಹಸಿರಾಗಿದೆ . ವಿಷು , ಬೈಸಾಖಿ ಮುಂತಾದ ಹೊಸ ವರ್ಷದ ದಿನ ಇಂದು ಆರೋಗ್ಯಕ್ಕಾಗಿ ಪ್ರಾರ್ಥಿಸಿ ನಿಮಗೆಲ್ಲರಿಗೂ ಮಂಗಳ ಕಾಮನೆಗಳು.

ಸೋಂಕು ಪ್ರಕರಣಗಳು 550 ದಾಖಲಾಗಿದ್ದಾಗಲೇ 21 ದಿನಗಳ ಲಾಕ್‌ಡೌನ್ ಘೋಷಿಸಲಾಯಿತು. ಇದು ಭಾರಿ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿತು.

ಬೇರೆ ದೇಶಗಳಲ್ಲಿನ ಹಾನಿ ಗಮನಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ 25-30 ಪಟ್ಟು ಅಧಿಕವಾಗಿದೆ. ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ನಾವು ಈ ಸ್ಥಿತಿಯಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ.

ರಾಜ್ಯ ಸರ್ಕಾರಗಳು , ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ವಿರುದ್ಧ ಯುದ್ಧ ಮುಂದುವರಿಸುವುದು ಹೇಗೆ ಎಂಬ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.

ಲಾಕ್ಡೌನ್ 3 ಮೇ ವರೆಗೆ ವಿಸರಣೆ; ಕೊರೋನಾ ಹೊಸ ಪ್ರದೇಶಕ್ಕೆ ಹೋಗಲು ಬಿಡಲೇಬಾರದು ಎಂದು ಆಗ್ರಹಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಾಟ್‌ಸ್ಕಾನ್‌ಗಳಲ್ಲಿ ಹಿಂದಿಗಿಂತಲು ಹೆಚ್ಚಿನ ಗಮನ, ಕಟ್ಟುನಿಟ್ಟಾಗಬೇಕು.

ಕೊರೋನಾ ಹಾಟ್‌ಸ್ಪಾಟ್ ಆಗಿ ಪರಿಣಮಿಸುವ ಪ್ರದೇಶಗಳನ್ನೂ ಗುರುತಿಸಿ ಕಠೋರ ಕ್ರಮವಹಿಸಬೇಕಿದೆ.

ಏಪ್ರಿಲ್ 20ರ ವರೆಗೆ ಎಲ್ಲ ರಾಜ್ಯ, ಊರುಗಳಲ್ಲಿ ಕಟ್ಟು ನಿಟ್ಟಿನ ಗಮನವಹಿಸಬೇಕು. ಈ ಅಗಿ, ಪರೀಕ್ಷೆಯಲ್ಲಿ ಸಫಲವಾಗುವ ಹಾಟ್‌ಸ್ಪಾಟ್‌ಗಳಿಗೆ ಕೊಂಚ ಸಡಿಲಿಕೆ ನೀಡಲಾಗುತ್ತದೆ. ಅತ್ಯಗತ್ಯ ವಿಷಯಗಳಿಗೆ ಮಾತ್ರ ಅನುಮತಿ ದೊರೆಯಲಿದೆ. ಆದರೆ, ಅದು ಕಟ್ಟುನಿಟ್ಟಾಗಿರುತ್ತದೆ.

ನಾಳೆ (ಏಪ್ರಿಲ್ 15) ಸರ್ಕಾರವು ವಿಸ್ತ್ರತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ.

ದಿನಗೂಲಿ ನೌಕರರು, ಬಡವರಿಗೆ ಆದ್ಯತೆ ನೀಡಿ, ಅವರ ಜೀವನ ಸುಧಾರಿಸಲು ಕ್ರಮ. ರಾವಿ ಬೆಳೆಯ ಈ ಋತುವಿನ ಸಂದರ್ಭದಲ್ಲಿ ರೈತರಿಗೆ ಸಂಕಷ್ಟ ಕಡಿಮೆಯಾಗಲು ಕ್ರಮವಹಿಸಾಲಿದೆ. ಆ ಕುರಿತು ಮಾರ್ಗದರ್ಶಿ ಸೂತ್ರದಲ್ಲಿ ವಿವರಣೆ ನೀಡಲಾಗುತ್ತದೆ.

ಈಗಾಗಲೇ ಇರುವ 600ಕ್ಕೂ ಹೆಚ್ಚು ಕೊವಿಡ್ ಆಸ್ಪತ್ರೆಗಳ ಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights