ಕಿನ್ನೌರ್ ಭೂಕುಸಿತ : ಸಾವಿನ ಸಂಖ್ಯೆ 13ಕ್ಕೇರಿಕೆ – ಮುಂದುರೆದ ರಕ್ಷಣಾ ಕಾರ್ಯ!

ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ ಭಾರೀ ಭೂಕುಸಿತದಿಂದಾಗಿ ಸಾವಿನ ಸಂಖ್ಯೆ 13 ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮಂದುವರೆದಿದೆ. ನಾಪತ್ತೆಯಾದ ಕಾರಿನ ಪ್ರಯಾಣಿಕರ ಶೋಧ ಕಾರ್ಯ ನಡೆದಿದೆ.

ಕಿನ್ನೌರ್ ಭೂಕುಸಿತದ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಇಂದು ಬೆಳಿಗ್ಗೆ 6 ಗಂಟೆಗೆ ಮತ್ತೆ ಪುನರಾರಂಭಗೊಂಡಿದೆ. ಘಟನಾ ಸ್ಥಳದಿಂದ ಇಂದು ಬೆಳಿಗ್ಗೆ ಮತ್ತೆ ಎರಡು ಶವಗಳನ್ನು  ಅವಶೇಷಗಳಿಂದ ಹೊರತೆಗೆಯಲಾಗಿದ್ದು ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ರಾಜ್ಯ ಸಾರಿಗೆ ಬಸ್ ಮತ್ತು ಬೊಲೆರೊ ಕಾರ್ ಅದರಳೊಗಿದ್ದ ಪ್ರಯಾಣಿಕರನ್ನು ಪತ್ತೆ ಮಾಡಬೇಕಿದೆ.

Kinnaur landslide news updates
ಆದರೆ, ಅವಶೇಷಗಳ ಅಡಿಯಲ್ಲಿ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಸ್, ಬೊಲೆರೊ ಕಾರು ಮತ್ತು ಅದರಲ್ಲಿದ್ದ ಪ್ರಯಾಣಿಕರು ಪತ್ತೆಯಾಗಿಲ್ಲ. ಐಟಿಬಿಪಿ ಡೆಪ್ಯುಟಿ ಕಮಾಂಡೆಂಟ್ ಧರ್ಮೇಂದರ್ ಠಾಕೂರ್, “ನಾವು ಬಸ್ಸಿನ ಅವಶೇಷಗಳನ್ನು ಪತ್ತೆ ಮಾಡಿದ್ದೇವೆ ಮತ್ತು ಮೃತದೇಹವನ್ನು ಪತ್ತೆ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಮತ್ತು ಸ್ಥಳೀಯ ಪೊಲೀಸ್ ಮತ್ತು ಗೃಹ ರಕ್ಷಕ ದಳದವರು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಕಿನ್ನೌರ್ ನಲ್ಲಿ ಏನಾಯಿತು?
ನಿನ್ನೆ((ಆಗಸ್ಟ್ 11) ಮಧ್ಯಾಹ್ನದ 3 ಗಂಟೆಯ ಸುಮಾರಿಗೆ ನಿಚಾರ್ ತಹಸಿಲ್‌ನ ನಿಗುಲ್ಸಾರಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಐದರಲ್ಲಿ ಚೌರಾ ಗ್ರಾಮದ ಬಳಿ ಮಧ್ಯಾಹ್ನ ಸುಮಾರು ಭೂಕುಸಿತ ಸಂಭವಿಸಿತ್ತು. ರೆಕಾಂಗ್ ಪಿಯೊದಿಂದ ಶಿಮ್ಲಾ ಮೂಲಕ ಹರಿದ್ವಾರಕ್ಕೆ ಹೋಗುತ್ತಿದ್ದ ಎಚ್‌ಆರ್‌ಟಿಸಿ ಬಸ್ ಕಿನ್ನೌರ್‌ನಲ್ಲಿ ಭೂಕುಸಿತಕ್ಕೆ ಸಿಲುಕಿ ಬಂಡೆಗಳಿಗೆ ಡಿಕ್ಕಿ ಹೊಡೆದಿದೆ.

ಬಸ್, ಟ್ರಕ್ ಮತ್ತು ಇತರ ವಾಹನಗಳು ಭೂಕುಸಿತಕ್ಕೆ ಸಿಲುಕಿದ್ದರಿಂದ ಸುಮಾರು 40-50 ಜನರು ಅವಶೇಷಗಳಲ್ಲಿ ಸಿಲುಕಿರುವ ಶಂಕೆ ಇದೆ. ಕೆಲವು ವಾಹನಗಳು ರಸ್ತೆಯಿಂದ ಜಾರಿ ಕೆಳಗೆ ನದಿಗೆ ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಎಚ್‌ಆರ್‌ಟಿಸಿ ಬಸ್ ಮತ್ತು ಬೊಲೆರೊ ಮತ್ತು ಅದರ ಪ್ರಯಾಣಿಕರು ಗುರುವಾರ ಬೆಳಗಿನವರೆಗೂ ಅವಶೇಷಗಳ ಅಡಿಯಲ್ಲಿ ಪತ್ತೆಯಾಗದ ಕಾರಣ ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಎರಡೂ ವಾಹನಗಳು ಭಗ್ನಾವಶೇಷದಿಂದ ಉರುಳಿ ಬಿದ್ದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ನಡೆದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಸತ್ತವರು ಟಾಟಾ ಸುಮೋ ಟ್ಯಾಕ್ಸಿಯಲ್ಲಿ ಸಿಲುಕಿಕೊಂಡಿದ್ದರು. ಭೂಕುಸಿದು ಬೃಹತ್ ಕಲ್ಲು ಮಣ್ಣು ರಸ್ತೆಗೆ ಬಿದ್ದಿದ್ದು ಟ್ರಕ್ ವೊಂದು ನದಿ ತೀರದ ಕಡೆಗೆ ಉರುಳಿ ಬಿದ್ದಿದ್ದು, ಚಾಲಕನ ಶವವನ್ನು ಬುಧವಾರ ಪತ್ತೆ ಮಾಡಲಾಗಿದೆ. ಸಂಪೂರ್ಣ ಹಾನಿಗೊಳಗಾದ ಆಲ್ಟೊ ಕಾರನ್ನು ಬುಧವಾರ ಪತ್ತೆಹಚ್ಚಲಾಗಿದೆ ಆದರೆ ಕಾರಿನೊಳಗೆ ಯಾರೂ ಕಂಡುಬಂದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights