ಫ್ಯಾಕ್ಟ್‌ಚೆಕ್: ಮಹಿಳೆಯರ ಹತ್ಯೆ ತೋರಿಸುವ ಈ CCTV ದೃಶ್ಯಾವಳಿಗಳು ನಿಜವೇ?

“ಮುಂಬೈನ ಅಂಧೇರಿಯ ವಸತಿ ಪ್ರದೇಶವೊಂದರಲ್ಲಿ ನಡೆದಿರುವ ಭಯಾನಕ ಘಟನೆಯೊಂದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಕಪ್ಪು ಟೋಪಿ ಧರಿಸಿದ ವ್ಯಕ್ತಿಯೊಬ್ಬ ಮಹಿಳೆಯನ್ನು ಬರ್ಬರವಾಗಿ ಕೊಂದಿದ್ದಾನೆ.  #HatmanKiller ಎಂಬ ಹ್ಯಾಶ್‌ಟ್ಯಾಗ್ ನಿಂದ ಕರೆಯಲಾಗುತ್ತಿದೆ. ಎಲ್ಲರೂ ಜಾಗೃತರಾಗಿರಿ” ಎಂಬ ಟ್ವೀಟ್ ಒಂದು ವೈರಲ್ ಆಗಿದ್ದು, ಬಳಿಕ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಮುಂಬೈನ ರಸ್ತೆಯೊಂದರಲ್ಲಿ ಕಾರಿನಿಂದ ಇಳಿದು ಬರುವ ಮಹಿಳೆಯನ್ನು ಹಿಂದಿನಿಂದ ಹಿಡಿದುಕೊಳ್ಳುವ ವ್ಯಕ್ತಿಯೊಬ್ಬ, ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಾನೆ. ಕೆಲವು ಬಾರಿ ಚುಚ್ಚಿದ ಬಳಿಕ ಆಕೆ ನೆಲಕ್ಕೆ ಉರುಳುತ್ತಾಳೆ. ಆಕೆಯನ್ನು ಕಾರು ಪಾರ್ಕಿಂಗ್ ಜಾಗಕ್ಕೆ ಆತ ಎಳೆದುಹಾಕುತ್ತಾನೆ. ಅದೇ ರೀತಿ ಮತ್ತೊಂದು ಕಾರಿನಲ್ಲಿ ಬಂದ ವ್ಯಕ್ತಿಯನ್ನು ಸಹ ಕೊಲ್ಲಲಾಗುತ್ತದೆ. ಈ ದೃಶ್ಯವಿರುವ ಸಿಸಿಟಿವಿ ಕ್ಯಾಮರಾ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನುಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಸ್ಕ್ರೀನ್‌ಶಾಟ್‌ ಅನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, . #HatmanKillerInMumbai ಎಂಬ ಹ್ಯಾಷ್‌ಟ್ಯಾಗ್‌ನಡಿ ‘ಕಪ್ಪು ಟೋಪಿಯ ಹಂತಕ ಮುಂಬೈನ ಅಂಧೇರಿಯಲ್ಲಿ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ’ ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದು ನಿಜವಲ್ಲ. ಮುಂಬೈನಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ ಎಂದು ‘ಆಲ್ಟ್‌ ನ್ಯೂಸ್’ ವರದಿ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಸರ್ಚ್ ಮಾಡಿದಾಗ,  ಇಂಡಿಯಾ ಟುಡೇ ವರದಿಯೊಂದು ಲಭ್ಯವಾಗಿದ್ದು, ಇಂಡಿಯಾ ಟುಡೇ ಪ್ರಕಾರ, ನಟ/ನಿರ್ಮಾಪಕ ತುಷಾರ್ ಕಪೂರ್ ನಿರ್ಮಾಣದ ಮಾರಿಚ್ ಸಿನಿಮಾದ ಪ್ರೋಮೊ ಇದಾಗಿದೆ. ಚಿತ್ರವನ್ನು ಪ್ರೋಮೋವನ್ನು ಕಪೂರ್ ಅವರು ಸೆಪ್ಟೆಂಬರ್ 13 ರಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದ ಆರಂಭದಲ್ಲಿ ಕೆಳಭಾಗದಲ್ಲಿ ಅದೇ ‘MAARIRICH’ ಎಂದು ಬರೆದಿರುವುದನ್ನು ನೋಡಬಹುದು. ಹಾಗಾಗಿ ಆ ಸಿನಿಮಾದ ತುಣುಕುಗಳನ್ನು ತೆಗೆದುಕೊಂಡು ಈ ವಿಡಿಯೋ ರಚಿಸಲಾಗಿದೆ ಎಂಬ ಅಂಶವನ್ನು ಸೂಚಿಸುತ್ತದೆ. ಅಲ್ಲದೆ ಸಿನಿಮಾದ ಪ್ರಚಾರಕ್ಕೂ ಈ ತಂತ್ರ ಮಾಡಿರಬಹುದು ಎನ್ನಲಾಗಿದೆ.

https://twitter.com/TusshKapoor/status/1569560863539101698?ref_src=twsrc%5Etfw%7Ctwcamp%5Etweetembed%7Ctwterm%5E1569560863539101698%7Ctwgr%5Eda932219f03688a69474ae9e3b08ae39ad9ae865%7Ctwcon%5Es1_&ref_url=https%3A%2F%2Fwww.altnews.in%2Ffact-check-is-viral-video-actual-footage-of-a-hatman-killing-woman-in-mumbai%2F

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋವನ್ನು ಬಳಕೆದಾರರು ನಿಜವೆಂದು ನಂಬಿ ಬೆಚ್ಚಿ ಬಿದ್ದಿದ್ದರು. ಆದರೆ ಮುಂಬೈ ಪೊಲೀಸರು ಇದನ್ನು ನಂಬಬೇಡಿ, ಇಂತಹ ಸುದ್ದಿಯಿಂದ ದಿಗಿಲಿಗೆ ಒಳಗಾಗಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ವಿಡಿಯೊದ ಕೆಳಭಾಗದಲ್ಲಿ ‘ಮಾರಿಚ್’ ಎಂಬ ಹೆಸರಿದ್ದು, ನಟ, ನಿರ್ಮಾಪಕ ತುಷಾರ್ ಕಪೂರ್ ಅವರ ಮುಂಬರುವ ಚಿತ್ರದ ಹೆಸರಿದು ಎಂದು ಹೇಳಲಾಗಿದೆ. ಚಿತ್ರದ ಪ್ರಚಾರಕ್ಕೆ ಇಂತಹ ವಿಧಾನವನ್ನು ಅನುಸರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಮಾರಿಚ್’ ಚಿತ್ರತಂಡದಿಂದ ಪ್ರತಿಕ್ರಿಯೆ ಸದ್ಯಕ್ಕೆ ಲಭ್ಯವಾಗಿಲ್ಲ.ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾರಿಚ್ ಎಂಬ ಸಿನಿಮಾದ ಪ್ರೋಮೋದ ದೃಶ್ಯಗಳನ್ನು ಮುಂಬೈನಲ್ಲಿ ಟೋಪಿ ಧರಿಸಿದ ವ್ಯಕ್ತಿಯಿಂದ ಕೊಲೆಯಾದ ನೈಜ ಘಟನೆ ಎಂದು  ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಆದರೆ ಇದನ್ನು ಮುಂಬೈನ ಪೊಲೀಸರು ಅಲ್ಲಗೆಳೆದಿದ್ದು ಚಿತ್ರವೊಂದರೆ ದೃಶ್ಯ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅವಶ್ಯಕೆ ಇಲ್ಲ ಎಂದು ಸ್ವಪ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮದ್ಯದ ಅಂಗಡಿ ನಾಮಫಲಕದಲ್ಲಿ ಮೋದಿ ಮತ್ತು ಯೋಗಿ ಫೋಟೋ ಇರುವುದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights