ಕೋವಿಡ್ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ ಎಂಜಿನಿಯರಿಂಗ್ ಕಾಲೇಜು!

ಕೊರೊನಾದಿಂದಾಗಿ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಮುಂದಿನ ನಾಲ್ಕು ವರ್ಷಗಳವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಬಿಹಾರದ ಘಾಜಿಯಾಬಾದ್ ಮೂಲದ ಎಂಜಿನಿಯರಿಂಗ್ ಕಾಲೇಜು ಘೋಷಿಸಿದೆ.

ಕಾಲೇಜು ನಿರ್ವಹಣಾ ಸಮಿತಿಯು ಶುಕ್ರವಾರ (ಜುಲೈ 17) ಈ ಘೋಷಣೆ ಮಾಡಿದೆ. ಆರ್‌ಡಿ ಎಂಜಿನಿಯರಿಂಗ್ ಕಾಲೇಜಿಗೆ ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘ ಸಹಾಯ ಕೋರಿದ್ದವು. ಕೊರೊನಾ ವೈರಸ್‌ನಿಂದ ಪೋಷಕರನ್ನು ಕಳೆದುಕೊಂಡ  50 ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಶಮೇಲ್ ಅಹ್ಮದ್ ಹೇಳಿದ್ದಾರೆ.

ಕಾಲೇಜಿನ ಅಧ್ಯಕ್ಷ ರಾಕೇಶ್ ಶರ್ಮಾ ಅವರು ಸಂಘದ ಕೋರಿಕೆಯನ್ನು ಒಪ್ಪಿಕೊಂಡಿದ್ದಾರೆ. ಕಾಲೇಜಿನಲ್ಲಿ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕವನ್ನು ವಿಧಿಸುವುದಿಲ್ಲ ಮತ್ತು ಉಚಿತ ಪುಸ್ತಕಗಳನ್ನು ನೀಡಲಾಗುವುದು ಎಂದು ಆರ್‌ಡಿ ಎಂಜಿನಿಯರಿಂಗ್ ಕಾಲೇಜು ಮತ್ತು ತಾಂತ್ರಿಕ ಕ್ಯಾಂಪಸ್‌ನ ನಿರ್ದೇಶಕ ಸಂಜೀವ್ ಶರ್ಮಾ ತಿಳಿಸಿದ್ದಾರೆ.

“ಅಂತಹ ವಿದ್ಯಾರ್ಥಿಗಳು ತಮ್ಮ ಆಹಾರ ಮತ್ತು ವಿಶ್ವವಿದ್ಯಾಲಯ ಪರೀಕ್ಷಾ ಶುಲ್ಕಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.” ಅಗತ್ಯವಿರುವ ಮಕ್ಕಳಿಗೆ ಶೇಕಡಾ 50 ರಷ್ಟು ವಿದ್ಯಾರ್ಥಿವೇತನ ಮತ್ತು ಉಚಿತ ಹಾಸ್ಟೆಲ್ ಸೌಕರ್ಯವನ್ನು ನೀಡುವಂತೆ ಸಂಘವು ಕೇಳಿಕೊಂಡಿದೆ ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಗ್‌ ಶಾಕ್‌: ಚುನಾವಣಾ ವಸ್ತಿಲಿನಲ್ಲಿ ಮಣಿಪುರ ಕಾಂಗ್ರೆಸ್‌ ರಾಜ್ಯಾಧ್ಯಕ್ಷ, 08 ಶಾಸಕರು ಬಿಜೆಪಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights