ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಸಾರ್ವಜನಿಕವಾಗಿ ಜನಿವಾರ ಪ್ರದರ್ಶಿಸಿದರೆ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಂಬಂಧಿಸಿದ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ರಾಹುಲ್ ಗಾಂಧಿ ತಮ್ಮ ಜನಿವಾರವನ್ನು ಪ್ರದರ್ಶಿಸುತ್ತಾ ನಾನೂ ಬ್ರಾಹ್ಮಣ ಎಂದು ತಮ್ಮ ಬ್ರಾಹ್ಮಣತ್ವವನ್ನು ಪ್ರದರ್ಶಿಸುತ್ತಿದ್ದಾರೆ, ಇಲ್ಲಿ BJP ಅಧಿಕಾರಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಆಳುವವರು ಮಾತ್ರ ಬ್ರಾಹ್ಮಣರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ರಾಹುಲ್ ಗಾಂಧಿ ತಮ್ಮ ಕುರ್ತಾವನ್ನು ಎತ್ತಿ ಜನಿವಾರವನ್ನು ಪ್ರದರ್ಶಿಸುವ ಫೋಟೊವನ್ನು ಹಂಚಿಕೊಂಡಿದ್ದಾರೆ.

“ಕಾಂಗ್ರೆಸ್ ಆಡಳಿತ ಬ್ರಾಹ್ಮಣರ ಆಡಳಿತ!
ಬಿಜೆಪಿ ಆಡಳಿತ ಬ್ರಾಹ್ಮಣರ ಆಡಳಿತ!
ಪರ್ಯಾಯವನ್ನು ಆರಿಸಿ” ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗಿದೆ.

ತಮಿಳು ನ್ಯಾಶನಲಿಸ್ಟ್ ಪಾರ್ಟಿ ‘ನಾಮ್ ತಮಿಳರ್ ಕಚ್ಚಿ’ ಮುಖ್ಯ ಸಂಯೋಜಕ ಎಸ್ ಸೀಮಾನ್, ಆಗಸ್ಟ್ 2, 2023 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಆರ್ಎಸ್ಎಸ್ ಹೆಚ್ಚಾಗಿ ಬ್ರಾಹ್ಮಣ ಸಮುದಾಯದ ಸದಸ್ಯರನ್ನು ಹೊಂದಿದ್ದರೆ, ರಾಹುಲ್ ಕೂಡ ಪವಿತ್ರವಾದ ಎಳೆಯನ್ನು ಪ್ರದರ್ಶಿಸುತ್ತಾರೆ ಮತ್ತು ಅವರು ಕೌಲ್ ಬ್ರಾಹ್ಮಣ ಎಂದು ಹೇಳುತ್ತಾರೆ. ಎಂಬ ಹೇಳಿಕೆಯನ್ನು 2 ಆಗಸ್ಟ್ 2023 ರಂದು  Puthiya Thalaimurai TV ಎಂಬ Youtube ನಲ್ಲಿ ಪೋಸ್ಟ್ ಮಾಡಿದ 3:15 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ನೋಡಬಹುದು.

ಹಾಗಿದ್ದರೆ ರಾಹುಲ್ ಗಾಂಧಿ ನಿಜವಾಗಿಯೂ ಜನಿವಾರವನ್ನು ಪ್ರದರ್ಶಿಸಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 16, ಜನವರಿ 2016 ರಂದು ABP ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿಯವರ ಮೂಲ ವಿಡಿಯೋ ಲಭ್ಯವಾಗಿದೆ.

ಮೂಲ ವೀಡಿಯೊದಲ್ಲಿ, ರಾಹುಲ್ ಗಾಂಧಿ ಅವರ ಹರಿದ ಕುರ್ತಾವನ್ನು ನೋಡಬಹುದು. ಉತ್ತರಾಖಂಡ್ ನ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಅವರು ಶ್ರೀಮಂತರ ಪರವಾಗಿ ಶ್ರೀಮಂತರಿಗಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ಅವರ ಎಂದಿಗಾದರೂ ನಮ್ಮಂತೆ ಹೀಗೆ ಹರಿದ ಭಟ್ಟೆಗಳನ್ನು ಧರಿಸಲು ಸಾಧ್ಯವೆ ಎಂದು ಹೇಳುತ್ತಾ ತಮ್ಮ ಹರಿದ ಕುರ್ತಾವನ್ನು ತೋರಿಸಿರುವ ಘಟನೆ 2016ರಲ್ಲಿ ವರದಿಯಾಗಿದೆ.

ವಿಧಾನಸಭಾ ಚುನಾವಣೆಗಾಗಿ ಉತ್ತರಾಖಂಡದ ಋಷಿಕೇಶದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷರು ಮಾತನಾಡುತ್ತಿದ್ದರು. ತಮ್ಮ ಭಾಷಣದ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಟ್ಟೆಯ ಬಗ್ಗೆ ಕಿಡಿಕಾರಿದರು. ತಮ್ಮ ಹರಿದ ಕುರ್ತಾವನ್ನು ಸಾರ್ವಜನಿಕರಿಗೆ ತೋರಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವ್ಯಂಗ್ಯವಾಡಿದರು. ಎಂದು ಅದೇ ಘಟನೆಯನ್ನು TOI, ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇನ್‌ಶಾರ್ಟ್ಸ್‌ನಂತಹ ಅನೇಕ ಮಾಧ್ಯಮಗಳು ವರದಿ ಮಾಡಿವೆ.

ರಾಹುಲ್ ಗಾಂಧಿ ಅವರು ತಮ್ಮ ಹರಿದ ಭಟ್ಟೆಯನ್ನು ತೋರಿಸುತ್ತಾ ಮಾತಾಡಿದ ವಿಡಿಯೋವನ್ನು ಎಡಿಟ್ ಮಾಡಿ ಜನಿವಾರವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಿರಣ್ ದೇವಿ ಬಳಿ ಅಕ್ಬರ್ ಪ್ರಾಣ ಭಿಕ್ಷೆ ಬೇಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights