ಫ್ಯಾಕ್ಟ್‌ಚೆಕ್: ರಂಜಾನ್‌ ಮಾಸದಲ್ಲಿ ಉಪವಾಸವಿದ್ದ ಹಿಂದೂ ಯುವತಿ ಮೇಲೆ ಹಲ್ಲೆ ನಡೆದಿದ್ದು ನಿಜವೇ?

ಹಿಂದೂ-ಮುಸ್ಲಿಂ ಏಕತೆಯನ್ನು ಉತ್ತೇಜಿಸುವ ಸಲುವಾಗಿ ಪವಿತ್ರ ರಂಜಾನ್ ಸಮಯದಲ್ಲಿ ಇಬ್ಬರು ಹಿಂದೂ ಯುವತಿಯರು ಉಪವಾಸ ಆಚರಿಸಿ ಭಾರಿ ಸುದ್ದಿಯಾಗಿದ್ದರು. ಅದರಲ್ಲಿ ಒಬ್ಬ ಯುವತಿ ಆಕೆಯ ಮುಸ್ಲಿಂ ಗಂಡನ ದೌರ್ಜನ್ಯದಿಂದ ಹಲ್ಲೆಗೆ ಒಳಗಾಗಿದ್ದಾಳೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಗಾಯಗೊಂಡ ಯುವತಿಯ ಚಿತ್ರ ಎಂದು ಪ್ರತಿಪಾದಿಸಿ ಸುದ್ದಿ ಪತ್ರಿಕೆಯೊಂದು ಪ್ರಕಟಿಸಿರುವ ಕ್ಲಿಪ್ಪಿಂಗ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮೂಲಕ ಹಂಚಿಕೊಂಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಚಿತ್ರ 1:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಗೂಗಲ್ ಸಹಾಯದಿಂದ ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ 2019 ಜೂನ್‌ನಲ್ಲಿ ಪ್ರಕಟವಾದ ಪತ್ರಿಕೆಯ ಕ್ಲಿಪ್ಪಿಂಗ್‌ನಿಂದ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದೈನಿಕ್ ಭಾಸ್ಕರ್ ಮತ್ತು ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಶಿವಾನಿ ಮತ್ತು ರಿಯಾ ಎಂಬ ಇಬ್ಬರು ಹಿಂದೂ ಹುಡುಗಿಯರು ರಂಜಾನ್‌ನಲ್ಲಿ ಹಿಂದೂ – ಮುಸ್ಲಿಂ ಏಕತೆಗಾಗಿ ಒಂದು ದಿನದ ಉಪವಾಸವನ್ನು ಆಚರಿಸಿದರು ಎಂದು ವರದಿಯಾಗಿದೆ.

ಚಿತ್ರ 2:

ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಹಲ್ಲೆಗೊಳಗಾಗಿ ಗಾಯಗೊಂಡ ಮಹಿಳೆಯನ್ನು ಹಜ್ರಾ ಎಂದು ಗುರುತಿಸಲಾಗಿದೆ, ಅವರು ಪಾಕಿಸ್ತಾನದ ಲಾಹೋರ್‌ನಲ್ಲಿ ವಾಸಿಸುತ್ತಿದ್ದಾರೆ. ಪತಿ ಉಮರ್ ನೂರಾನಿ ತನಗೆ ಚಿತ್ರಹಿಂಸೆ ನೀಡಿ ಹಲ್ಲೆ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. 23 ಮಾರ್ಚ್ 2019 ರಂದು ಲಾಹೋರ್ ಪೊಲೀಸರು ಪತಿ ಉಮರ್ ನೂರಾನಿ ವಿರುದ್ದ ಪ್ರಕರಣ ದಾಖಲಿಸಿದ್ದರು. ಈ ಘಟನೆಗೆ ಸಂಬಂಧಿಸಿದ ಇತರ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವಾಸ್ತವವಾಗಿ ಎರಡೂ ಬೇರೆಬೇರೆ ಘಟನೆಗಳಾಗಿದ್ದು ಪವಿತ್ರ ರಂಜಾನ್ ಮಾಸದಲ್ಲಿ ಇಬ್ಬರು ಹಿಂದೂ ಯುವತಿಯರು ಉಪವಾಸ ಇದ್ದ ಸಂಗತಿಗೂ, ಹಲ್ಲೆಗೊಳಗಾಗಿ ಗಾಯಗೊಂಡ ಮಹಿಳೆಗೂ ಯಾವುದೇ ಸಂಬಂಧವಿಲ್ಲ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ. ಇದರಿಂದ ಸಂಬಂಧವಿಲ್ಲದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2019 ರಲ್ಲಿ ರಂಜಾನ್ ಸಮಯದಲ್ಲಿ ಒಂದು ದಿನದ ಉಪವಾಸವನ್ನು ಹಿಂದೂ-ಮುಸ್ಲಿಂ ಏಕತೆಯನ್ನು ಉತ್ತೇಜಿಸುವ ಸೂಚಕವಾಗಿ ಆಚರಿಸಿದರು. ಆದರೆ, ಗಾಯಗೊಂಡ ಮುಖವನ್ನು ಹೊಂದಿರುವ ಮಹಿಳೆಯ ಚಿತ್ರವನ್ನು ಹಜ್ರಾ ಎಂದು ಗುರುತಿಸಲಾಗಿದೆ, ಅವರು ಪಾಕಿಸ್ತಾನದ ಲಾಹೋರ್‌ನಲ್ಲಿ ವಾಸಿಸುತ್ತಿದ್ದಾರೆ. ವರದಕ್ಷಿಣೆ ವಿಚಾರವಾಗಿ ಪತಿ ಉಮರ್ ನೂರಾನಿ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ. ಈ ಎರಡೂ ಘಟನೆಗಳಿಗೆ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ BJP ಅಭ್ಯರ್ಥಿಗೆ ಮತದಾರರು ಚಪ್ಪಲಿಹಾರ ಹಾಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights