ಗಗನನೌಕೆಗೆ ಕಲ್ಪನಾ ಚಾವ್ಲಾ ಹೆಸರಿಟ್ಟ ಅಮೆರಿಕದ ಬಾಹ್ಯಾಕಾಶ ಸಂಸ್ಥೆ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಮೆರಿಕಾದ ನಾಸಾ ಸಹಯೋಗದಲ್ಲಿ ಉಡಾವಣೆಯಾಗಲಿರುವ ಗಗನನೌಕೆಗೆ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ.
ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ಕಲ್ಪನಾ ಚಾವ್ಲಾ ಅವರ ಹೆಸರನ್ನು ಅಮೆರಿಕದ ನಾರ್ಥ್ರಾಪ್ ಗ್ರುಮ್ಯಾನ್ ಎಂಬ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿಯು ‘ಎನ್ಜಿ-14 ಸಿಗ್ನಸ್’ ಎಂಬ ಗಗನನೌಕೆಗೆ ಚಾವ್ಲಾ ಹೆಸರಿಡಲಾಗಿದೆ.
ವರ್ಜಿನಿಯಾದಲ್ಲಿರುವ ನಾಸಾಕ್ಕೆ ಸೇರಿದ ವಾಲಪ್ಸ್ ಫ್ಲೈಟ್ ಫೆಸಿಲಿಟಿಯಿಂದ ಸೆಪ್ಟೆಂಬರ್ 29ರಂದು ಎನ್ಜಿ-14 ಸಿಗ್ನಸ್ ಗಗನನೌಕೆ ಉಡಾವಣೆಯಾಗಲಿದೆ.
ಬಾಹ್ಯಾಕಾಶ ಅನ್ವೇಷಣೆ, ಸಂಶೋಧನೆಗೆ ಅಗತ್ಯವಿರುವ ಒಟ್ಟು 3,629 ಕೆ.ಜಿ ತೂಕದ ಸಾಮಗ್ರಿಗಳನ್ನು ಹೊತ್ತು ಸಾಗಲಿರುವ ಈ ನೌಕೆ ಎರಡು ದಿನಗಳ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಲಿದೆ.
ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರು 1962ರ ಮಾರ್ಚ್ 17ರಂದು ಹರಿಯಾಣದ ಕರ್ನಾಲ್ನಲ್ಲಿ ಜನಿಸಿದ್ದರು. ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದರು. 1984ರಲ್ಲಿ ಅಮೆರಿಕಾದ ಯೂನಿವರ್ಸಿಟಿ ಆಫ್ ಟೆಕ್ಸಾಸ್ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು, 1988ರಲ್ಲಿ ಕೊಲರಾಡೊ ಯೂನಿವರ್ಸಿಟಿಯಿಂದ ಪಿಎಚ್.ಡಿ ಪಡೆದಿದ್ದರು. ನಂತರ ಅವರು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಅಮೇಸ್ ರಿಸರ್ಚ್ ಸೆಂಟರ್ನಲ್ಲಿ ಸಂಶೋಧಕಿಯಾಗಿ ಸೇರಿಕೊಂಡರು.
ಅಲ್ಲಿಂದ, ನಾಸಾ ಉಡಾವಣೆ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದ ಇವರು, 2003ರಲ್ಲಿ ಗಗನಯಾತ್ರೆಗೆ ತೆರಳಿದ್ದರು. ಎಸ್ಟಿಎಸ್ 87 ಎಂಬ ಗಗನನೌಕೆ ಭೂಮಿಗೆ ಮರಳವಾಗ ವಿಫಲಗೊಂಡು ಚಾವ್ಲಾ ಸೇರಿದಂತೆ ಏಳು ಜನರು ಸಾವನ್ನಪ್ಪಿದರು.
ಕೊಲಂಬಿಯಾ ಪರ್ವತಶ್ರೇಣಿಯಲ್ಲಿರುವ ಏಳು ಪರ್ವತಗಳಗಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಸಾವನ್ನಪ್ಪಿದ್ದ ಏಳು ಜನರ ಹೆಸರನ್ನು ಇಡಲಾಗಿದ್ದು, ಅದರಲ್ಲಿ ಒಂದು ಪರ್ವತೆಕ್ಕೆ ಚಾವ್ಲಾ ಪರ್ವತ ಎಂದು ಹೆಸರಿಡಲಾಗಿದೆ. ಅಲ್ಲದೆ, ನ್ಯಾಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ 74ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: video: ಹತ್ತಿರದಿಂದ ಸೂರ್ಯ ಹೇಗೆ ಕಾಣುತ್ತೆ ಗೊತ್ತಾ? ನಾಸಾದ ಆರ್ಬಿಟರ್ ಸೆರೆಹಿಡಿದ ತುಣುಗಳು ನೋಡಿ!