ಮಂಗಳೂರಿನಲ್ಲಿ ಅನೈಕಿತ ಪೊಲೀಸ್‌ ಗಿರಿ; ಪೊಲೀಸರ ಎದುರೇ ವಿದ್ಯಾರ್ಥಿಗಳ ಮೇಲೆ ಹಲ್ಲೆ!

ಮಂಗಳೂರಿನಲ್ಲಿ ಪದೇ ಪದೇ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆಯುತ್ತಲೇ ಇವೆ. ಸೋಮವಾರ ಕೂಡ ಇಂಥದ್ದೇ ಅನೈತಿಕ ಪೊಲೀಸ್‌ ಗಿರಿ ನಡೆದಿದ್ದು, ಪೊಲೀಸರ ಎದುರೇ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಿಂದೂತ್ವ ವಾದಿ ಪುಂಡರ ಗುಂಪೊಂದು ದಾಳಿ ನಡೆಸಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮಂಗಳೂರಿನ ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನ ವಿವಿಧ ಧರ್ಮದ ವಿದ್ಯಾರ್ಥಿಗಳು ವಿಹಾರಕ್ಕಾಗಿ ಮಲ್ಪೆ ಬೀಚ್‌ಗೆ ತೆರಳುತ್ತಿದ್ದರು. ಈ ವೇಳೆ, ಯುವಕ – ಯುವತಿಯರನ್ನು ಅಡ್ಡಗಟ್ಟಿದ ಬಜರಂಗ ದಳ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ.

ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಇನ್ಸ್ ಪೆಕ್ಟರ್ ಶರೀಪ್ ಅವರು ಪುಂಡರ ಗುಂಪನ್ನು ತಡೆದಿದ್ದಾರೆ. ಆದರೂ, ಅವರ ಎದುರೇ, ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ ನಡೆಸಿದೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದಾಳಿಕೋರ ಗುಂಪಿನ ಐವರನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಂಪಿನಲ್ಲಿದ್ದ ಉಳಿದವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬಿಎಸ್‌ವೈ ಬೆಂಬಲಿಗರಿಗೆ ಬಿಜೆಪಿ ಬ್ರೇಕ್?; ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights