ತರಬೇತಿ ಇಲ್ಲದೆ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸ್ ಮಾಡಿದ ಅದ್ಬುತ ಪ್ರತಿಭೆ.!

22 ವರ್ಷದ ಯುವಕನೊಬ್ಬ ಯಾವುದೇ ತರಬೇತಿ ಇಲ್ಲದೆ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸ್ ಮಾಡಿ ಪೋಷಕರಿಗೆ ಕೀರ್ತಿ ತಂದಿದ್ದಾನೆ.

ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ಆದರ್ಶ್ ಕಾಂತ್ ಶುಕ್ಲಾ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಅನ್ನು ಪಾಸು ಮಾಡಿದ್ದಾರೆ.

ಕಾಲೇಜಿನಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಇವರು ಯುಪಿಎಸ್‌ಸಿಯನ್ನು ಮೊದಲ ಪ್ರಯತ್ನದಲ್ಲಿ ಯಾವುದೇ ಕೋಚಿಂಗ್ ತರಗತಿಗಳಿಲ್ಲದೆ 149 ನೇ ರ್ಯಾಂಕ್ ಪಡೆದಿದ್ದಾರೆ. ಶೀಘ್ರದಲ್ಲೇ ಐಪಿಎಸ್ ಅಧಿಕಾರಿಯಾಗಿ ತಮ್ಮ ಸ್ಥಾನ ವಹಿಸಿಕೊಳ್ಳಲಿದ್ದಾರೆ.

ಇವರ ಸಾಧನೆಗೆ ಮಾಜಿ ನಿವೃತ್ತ ಐಎಎಸ್-ರಾಜಕಾರಣಿಯಾಗಿರುವ ಮತ್ತು ಛತ್ತೀಸ್‌ಗಢದ ಉಸ್ತುವಾರಿ, ಕಾಂಗ್ರೆಸ್ ವಕ್ತಾರ ಪಿಎಲ್ ಪುನಿಯಾ ಅಭಿನಂದಿಸಿದ್ದು ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

ಇದಲ್ಲದೇ, ಅನೇಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಸಮಾಜದ ಪ್ರಮುಖ ವ್ಯಕ್ತಿಗಳು ಅವರನ್ನು ಅಭಿನಂದಿಸಿದ್ದಾರೆ. ಈ ವೇಳೆ ಆದರ್ಶ್ ಅವರು ತಮ್ಮ ಸಾಧನೆ ಅವರ ಹೆತ್ತವರಿಗೆ ಸಲ್ಲಬೇಕು ಎಂದು ಹೇಳುತ್ತಾರೆ.

ತನ್ನ ತಂದೆಯ ಕನಸನ್ನು ನನಸಾಗಿಸಿದ ಆದರ್ಶ್ :-
ಆದರ್ಶ್ ಸರಳ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ 20 ವರ್ಷಗಳ ಹಿಂದೆ ಗ್ರಾಮದಿಂದ ಬಾರಬಂಕಿಗೆ ಬಂದಿದ್ದರು. ಬಾರಾಬಂಕಿಯ ರಾಮನಗರ ತಹಸಿಲ್‌ನ ಪ್ರವಾಹ ಪೀಡಿತ ಪ್ರದೇಶದ ಮಡ್ನಾ ಹಳ್ಳಿಯವರಾದ ತಂದೆ ರಾಧಾಕಾಂತ್ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಜೀವನ ನಡೆಸಲು ಜಿಎಸ್‌ಟಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಗೀತಾ ಶುಕ್ಲಾ ಗೃಹಿಣಿ. ಅವರು ಆದರ್ಶ್ ಮತ್ತು ಅವರ ಸಹೋದರಿ ಸ್ನೇಹಾರನ್ನು ಕಷ್ಟಕರ ಸಂದರ್ಭಗಳಲ್ಲಿ ಹೋರಾಡುತ್ತಾ ಬೆಳೆಸಿದ್ದಾರೆ.

ಮೊದಲು ಬಾಡಿಗೆ ಮನೆಯಲ್ಲಿ ವಾಸಿಸುತ್ತಿ ಇವರು ಕಾಲಾನಂತರದಲ್ಲಿ, ಓಬರಿಯಲ್ಲಿರುವ ಮಯೂರ್ ಬಿಹಾರ ಕಾಲೋನಿಯಲ್ಲಿ ಅವರ ಮನೆಯನ್ನು ಕಟ್ಟಿಸಿದರು.

ಆದರ್ಶ್ ಅವರ ತಂದೆ ಯುಪಿಎಸ್‌ಸಿ ಮಾಡುವ ಕನಸಾಗಿತ್ತು. ಆದರೆ ಆರ್ಥಿಕ ಸಂಪನ್ಮೂಲದ ಕೊರತೆಯಿಂದಾಗಿ ತಯಾರಿ ನಡೆಸುತ್ತಿದ್ದರೂ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ಈಗ ಅವನ ಮಗ ತಂದೆ ಕನಸುಗಳನ್ನು ಈಡೇರಿಸಿದ್ದಾನೆ.

ಬಿಎಸ್ಸಿಯಲ್ಲಿ ಚಿನ್ನದ ಪದಕ ವಿಜೇತ ಆದರ್ಶ್ :-
ಆದರ್ಶ್ ಅವರು ಪ್ರೌಢಶಾಲೆ ಮತ್ತು ಮಧ್ಯಂತರ ಪರೀಕ್ಷೆಗಳಲ್ಲಿ ಟಾಪರ್ ಆಗಿದ್ದರು.

ಅವರು ಲಕ್ನೋದ ರಾಷ್ಟ್ರೀಯ ಪಿಜಿ ಕಾಲೇಜಿನಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ (ಪಿಸಿಎಂ) ದೊಂದಿಗೆ ಬಿಎಸ್ಸಿಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಯುಪಿಎಸ್‌ಸಿ ಪರೀಕ್ಷೆಗಳಿಗೆ ಹಾಜರಾದಾಗ ಅವರಿಗೆ ಕೇವಲ 21 ವರ್ಷ. ಅವರ ಸಹೋದರಿ ಸ್ನೇಹಾ ಈಗ ಎಲ್‌ಎಲ್‌ಎಂ ಮುಗಿಸಿದ ನಂತರ ಪಿಸಿಎಸ್‌ಜೆ (ನ್ಯಾಯಾಂಗ ಸೇವೆಗಳು) ಓದುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights