ಮೋದಿಯ ಮೂರು ವೈಫಲ್ಯಗಳ ಬಗ್ಗೆ ಹಾರ್ವಡ್ ವಿಶ್ವವಿದ್ಯಾನಿಲಯ ಅಧ್ಯಯನ ನಡೆಸಬಹುದು: ರಾಹುಲ್‌ ಗಾಂಧಿ

ಮೋದಿಯ ವೈಫಲ್ಯಗಳಲ್ಲಿ ಪ್ರಮುಖವಾಗಿರುವ ಕೋವಿಡ್ 19, ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣ.. ಈ ಮೂರು ವೈಫಲ್ಯಗಳ ಕುರಿತು ಭವಿಷ್ಯದಲ್ಲಿ ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

ರಷ್ಯಾವನ್ನು ಹಿಂದಿಕ್ಕಿ ಭಾರತವು ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಪ್ರಪಂಚದ ಮೂರನೇ ರಾಷ್ಟ್ರವಾದ (6.9 ಲಕ್ಷ) ಬಳಿಕ ಇಂದು ಮುಂಜಾನೆ ಏರುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಗ್ರಾಫ್ ಅನ್ನು ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ದೇಶದಲ್ಲಿ ನರೇಂದ್ರ ಮೋದಿಯವರು ಲಾಕ್‌ಡೌನ್‌ ಹೇರಿದಾಗ ಕೊರೊನಾ ಪ್ರಕರಣಗಳಲ್ಲಿ ಭಾರತವು 48ನೇ ಸ್ಥಾನದಲ್ಲಿತ್ತು. ಅಂದು ನರೇಂದ್ರ ಮೋದಿಯವರು ಮಹಾಭಾರತ ಯುದ್ಧವು 18 ದಿನದಲ್ಲಿ ವಿಜಯಿಯಾಗಿತ್ತು. ನಾವು 21 ದಿನಗಳಲ್ಲಿ ಕೊರೊನಾ ವಿರುದ್ಧ ಜಯ ಸಾಧಿಸೋಣ ಎಂದು ಕರೆ ನೀಡಿದ್ದರು. ಅಲ್ಲದೇ ಚಪ್ಪಾಳೆ ಬಡಿಯಿರಿ, ತಟ್ಟೆ ಲೋಟ ಬಡಿಯಿರಿ, ದೀಪ ಹಚ್ಚಿ ಎಂದು ಕರೆ ನೀಡಿದ್ದರು. ಇಂದು ಲಾಕ್ ಡೌನ್ ಘೋಷಿಸಿ 103ನೇ ದಿನವಾಗಿದ್ದು ಕೊರೊನಾ ಪ್ರಕರಣಗಳಲ್ಲಿ ಭಾರತ 6.9 ಲಕ್ಷ ಪ್ರಕರಣಗಳೊಂದಿಗೆ 3 ನೇ ಸ್ಥಾನಕ್ಕೆ ಬಂದು ನಿಂತಿದೆ. ಕೊರೊನಾ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ವಿಡಿಯೋ ಮೂಲಕ ಟೀಕಿಸಿದ್ದಾರೆ.

ಹಾಗಾಗಿ ಭವಿಷ್ಯದ ದಿನಗಳಲ್ಲಿ ಪ್ರಖ್ಯಾತ ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಮೋದಿಯವರ ಮೂರು ಪ್ರಮುಖ ವೈಫಲ್ಯಗಳಾದ ಕೋವಿಡ್ 19, ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ ಬಗ್ಗೆ ಅಧ್ಯಯನ ನಡೆಸುತ್ತದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ಜೂನ್‌ನಲ್ಲಿ ಅಮೆರಿಕದ ಮಾಜಿ ರಾಜತಾಂತ್ರಿಕ ನಿಕೋಲಸ್ ಬರ್ನ್ಸ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. “ನಮ್ಮಲ್ಲಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರವಿದೆ. ಇದು ಕಠಿಣ ಲಾಕ್‌ಡೌನ್ ವಿಧಿಸಲು ನಿರ್ಧರಿಸಿತು ಮತ್ತು ಇದರ ಫಲಿತಾಂಶವು ಎಲ್ಲರಿಗೂ ಕಾಣುತ್ತದೆ. ನೀವು ಸಾವಿರಾರು ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ಸಾವಿರಾರು ಕಿಲೋಮೀಟರ್ ನಡೆದುಕೊಂಡು ಹೋಗಿದ್ದೀರಿ. ಈ ರೀತಿಯ ನಾಯಕತ್ವವು ತುಂಬಾ ವಿಚ್ಛಿದ್ರಕಾರಕವಾಗಿದೆ” ಎಂದು ಅವರು ಟೀಕಿಸಿದ್ದರು.

ನೋಟು ಅಮಾನ್ಯೀಕರಣ ಘೋಷಿಸುವಾಗ, ಜಿಎಸ್‌ಟಿ ಜಾರಿಗೆ ತರುವಾಗ ಮತ್ತು ಲಾಕ್‌ಡೌನ್ ವಿಧಿಸುವಾಗ ಮೋದಿಯವರು ತಜ್ಞರ, ವಿರೋಧ ಪಕ್ಷಗಳ ಸಲಹೆ ಕೇಳಿಲ್ಲ. ಏಕಾಏಕಿ ಹೇರಿದ ಪರಿಣಾಮ ದೇಶದ ಕೋಟ್ಯಂತರ ಜನರು ತೊಂದರೆಗೀಡಾಗಿದ್ದಾರೆ. ಅಲ್ಲದೇ ಕೋವಿಡ್ ವಿರುದ್ಧ ಹೋರಾಡುವ ಯಾವುದೇ ಸಮರ್ಪಕ ಯೋಜನೆಯನ್ನು ನರೇಂದ್ರ ಮೋದಿಯವರು ಹೊಂದಿಲ್ಲವೆಂಬುದು ರಾಹುಲ್ ಗಾಂಧಿಯವರ ಆರೋಪವಾಗಿದೆ.

ಭಾರತವೂ ಕೊರೊನಾ ಪೀಡಿತ ಮೂರನೇ ಕೆಟ್ಟ ರಾಷ್ಟ್ರವಾಗಿದೆ. ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವಿರುದ್ಧದ ಯುದ್ಧ ಕೇವಲ 21 ದಿನಗಳು ಮಾತ್ರ ಎಂದು ವಿಶ್ವಾಸದಿಂದ ಹೇಳಿದ್ದರು ಎಂದು ಯುವ ಚಿಂತಕ ಧೃವ್ ರಾಠೀ ಟ್ವೀಟ್ ಮಾಡಿದ್ದಾರೆ.

https://twitter.com/dhruv_rathee/status/1280009005323223040?ref_src=twsrc%5Etfw%7Ctwcamp%5Etweetembed%7Ctwterm%5E1280009005323223040%7Ctwgr%5E&ref_url=http%3A%2F%2Fnaanugauri.com%2Fharvard-business-school-studies-these-three-failures-of-modi-rahul-gandhi%2F


ಇದನ್ನೂ ಓದಿಫೇಕ್‌ನ್ಯೂಸ್‌ ಪ್ರೋತ್ಸಾಹಿಸುವ ಬಿಜೆಪಿ; ಫ್ಯಾಕ್ಟ್‌ಚೆಕ್‌ಗಾಗಿ ಟೆಂಡರ್‌ ಕರೆದ ಮೋದಿ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights