ಕೊರೊನಾ ಬೆನ್ನಲ್ಲೇ ಚೀನಾದಲ್ಲಿ ಪ್ಲೇಗ್‌ ರೋಗ ಮತ್ತೆ ಪ್ರತ್ಯಕ್ಷ!

ಇಡೀ ವಿಶ್ವಕ್ಕೆ ಅನೇಕ ವಸ್ತುಗಳನ್ನ ರಫ್ತು ಮಾಡಿ ಬಲಿಷ್ಠ ರಾಷ್ಟ್ರವೆನಿಸಿರುವ ಚೀನಾದಿಂದ ರೋಗಗಳೂ ರಫ್ತಾಗುತ್ತವೆ. ಐತಿಹಾಸಿಕವಾಗಿ ವಿಶ್ವವನ್ನ ಬಾಧಿಸಿರುವ ಅನೇಕ ರೋಗಗಳಿಗೆ ಚೀನಾವೇ ಮೂಲವಾಗಿದೆ. ಕೋವಿಡ್-19 ವೈರಾಣು ರೋಗ ಕೂಡ ಜನ್ಮತಳೆದದ್ದು ಚೀನಾದ ವುಹಾನ್ ನಗರಿಯಲ್ಲೇ. ಈ ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವೇ ತತ್ತರಿಸಿಹೋಗುತ್ತಿದೆ. ಇದೇ ಹೊತ್ತಲ್ಲಿ ಈಗ ಚೀನಾದಲ್ಲಿ ಪ್ಲೇಗ್ ಎಂಬ ಭೀಕರ ಮಹಾಮಾರಿ ಮತ್ತೆ ಪ್ರತ್ಯಕ್ಷವಾಗಿದೆ. ಚೀನಾದ ಉತ್ತರ ಭಾಗದಲ್ಲಿರುವ ಇನ್ನರ್ ಮಂಗೋಲಿಯಾ ಪ್ರದೇಶದ ಬಯಣ್ಣುರ್ ಎಂಬ ನಗರದ ಆಸ್ಪತ್ರೆಯೊಂದರಲ್ಲಿ ಬುಬೋನಿಕ್ ಪ್ಲೇಗ್ ಪ್ರಕರಣ ಪತ್ತೆಯಾಗಿದೆ.

ಇದರ ಬೆನ್ನಲ್ಲೇ ಚೀನಾದಲ್ಲಿ ಈಗ ಪ್ಲೇಗ್ ಹರಡುವ ಸಾಧ್ಯತೆ ಇರುವುದರಿಂದ ಲೆವೆಲ್ 3 ಅಲರ್ಟ್ ಹೊರಡಿಸಲಾಗಿದೆ. ಕೋವಿಡ್ ರೋಗಕ್ಕೆ ವೈರಸ್ ಸೋಂಕು ಕಾರಣವಾಗದರೆ, ಈ ಪ್ಲೇಗ್ ಕಾಯಿಲೆಗೆ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ. ಹೆಗ್ಗಣ, ತೋಡದಂತಹ ಪ್ರಾಣಿಗಳ(Rodents) ಮೈಮೇಲಿರುವ ಚಿಗಟಗಳಿಂದ (fFleas) ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ರವಾನೆಯಾಗಿ ಆ ಮೂಲಕ ಸೋಂಕು ಹರಡುತ್ತದೆ.

21ನೇ ಶತಮಾನಕ್ಕೂ ಮುನ್ನ ಇಡೀ ವಿಶ್ವವನ್ನೇ ಅತಿ ಹೆಚ್ಚು ಬಾಧಿಸಿದ್ದ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಪ್ಲೇಗ್ ಮತ್ತು ಕಾಲರಾ ಪ್ರಮುಖವಾದವು. ಪ್ಲೇಗ್ನಲ್ಲಿ ಮೂರು ವಿಧಗಳಿವೆ. ಈಗ ಚೀನಾದಲ್ಲಿ ಮರುಪ್ರತ್ನಕ್ಷವಾಗಿರುವ ಬುಬೋನಿಕ್ ಪ್ಲೇಗ್, ಸೆಪ್ಟಿಸೆಮಿಕ್ ಪ್ಲೇಗ್ ಮತ್ತು ನ್ಯೂಮೋನಿಕ್ ಪ್ಲೇಗ್. ಯೆರ್ಸಿನಿಯಾ ಪೆಸ್ಟ್ಸ್ (Yersinia Pests) ಎಂದು ಹೆಸರಿಲಾಗಿರುವ ಬ್ಯಾಕ್ಟೀರಿಯಾಗಳು ಈ ಪ್ಲೇಗ್ ಕಾಯಿಲೆಗೆ ಕಾರಣವಾಗುತ್ತವೆ. ನ್ಯೂಮೋನಿಕ್ ಪ್ಲೇಗ್ ಗಾಳಿಯಲ್ಲು ಹರಡುವುದರಿಂದ ಬಹಳ ಅಪಾಯಕಾರಿ ಎನಿಸುತ್ತದೆ. ಆದರೆ, ಬುಬೋನಿಕ್ ಪ್ಲೇಗ್ ಮುಖ್ಯವಾಗಿ ಚಿಗಟಗಳ ಮೂಲಕ ಮನುಷ್ಯರಿಗೆ ರವಾನೆಯಾಗುತ್ತದೆ. ಸೋಂಕಿತ ಮನುಷ್ಯನ ಎಂಜಲು, ಗೊಣ್ಣೆ, ಕಫ, ರಕ್ತ ಇತ್ಯಾದಿ ಸಂಪರ್ಕದ ಮೂಲಕವೂ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿತ ಹೆಗ್ಗಣದ ಮಾಂಸ ತಿಂದವರಿಗೂ ಸೋಂಕು ತಗುಲುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights