ಹೊರ ರಾಜ್ಯಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಇಲ್ಲ, ಮನೆಯಲ್ಲೇ ಕ್ವಾರಂಟೈನ್‌; ಹೊರಬಂದ್ರೆ ಕಠಿಣ ಶಿಕ್ಷೆ!

ಮಹಾರಾಷ್ಟ್ರ ಸೇರಿದಂತೆ ಯಾವುದೇ ಹೊರ ರಾಜ್ಯಗಳಿಂದ ಬಂದರೂ ಕ್ವಾರಂಟೈನ್‌ ಆಗಲೇಬೇಕು,  ಕೊರೊನಾ ಕೇಸುಗಳ ಹೆಚ್ಚಳದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಯಂತ್ರಣಕ್ಕೆ ಸರಕಾರ ಮುಂದಾಗಿದೆ. ಹೊರ ರಾಜ್ಯಗಳಿಂದ ಇಲ್ಲಿಗೆ ಬರುವವರು ಇನ್ನು ಮುಂದೆ 14 ದಿನಗಳ ಕಾಲ ಕಡ್ಡಾಯ ಮನೆ ಕ್ವಾರಂಟಿಗೆ ಒಳಪಡಬೇಕು ಎಂದು ಸರಕಾರ ಆದೇಶಿಸಿದೆ.

ಕೊರೊನಾ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ. ಮಳೆಗಾಲ ಆರಂಭ ಆಗಿರುವುದರಿಂದ ಶೀತ ಜ್ವರ, ನೆಗಡಿ, ಕೆಮ್ಮು ಬರುವುದು ಸಾಮಾನ್ಯ. ನಿಮಗೆ ಯಾವುದೇ ರೀತಿಯ ಲಕ್ಷಣ ಕಂಡುಬಂದ ಕೂಡಲೇ ನಿಮ್ಮ ಹತ್ತಿರದ ಫೀವರ್ ಕ್ಲಿನಿಕ್ ಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ಪ್ರಾಥಮಿಕ ಹಂತದಲ್ಲೇ ಎಚ್ಚರ ವಹಿಸಿದರೆ ಚಿಕಿತ್ಸ ಸುಲಭ ಎಂದು ವೈದ್ಯ ಶಿಕ್ಷಣಸ ಸಚಿವ ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಓಡಾಟಕ್ಕೆ ಕಡಿವಾಣ ಹಾಕುವ ಕಾನೂನು ಜಾರಿಗೆ ತರುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಹಿರಿಯ ನಾಗರೀಕರಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವ ಸವಾಲು ಎಲ್ಲರ ಮೇಲಿದೆ. ಅದಕ್ಕಾಗಿಯೇ ಅವರನ್ ಹೊರ ಕಳುಹಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನತೆ ಮೇಲಿದೆ.

ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ೬೦ ವಯಸ್ಸಿಗಿಂತ ಮೇಲ್ಪಟ್ಟವರು, ಜ್ವರ ಲಕ್ಷಣಗಳಿರುವ ಹಿರಿಯ ನಾಗರೀಕರನ್ನು ಟೆಸ್ಟ್‌ಗೆ ಒಳಪಡಿಸುವಂತೆ ಕಾಯ೯ಪಡೆಗಳಿಗೆ ಸೂಚನೆ ನೀಡಲಾಗಿದೆ. ಹಿರಿಯ ನಾಗರೀಕರನ್ನು ಮನೆಗಳಿಂದ ಹೊರ ಬಿಡಬಾರದು ಎಂಬ ಕಾನೂನು ಜಾರಿಗೂ ಚಿಂತನೆ ನಡೆಸಲಾಗುತ್ತಿದೆ. ತಜ್ಞರು ಮತ್ತು ಪ್ರಮುಖರ ಜತೆ ಈ ಕುರಿತು ಚಚಿ೯ಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟನೆ ತಿಳಿಸಿದೆ..

ಇದೇ ವೇಳೆ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಎಲ್ಲಿಯಾದರೂ ಚಿಕಿತ್ಸೆಯಲ್ಲಿ, ದಾಖಲು ಮಾಡಿಕೊಳ್ಳುವಲ್ಲಿ, ಟೆಸ್ಟ್‌ ವರದಿಗಳಿಗೆ ಸಂಬಂಧಿಸಿದ ದೂರು ಇದ್ದಲ್ಲಿ, ಚಿಕಿತ್ಸೆ ನಿರಾಕರಿಸಿದರೆ 1912 ನಂಬರಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights