ಅತ್ಯಾಚಾರಕೊಳ್ಳಗಾದ ಸಂತ್ರಸ್ತೆ ಮೇಲೆ ಕಾಮ ಕೃತ್ಯವೆಸಗಿದ ಕಡಬ ಪೇದೆ..!
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣಾ ಪೇದೆಯೊಬ್ಬ ಅತ್ಯಾಚಾರಕೊಳ್ಳಗಾದ ಸಂತ್ರಸ್ತೆ ಮೇಲೆ ಕಾಮ ಕೃತ್ಯವೆಸಗಿ ಗರ್ಭಿಣಿಯನ್ನಾಗಿಸಿದ ಘಟನೆ ಬೆಳಕಿಗೆ ಬಂದಿದೆ.
ಅತ್ಯಾಚಾರದ ದೂರು ನೀಡಲು ಬಂದ ಸಂತ್ರಸ್ತೆಯನ್ನು ಪೊಲೀಸ್ ಠಾಣೆಯ ಪೇದೆಯೋರ್ವ ದೈಹಿಕವಾಗಿ ಬಳಿಸಿಕೊಂಡಿದ್ದಾನೆ. ಶಿವರಾಜ್ ಎಂಬ ಪೇದೆ 16 ವರ್ಷದ ಸಂತ್ರಸ್ತೆಯನ್ನು ಕಾಮ ಕೃತ್ಯಕ್ಕೆ ಬಳಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ದೂರು ನೀಡಲು ಬಂದಿದ್ದ ಸಂತ್ರಸ್ತೆಗೆ ಪೇದೆ ಶಿವರಾಜ್ ಪರಿಚಯವಾಗಿದ್ದಾನೆ. ಯುವತಿ ತಂದೆ-ತಾಯಿ ಕೂಲಿಗೆ ಹೋಗುತ್ತಿದ್ದ ವೇಳೆ ಶಿವರಾಜ್ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ಕೊಡುವ ನೆಪದಲ್ಲಿ ಸಂತ್ರಸ್ತೆ ಮನೆಗೆ ಆಗಮಿಸುತ್ತಿದ್ದನು. ಈ ವೇಳೆ ಪದೇ ಪದೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿಯ ದೇಹದಲ್ಲಿನ ಬದಲಾವಣೆ ಕಂಡ ಪೋಷಕರು ಯುವತಿಯನ್ನು ಪ್ರಶ್ನಿಸಿದ್ದಾರೆ. ಆಗ ಯುವತಿ ತಾನು 5 ತಿಂಗಳ ಗರ್ಭಿಣಿ ಎಂಬುದಾಗಿ ಹೇಳಿಕೊಂಡಿದ್ದಾಳೆ.
ಜೊತೆಗೆ ಇದಕ್ಕೆ ಪೇದೆ ಶಿವರಾಜ್ ಕಾರಣ ಎಂದು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಈಗಾಗಲೇ ಮಗಳ ಮೇಲಿನ ಅತ್ಯಾಚಾರದಿಂದ ನಲುಗಿ ಹೋಗಿದ್ದ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಇದೇ ದು:ಖದಲ್ಲಿರುವ ಪೋಷಕರಿಗೆ ಆರೋಪಿ ಪೇದೆ 35 ಸಾವಿರ ನೀಡಿ ಗರ್ಭಪಾತ ಮಾಡಿಸಿಕೊಳ್ಳಲು ತಿಳಿಸಿದ್ದಾನೆ. ಆದರೆ ಗರ್ಭಪಾತ ಮಾಡಿಸಲು ಸಂತ್ರಸ್ತೆಯ ತಂದೆ-ತಾಯಿ ನಿರಾಕರಿಸಿದ್ದರು ಎಂದು ದೂರಿನಲ್ಲಿ ತಿಳಿಸಿಲಾಗಿದೆ.
ಘಟನೆ ಬಳಿಕ ಸೆಪ್ಟಂಬರ್ 18ರಿಂದ ಯುವತಿ ಹಾಗೂ ತಾಯಿ ಇಬ್ಬರೂ ನಾಪತ್ತೆಯಾಗಿದ್ದಾರೆ. ಫೋನ್ ಕರೆಯಲ್ಲಿ ಶಿವರಾಜ್ ಜೊತೆ ಮಾತನಾಡಿದ ಸಂತ್ರಸ್ತೆ ತಾಯಿ ಗರ್ಭಪಾತ ಮಾಡಿಸುವುದಾಗಿ ಹೇಳಿದ್ದಳಂತೆ. ಆ ಬಳಿಕ ತಾಯಿ-ಮಗಳು ಇಬ್ಬರೂ ನಾಪತ್ತೆಯಾಘಿದ್ದರೆ. ಸದ್ಯ ಕಡಬ ಪೊಲೀಸ್ ಠಾಣೆಯಲ್ಲಿ ಪೇದೆ ಶಿವರಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾಋಣೆ ಮಾಡಲಾಗುತ್ತಿದೆ.
ವಿಚಾರಣೆ ವೇಳೆ ಪೇದೆ ಹಲವಾರು ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ನೀಡಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡಲು ಬರುವ ಅತ್ಯಾಚಾರಕ್ಕೆ ಒಳಗಾದ ಯುವತಿಯರು, ಕೌಟುಂಬಿಕ ಕಲಹಗಳಿಗೆ ಒಳಗಾದವರೇ ಈತನ ಮೇನ್ ಟಾರ್ಗೇಟ್ ಆಗಿರುತ್ತಿದ್ದರು. ನೋಂದು ಬಂದ ಮಹಿಳೆಯರ ಫೋನ್ ನಂಬರ್ ಅನ್ನು ಪೇದೆ ತೆಗೆದುಕೊಳ್ಳುತ್ತಿದ್ದನು. ನಂತರ ಅವರನ್ನು ಸಂಪರ್ಕಿಸಿ ಸಂಬಂಧ ಬೆಳೆಸುತ್ತಿದ್ದನು. ಹೀಗೆ ಹಲವಾರು ಮಹಿಳೆಯರನ್ನು ಈತ ತನ್ನ ಕಾಮ ಕೃತ್ಯಕ್ಕೆ ಬಳಸಿಕೊಂಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.