ಟಾರ್ಪಾಲಿನ್ ಹಾಳೆಯೊಳಗೆ ರಸ್ತೆ ಬದಿ ಮಲಗಿದ್ದ ವ್ಯಕ್ತಿ ಕಂಡು ಡೆಡ್ ಬಾಡಿ ಅಂದುಕೊಂಡ ಜನ!

ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಈ ದಿನ ಮಾನಗಳಲ್ಲಿ ಯಾರನ್ನು ಕಂಡರು ಜನ ಕೊರೊನಾ ಇರಬಹುದು ಎಂದು ಅನುಮಾನಿಸುವುದನ್ನು ರೂಢಿಸಿಕೊಂಡುಬಿಟ್ಟಿದ್ದಾರೆ. ಇಂತಹದೊಂದು ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ ಮಲಗಿರುವ ವ್ಯಕ್ತಿಯನ್ನು ಕಂಡು ವಾಹನ ಸವಾರರು ಭಯಭೀತರಾದ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಟಾರ್ಪಾಲಿನ್ ಹಾಳೆಯೊಳಗೆ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಗಾಜಿಯಾಬಾದ್‌ನಲ್ಲಿ ಮೃತ ದೇಹ ಎಂದು ತಪ್ಪಾಗಿ ಗ್ರಹಿಸಲಾಗಿದೆ. ಈ ವಿಲಕ್ಷಣ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ಇದು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಘಜಿಯಾಬಾದ್‌ನ ಬಿಡುವಿಲ್ಲದೆ ವಾಹನಗಳು ಓಡಾಡುವ ರಸ್ತೆಯಲ್ಲಿ ಬಿಳಿ ಹಾಳೆಯಿಂದ ಮುಚ್ಚಿದ ದೇಹದ ಬಳಿ ಜನಸಮೂಹ ಒಟ್ಟುಗೂಡುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದು.

ಇದು ಮೃತ ದೇಹ ಎಂದು ಊಹಿಸಿದ ಜನ ವ್ಯಕ್ತಿ ಸತ್ತಿದ್ದಾನೆಂದು ಭಾವಿಸಿ ಸ್ಥಳೀಯ ಆಡಳಿತವನ್ನು ಕರೆಸಿದ್ದಾರೆ. ಅವನ ಸುತ್ತಲು ಪೊಲೀಸರು ಜನರು ಜಮಾಯಿಸುತ್ತಿದ್ದಂತೆ ಗದ್ದಲಕ್ಕೆ ಗಾಢವಾಗಿ ನಿದ್ದೆ ಮಾಡುತ್ತಿದ್ದ ವ್ಯಕ್ತಿ ಎಚ್ಚರಗೊಂಡಿದ್ದಾನೆ. ಈ ವ್ಯಕ್ತಿ ಎಚ್ಚರಗೊಳ್ಳುತ್ತಿದ್ದಂತೆ ಸುತ್ತಲು ನೆರೆದ ಜನ ದೂರ ಹೋಗಿದ್ದಾರೆ. ಅಲ್ಲಿಗೆ 29 ಸೆಕೆಂಡುಗಳ ಈ ವಿಡಿಯೋ ಮುಕ್ತಾಯಗೊಳ್ಳುತ್ತವೆ.

ವೀಡಿಯೊವನ್ನು ಇಲ್ಲಿ ನೋಡಿ:

https://twitter.com/saurabh3vedi/status/1303382680373874695?ref_src=twsrc%5Etfw%7Ctwcamp%5Etweetembed%7Ctwterm%5E1303382680373874695%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fdead-body-lying-on-road-turns-out-to-be-sleeping-man-viral-video-leaves-netizens-amused-6589514%2F

ಘಟನೆ ಯಾವಾಗ ಸಂಭವಿಸಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. “ಸತ್ತ ವ್ಯಕ್ತಿ ಎಂದು ಭಾವಿಸಿದ್ದ ಅವನ ದೇಹ ಯಾವಾಗ ಚಲಿಸಲಾರಂಭಿಸಿತೋ ಆಗ ಜನರಲ್ಲಿ ಆದ ಭಯಾನಕತೆಯನ್ನು ಕಲ್ಪಿಸಿಕೊಳ್ಳಿ” ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು “ನಾನು ಇಂದು ನೋಡಿದ ಅತ್ಯುತ್ತಮ ವಿಷಯ” ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿದ ಜನ ಸಾಕಷ್ಟು ಕಾಂಮೆಂಟ್ ಗಳನ್ನು ಮಾಡಿದ್ದಾರೆ.

https://twitter.com/n_tulse/status/1303623998501056512?ref_src=twsrc%5Etfw%7Ctwcamp%5Etweetembed%7Ctwterm%5E1303623998501056512%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fdead-body-lying-on-road-turns-out-to-be-sleeping-man-viral-video-leaves-netizens-amused-6589514%2F

https://twitter.com/RajatKa50803223/status/1303612641626054656?ref_src=twsrc%5Etfw%7Ctwcamp%5Etweetembed%7Ctwterm%5E1303612641626054656%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fdead-body-lying-on-road-turns-out-to-be-sleeping-man-viral-video-leaves-netizens-amused-6589514%2F

https://twitter.com/ankush7rma/status/1303595015017381888?ref_src=twsrc%5Etfw%7Ctwcamp%5Etweetembed%7Ctwterm%5E1303595015017381888%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fdead-body-lying-on-road-turns-out-to-be-sleeping-man-viral-video-leaves-netizens-amused-6589514%2F

https://twitter.com/samratsunnyshah/status/1303581283440680961?ref_src=twsrc%5Etfw%7Ctwcamp%5Etweetembed%7Ctwterm%5E1303581283440680961%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fdead-body-lying-on-road-turns-out-to-be-sleeping-man-viral-video-leaves-netizens-amused-6589514%2F

https://twitter.com/saurabh3vedi/status/1303382680373874695?ref_src=twsrc%5Etfw%7Ctwcamp%5Etweetembed%7Ctwterm%5E1303442348576329728%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fdead-body-lying-on-road-turns-out-to-be-sleeping-man-viral-video-leaves-netizens-amused-6589514%2F

 

Spread the love

Leave a Reply

Your email address will not be published. Required fields are marked *