ರಾಜ್ಯದಲ್ಲಿ BJPಯನ್ನು ಅಧಿಕಾರಕ್ಕೆ ತರಲು ಯೋಗೇಶ್ವರ್ 09 ಕೋಟಿ ಸಾಲ ಮಾಡಿದ್ದರು: ರಮೇಶ್‌ ಜಾರಕಿಹೊಳಿ

ಮೈತ್ರಿ ಸರ್ಕಾರದಲ್ಲಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಅತೃಪ್ತ ಶಾಸಕರನ್ನು ಒಗ್ಗೂಡಿಸಲು. ಅವರನ್ನು ಪಕ್ಷಕ್ಕೆ ಕರೆತಂದು ಮೈತ್ರಿ ಸರ್ಕಾರವನ್ನು ಕೆಡವಲು ಸಿಪಿ ಯೋಗೇಶ್ವರ್ ತಮ್ಮ ಮನೆಯನ್ನು ಅಡವಿಟ್ಟು 9 ಕೋಟಿ ರೂ ಸಾಲ ಮಾಡಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅತೃಪ್ತರನ್ನು ಒಗ್ಗೂಡಿಸಲು ಅವರು ಎಂಟಿಬಿ ನಾಗರಾಜ್‌ ಬಳಿ 9 ಕೋಟಿ ಸಾಲ ಮಾಡಿದ್ದರು. ಅಲ್ಲದೆ, ಅವರ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದರು. ಅವರಿಗೆ ಸಚಿವ ಸ್ಥಾನ ದೊರೆತಿರುವುದು ಸಂತಸದ ವಿಚಾರ ಎಂದು ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಸಾಲ ಮಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ಅಗತ್ಯ ಯೋಗೇಶ್ವರ್ ಗೆ ಇತ್ತೇ? ಇವತ್ತು ಅವರ ವಿರುದ್ಧ ಮಾತನಾಡುವವರು, ಸರಕಾರ ಅಧಿಕಾರಕ್ಕೆ ತರಲು ಅವರು ಪ್ರಯತ್ನ ಪಡುತ್ತಿದ್ದ ವೇಳೆ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿ. ಇಂತಹ ಬ್ಲ್ಯಾಕ್ ಮೇಲ್‍ಗಳಿಗೆಲ್ಲ ಹೆದರುವ ವ್ಯಕ್ತಿಯಲ್ಲ. ಅದು ಯಾವ ಸಿಡಿ ಇದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ರಾಜಕಾರಣದಲ್ಲಿ ಇಂತಹ ಸಿಡಿಗಳು ಬರುತ್ತವೆ, ಹೋಗುತ್ತವೆ. ಆದರೆ, ಒಬ್ಬರ ವೈಯಕ್ತಿಕ ಜೀವನದಲ್ಲಿನ ಘಟನೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆ ಹೊರತು, ಅವರನ್ನು ಮತ್ತಷ್ಟು ಕುಗ್ಗಿಸುವ ಕೆಲಸವನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಹಳ್ಳಿಹಕ್ಕಿ ವಿಶ್ವನಾಥ್‌ ಕೋಗಿಲೆ ಅಲ್ಲ, ಕಾಗೆ; ಅವರಿಗೆ ಮಾನಸಿಕ ಸ್ಟ್ರೋಕ್‌ ಆಗಿದೆ: ಸಾರಾ ಮಹೇಶ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights