ಗೋವಾ ಟ್ರಿಪ್ಗೆ ಹೋಗುತ್ತಿದ್ದ ವೇಳೆ ದುರಂತ : ಅಪಘಾತದಲ್ಲಿ 11 ಜನ ದುರ್ಮರಣ!
ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ವಿಧಿಯ ರಣಕೇಕೆ ಹಾಕಿದ್ದು ದಾವಣಗೆರೆಯಿಂದ ಗೋವಾ ಟ್ರಿಪ್ ಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲ್ಸ್ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ 11 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ.
ದಾವಣೆಗೆರೆಯಿಂದ ಗೋವಾಕ್ಕೆ ಹೋಗುತ್ತಿದ್ದ ಟೆಂಪೋ ಟ್ರಾವೆಲ್ಸ್ ನಲ್ಲಿ ಬಹುತೇಕ ಮಹಿಳೆಯರಿದ್ದರು. ಧಾರವಾಡದ ಇಟ್ಟಿಗಟ್ಟಿ ರಾಷ್ಟ್ರಿಯ ಹೆದ್ದಾರಿ 4ರಲ್ಲಿ ಬೆಳಿಗಿನ ಜಾವ 7.30 ಕ್ಕೆ ಭೀಕರ ಅಪಘಾತ ಸಂಭವಿಸಿದೆ. ಆಸ್ಪತ್ರೆಗೆ ದಾಖಲಾದವರ ನಾಲ್ಕು ಜನರ ಪೈಕಿ ಮೂವರ ಗಂಭೀರವಾಗಿದೆ. 14 ಜನ ಕ್ಲಾಸ್ ಮೆಂಟ್ ಗಳು ಗೋವಾಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗೋವಾ ಟ್ರಿಪ್ ಗೆ ಹೊರಟವರಲ್ಲಿ ಬಹುತೇಕ ಜನ ಮಹಿಳೆಯರೇ ಇದ್ದರು ಎನ್ನಲಾಗುತ್ತಿದೆ.
ಮುಖ ಮತ್ತು ದೇಹ ನಜ್ಜುಗುಂಜಾಗಿರುವುದರಿಂದ ದೇಹಗಳನ್ನು ಗುರುತು ಕೂಡ ಸಿಗುತ್ತಿಲ್ಲ.ಆಸ್ಪತ್ರೆಯ ಬಳಿ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದೇಹಗಳ ಮುಖವೇ ಗುರುತು ಸಿಗದೇ ಇರುವಂತಹ ಸ್ಥಿತಿಯನ್ನು ನೋಡಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಮಾಜಿ ಶಾಸಕರ ಸೊಸೆ ದುರ್ಮಣ ಹೊಂದಿದ್ದಾರೆ. ಸ್ತ್ರೀರೋಗ ತಜ್ಞೆ ವೀಣಾ ಪ್ರಕಾಶ್, ಮಂಜುಳು, ರಾಜೇಶ್ವರಿ ಸೇರಿ 11 ಜನ ಸಾವನ್ನಪ್ಪಿದ್ದಾರೆ.