ಕುಟುಂಬವನ್ನೇ ಕೊಂದ ಕೊರೊನಾ : ಪತಿ ಸಾವಿಗೆ ಮನನೊಂದು ಪತ್ನಿ-ಮಕ್ಕಳೂ ಆತ್ಮಹತ್ಯೆಗೆ ಶರಣು!

ಕೊರೊನಾದಿಂದಾಗಿ ಪತಿ ಸಾವನ್ನಪ್ಪಿದ ಬಳಿಕ ಮನನೊಂದು ಪತ್ನಿ-ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆ ವಸಂತ(40), ಯಶವಂತ್(15) ಹಾಗೂ ನಿಶ್ಚಿತಾ(6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ರೂಮಿನಲ್ಲಿ ಮಗ ಇನ್ನೊಂದು ಕೊಠಡಿಯಲ್ಲಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಲವು ಬಾರಿ ಗಂಡ ಪ್ರಸನ್ನಕುಮಾರ್ ಸಾವಿನ ಬಗ್ಗೆ ಮನನೊಂದಿದ್ದ ಪತ್ನಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುಟುಂಬ ಹಿಂದೆ ಹೇಸರಘಟಕೆರೆಗೆ ಹಾರಿ ಸಾಯಲು ನಿರ್ಧರಿಸಿತ್ತು. ಆದರೆ ಸ್ಥಳೀಯರು ಕಾಪಾಡಿ ಬುದ್ದಿವಾದ ಹೇಳಿ ಕಳುಹಿಸಿದ್ದರು. ಹೀಗೆ ಮೂರು ಬಾರಿ ಅವರು ಸಾಯಲು ಯತ್ನಿಸಿದ್ದರು. ಆದರೆ ಕೊರೊನಾ ಕುಟುಂಬವನ್ನೇ ಕೊಂದಿದೆ. ಆತ್ಮಹತ್ಯೆಗೂ ಮುನ್ನ ಪತ್ನಿ ವಸಂತ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ. ಡೆತ್ ನೋಟ್ ಪ್ರತೀ ಸಾಲು ಆಕೆ ಕಿನ್ನತೆಗೆ ಒಳಗಾಗಿರುವ ಬಗ್ಗೆ ಹೇಳುತ್ತದೆ.

ಆತ್ಮಹತ್ಯೆ ಬಳಿಕ ಡೆತ್ ನೋಟ್ ಬರೆದಿಟ್ಟು ವಸಂತ ಸಾವನ್ನಪ್ಪಿದ್ದಾರೆ. ಡೆತ್ ನೋಟ್ ಪ್ರತೀ ಸಾಲು ಹೇಳುತ್ತದೆ ಆಕೆ ಕಿನ್ನತೆಗೆ ಒಳಗಾಗಿರುವ ಬಗ್ಗೆ ನಮೋದಿಸಿದ್ದಾರೆ. ಡೆತ್ ನೋಟ್ ನಲ್ಲಿ ನಾವು ನಗುವಾಗ ಊರೆಲ್ಲ ನೆಂಟರು. ಆದರೆ ನಾವು ಅಳುವಾಗ ಯಾರೂ ಇಲ್ಲ ಎಂಬ ಸತ್ಯ ಅರಿವಾಗಿದೆ. ಯಾರಿಗೂ ಯಾರು ಇಲ್ಲ ಎಂದು ಬರೆದಿದ್ದಾರೆ.

ನನ್ನ ಗಂಡ ಮನೆ ಖರೀದಿಗೆ ಸಾಲ ಮಾಡಿದ್ದರು. ಪತಿ ಸತ್ತ ಬಳಿಕ ನಮಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಮನೆ ಮಾಡಿ ಸಾಲ ತೀರಿಸಿ ಎಂದು ಡೆತ್ ನೋಟ್ ನಲ್ಲಿ ವಸಂತ ಬರೆದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights