ರಷ್ಯಾದಲ್ಲಿ ಕೋವಿಡ್ ಅಟ್ಟಹಾಸ : ಸೋಂಕಿತರ ಸಂಖ್ಯೆಯಂತೆ ಸಾವುಗಳ ಸಂಖ್ಯೆ ಹೆಚ್ಚಳ!
ಕಳೆದ ಮೂರ್ನಾಲ್ಕು ದಿನಗಳಿಂದ ರಷ್ಟಯದಲ್ಲಿ ಕೊರೊನಾ ಮತ್ತೆ ತನ್ನ ಅಟ್ಟಹಾಸವನ್ನು ಪ್ರದರ್ಶಿಸುತ್ತಿದೆ. ರಷ್ಯಾದ ಕೋವಿಡ್ ಸಾವುಗಳು 4 ನೇ ದಿನಕ್ಕೆ ದಾಖಲೆಯ ಮಟ್ಟಕ್ಕೇರಿಕೆಯಾಗಿವೆ. ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲೂ ಭಾರೀ ಏರಿಕೆ ಉಂಟಾಗಿದೆ.
ರಷ್ಯಾದ ರಾಜ್ಯ ಕೊರೊನವೈರಸ್ ಟಾಸ್ಕ್ ಫೋರ್ಸ್ ಶುಕ್ರವಾರ 887 ಸಾವುಗಳನ್ನು ವರದಿ ಮಾಡಿದೆ. ಇದು ದೇಶದ ಅತ್ಯಧಿಕ ದೈನಂದಿನ ಸಾವಿನ ಸಂಖ್ಯೆಯಾಗಿದೆ. ಇದರ ಒಂದು ದಿನ ಮುಂಚಿತವಾಗಿ ಸಾವಿನ ಸಂಖ್ಯೆ 867 ರಷ್ಟು ದಾಖಲಾಗಿದೆ.
ಜೊತೆಗೆ ಗುರುವಾರ 24,522 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಜುಲೈ ಅಂತ್ಯದ ನಂತರದ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಕಳವಳ ವ್ಯಕ್ಪಡಿಸಿದ್ದಾರೆ.
ಆದರೆ ರಷ್ಯಾದ ಸರ್ಕಾರ ಲಾಕ್‌ಡೌನ್ ವಿಧಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಕಾರ್ಯಪಡೆಯ ಮುಖ್ಯಸ್ಥ ಉಪ ಪ್ರಧಾನ ಮಂತ್ರಿ ಟಟಯಾನಾ ಗೋಲಿಕೋವಾ ಹೇಳುತ್ತಾರೆ. ಅನೇಕ ಪ್ರಾದೇಶಿಕ ಸರ್ಕಾರಗಳು ತಮ್ಮದೇ ಆದ ಸೋಂಕು-ನಿಯಂತ್ರಣ ಕ್ರಮಗಳನ್ನು ಹೊಂದಿವೆ ಎಂದು ಪೆಸ್ಕೋವ್ ಗಮನಸೆಳೆದರು.
2020 ರ ವಸಂತಕಾಲದಲ್ಲಿ ಸಾಂಕ್ರಾಮಿಕ ರೋಗದ ಆರಂಭದಲ್ಲಿ ರಷ್ಯಾ ಕೇವಲ ಒಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಹೊಂದಿತ್ತು. ಅಂದಿನಿಂದ ದೇಶದ ಅಧಿಕಾರಿಗಳು ಕಠಿಣ ನಿರ್ಬಂಧಗಳನ್ನು ಹೇರುವುದನ್ನು ದೂರವಿಟ್ಟಿದ್ದಾರೆ.