ಹದಿಹರೆಯದ ಗೆಳೆಯ ಸೇರಿ 4 ಸ್ನೇಹಿತರಿಂದ ಅತ್ಯಾಚಾರ : ಅಶ್ಲೀಲ ವೀಡಿಯೊ ವೈರಲ್!
ಅಪ್ರಾಪ್ತ ವಯಸ್ಕನೊಬ್ಬ ತನ್ನ ಗೆಳೆಯ ಮೇಲೆ ತನ್ನ ಸ್ನೇಹಿತರೊಂದಿಗೆ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ತನ್ನನ್ನು ಮದುವೆಯಾಗುವ ಭರವಸೆ ನೀಡಿದ ಗೆಳೆಯ ಗೆಳತಿ ಮೇಲೆ ಅತ್ಯಾಚಾರ ಎಸಗುವ ಮೂಲಕ ಅಶ್ಲೀಲ ವಿಡಿಯೋಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಒಂದು ವರ್ಷದಿಂದ ಅತ್ಯಾಚಾರ ಮಾಡಿದನೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಆರೋಪಿಗಳು ಸಂತ್ರಸ್ತೆಯ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ಸಹ ಮಾಡಿದ್ದು ಅವುಗಳನ್ನು ಜನವರಿ 1 ರಂದು ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳನ್ನು ಸಂತ್ರಸ್ತೆಗೆ ತೋರಿಸಿ ಬ್ಲ್ಯಾಕ್ಮೇಲ್ ಮಾಡಿವುದರೊಂದಿಗೆ ಗೆಳೆಯ ಆತನ ಸ್ನೇಹಿತರಿಗೂ ಅತ್ಯಚಾರಕ್ಕೆ ಅನುವು ಮಾಡಿಕೊಟ್ಟಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಆರೋಪಿಗಳು ಮಾಡಿದ ವಿಡಿಯೋಗಳು ವೈರಲ್ ಆದ ನಂತರ ಈ ವಿಷಯ ಬೆಳಕಿಗೆ ಬಂದಿದ್ದು ಸಂತ್ರಸ್ತೆಯ ಕುಟುಂಬ ದೂರು ದಾಖಲಿಸಿದೆ. ಗೆಳೆಯ ಮತ್ತು ಇತರ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬರೇಲಿ ಎಎಸ್ಪಿ ಸತ್ಯನಾರಾಯಣ್ ಪ್ರಜಾಪತ್ ಹೇಳಿದ್ದು, ಅವರ ಜೊತೆಗೆ ವಿಡಿಯೋ ಹಂಚಿಕೊಂಡವರನ್ನೂ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.