ಚಿಕ್ಕಬಳ್ಳಾಪುರದ ಓರ್ವನಲ್ಲಿ ಕೊರೊನಾ ಪತ್ತೆ : ರಾಜ್ಯದಲ್ಲಿ 16ಕ್ಕೇರಿದ ಸೋಂಕಿತರ ಸಂಖ್ಯೆ!

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದ್ದು ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ದೃಢಪಡಿಸಿದ್ದಾರೆ.

ಸಚಿವ ಶ್ರೀರಾಮುಲು ಅವರು ತಮ್ಮ ಟ್ವೀಟ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಾದಿಂದ ವಾಪಾಸ್ಸಾಗಿದ್ದ 32 ವರ್ಷದ ವ್ಯಕ್ತಿಗೆ ಕೊರೊನಾ ಇರೋದು ದೃಢವಾಗಿದೆ. ಈಗಾಗಿ ಈ ವ್ಯಕ್ತಿಗೆ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ನಾಗರೀಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಒಂದು ವಾರದ ಹಿಂದೆ ಮೆಕ್ಕಾದಿಂದ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 2-3 ದಿನಗಳಿಂದ ಜ್ವರ,ಕೆಮ್ಮು ನಗಡಿ ಇರುವುದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಅನುಮಾನಗೊಂಡ ವೈದ್ಯರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಆ ಪ್ರಕಾರ ವ್ಯಕ್ತಿ ಪರೀಕ್ಷೆಗೆ ಒಳಗಾದಾಗ ಸೋಂಕು ದೃಢಪಟ್ಟಿದೆ.

ಮೆಕ್ಕಾಕ್ಕೆ ವ್ಯಕ್ತಿ ತನ್ನ ತಾಯಿಯೊಂದಿಗೆ ಹೋಗಿದ್ದ ಎನ್ನಲಾಗಿದೆ. ತಾಯಿಗೆ ಸೋಂಕು ಇರುವುದು ದೃಢವಾಗಿಲ್ಲ. ಆದರೆ ವ್ಯಕ್ತಿ ಮಾತ್ರ ಸೋಂಕು ಇರುವುದು ದೃಢವಾಗಿದೆ. ಮೆಕ್ಕಾದಿಂದ ಬಂದ ವ್ಯಕ್ತಿ ತಮ್ಮ ಸಂಪ್ರದಾಯದಂತೆ ಪ್ರಸಾದವನ್ನು ಹಂಚಿದ್ದಾನೆ. ಅಲ್ಲಿಂದ ತಂದ ಪ್ರಸಾದವನ್ನು ಸಂಬಂಧಿಕರಿಗೆ ನೀಡಲಾಗಿದೆ. ಇದಕ್ಕಾಗಿ ಕೆಲವೊಂದು ಸ್ಥಳಗಿಳಿಗೂ ಸೋಂಕಿತ ವ್ಯಕ್ತಿ ಓಡಾಡಿದ್ದಾನೆ.  ಜಿಲ್ಲಾಡಳಿತ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ತೀರ್ವ ನಿಗಾದಲ್ಲಿ ಇಟ್ಟಿದ್ದಾರೆ.

ಈ ವ್ಯಕ್ತಿ ಮೆಕ್ಕಾದಿಂದ ಒಂದು ವಾರದ ಹಿಂದೆ ಹೈದರಾಬಾದ್ ಗೆ ಬಂದಿದ್ದಾನೆ. ನಂತರ ಸಂಬಂಧಿಕರ ಮನೆ ಆಂಧ್ರಕ್ಕೆ ಬಂದು ಬಂಧು ಬಳಗ ಭೇಟಿ ಮಾಡಿದ್ದಾನೆ. ನಂತರ ಗೌರಿಬಿದನೂರು ಭೇಟಿ ಮಾಡಿದ್ದಾನೆ. ಗೌರಿ ಬಿದನೂರು ಸುತ್ತ ಮುತ್ತಲು ಹಳ್ಳಿಗಳಲ್ಲಿ ಇರುವ ಸಂಬಂಧಿಕರ ಮನೆಗಳಿಗೆ ಹೋಗಿ ಪ್ರಸಾದವನ್ನು ವಿತರಣೆ ಮಾಡಿ ಬಂದಿದ್ದಾನೆ. ಹೀಗೆ ಕೆಲ ಸ್ಥಳಗಳಿಗೆ ಓಡಾಡಿದ್ದಾನೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳು ಕಾಂಟ್ಯಾಕ್ಟ್  ಟ್ರೇಸ್ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights