ಜಿಂದಾಲ್ ಸಂಸ್ಥೆಯ 103 ಕಾರ್ಮಿಕರಲ್ಲಿ ಕೊರೊನಾ; ಆತಂಕದಲ್ಲಿ ಬಳ್ಳಾರಿ ಜಿಲ್ಲೆಯ ಜನ

ಬಳ್ಳಾರಿಯಲ್ಲಿ ವರದಿಯಾಗಿರುವ 103 ಕೊರೊನಾ ಪ್ರಕರಣಗಳು ತೋರಣಗಲ್ಲಿನಲ್ಲಿರುವ  ಜಿಂದಾಲ್‌ ಸಂಸ್ಥೆಯ ಸ್ಟೀಲ್‌ ಪ್ಲಾಂಟ್‌ಗೆ ಸಂಕರ್ಪ ಹೊಂದಿವೆ. ಜಿಂದಾಲ್‌ನ ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಬಳ್ಳಾರಿಯಲ್ಲಿರುವ ಜೆಎಸ್‌ಡಬ್ಲ್ಯುನ ಕೋರೆಕ್ಸ್ ಘಟಕದಲ್ಲಿ 35 ವರ್ಷದ ಕಾರ್ಮಿಕರೊಬ್ಬರು ತಮಿಳುನಾಡಿಗೆ ಮೇ ಕೊನೆಯಲ್ಲಿ ಪ್ರಯಾಣಿಸಿ ಬಳ್ಳಾರಿಗೆ ಮರಳಿದ್ದರು. ತಮಿಳುನಾಡಿನಲ್ಲಿದ್ದ ಅವರ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಂತರ ಆತನಲ್ಲಿಯೂ ಜ್ವರ ಮತ್ತು ಶೀತದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪರೀಕ್ಷೆಯ ನಂತರ ಆತನಲ್ಲಿಯೂ ಕೊರೊನಾ ಸೋಂಕು ದೃಢಪಟ್ಟಿದೆ.

BJP sees scam in move to sell land to Jindal

ತಮಿಳುನಾಡಿನಿಂದ ಹಿಂದಿರುಗಿದ ಕಾರ್ಮಿಕನಲ್ಲಿ ಸೋಂಕು ದೃಢಪಟ್ಟ ಬಳಿಕ ಕಾರ್ಖಾನೆಯ ಎಲ್ಲಾ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟಿರುವ ರೋಗಿಗಳನ್ನು ಕೊರೊನಾ ಆಸ್ಪತ್ರೆಗೆ ದಾಖಕಲಿಸಲಾಗಿದ್ದು, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 420 ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿದೆ.

“ನಾವು ಜೆಎಸ್‌ಡಬ್ಲ್ಯು ಚರ್ಚೆ ನಡೆಸಿದ್ದೇವೆ.  ಜೆಎಸ್‌ಡಬ್ಲ್ಯು ಸ್ಥಾವರದಲ್ಲಿ 30,000 ಕ್ಕೂ ಹೆಚ್ಚು ಕಾರ್ಮಿಕರಿದ್ದು, ಕಾರ್ಖಾನೆಯೊಳಗಿನ ಕಾಮಗಾರಿ ನಿಲ್ಲಿಸಲಾಗುವುದು. ಆದಾಗ್ಯೂ, ಕೆಲವು ಬಾಯ್ಲರ್‌ಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಅವುಗಳನ್ನು ಕಾರ್ಖಾನೆಯ ಸ್ಕೆಲಿಟಲ್‌ ಸಿಬ್ಬಂದಿ ನಿರ್ವಹಿಸುತ್ತಾರೆ. ಕಾರ್ಖಾನೆಯ ಮೂರನೇ ಒಂದು ಭಾಗದಷ್ಟು ಕಾರ್ಮಿಕರು ಕೆಲಸ ಮಾಡುತ್ತಾರೆ ಎಂದು ಸಂಸ್ಥೆ ತಿಳಿಸಿರುವುದಾಗಿ” ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಸೋಂಕಿತರ ಸಂಪರ್ಕಗಳನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದು, ಕಾರ್ಖಾನೆಯ 10,000ಕ್ಕೂ ಹೆಚ್ಚು ಕಾರ್ಮಿಕರು ತಮ್ಮನ್ನು ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಲು ಕೇಳಿಕೊಂಡಿದ್ದಾರೆ.

ಆದರೆ, ಬಳ್ಳಾರಿ ಜಿಲ್ಲೆಯ ನಿವಾಸಿಗಳಲ್ಲಿ ಭೀತಿ ಹರಡಿದೆ. ಜಿಲ್ಲೆಯ ಹಳ್ಳಿಗಳ ನಿವಾಸಿಗಳು ಜೆಎಸ್‌ಡಬ್ಲ್ಯು ಕಾರ್ಖಾನೆಯ ಕಾರ್ಮಿಕರನ್ನು ತಮ್ಮ ಗ್ರಾಮದ ರಸ್ತೆಗಳಿಗೆ ಪ್ರವೇಶಿಸುವುದನ್ನು ತಪ್ಪಿಸಲು ಕೇಳಿಕೊಳ್ಳುತ್ತಿದ್ದಾರೆ. ಅನೇಕ ನಿವಾಸಿಗಳು ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಮನೆಯಲ್ಲಿ ಅಥವಾ ಕಾರ್ಖಾನೆಯಲ್ಲಿಯೇ ತಮ್ಮನ್ನು ತಾವು ಕ್ವಾರಂಟೈನ್‌ ಮಾಡಿಕೊಳ್ಳಲು ಕೇಳಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights