ಫ್ಯಾಕ್ಟ್‌ಚೆಕ್: ಮಮತಾ ಬ್ಯಾನರ್ಜಿಯವರ ಫೋಟೋವನ್ನು ಎಡಿಟ್ ಮಾಡಿ ಹಂಚಿದ ಕಿಡಿಗೇಡಿಗಳು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೊಲಾಜ್ ಮಾಡಲಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಮತಾ ಬ್ಯಾನರ್ಜಿಯವರು ಯುವತಿಯಾಗಿದ್ದಾಗ ತೆಗೆದಿದೆ ಎನ್ನಲಾಗಿರುವ ಫೋಟೋ ಮತ್ತು ಇತ್ತೀಚಿನ ಫೋಟೋ ಎರಡನ್ನು ಹೋಲಿಕೆ ಮಾಡಿ ಪೋಸ್ಟ್‌ವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.

ಆಶಿಸ್ ದುಬೆ ಎನ್ನುವವರು ಇದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿರುವ ಪೋಟೋವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅವರ ಹಲವಾರು ಚಿತ್ರಗಳಿರುವ ಲೇಖನವೊಂದು ಲಭ್ಯವಾಗಿದೆ. ಈ ಲೇಖನದಲ್ಲಿ ಮಮತಾ ಬ್ಯಾನರ್ಜಿಯವರ 1970 ರ ದಶಕದ ಆರಂಭದಲ್ಲಿ ರಾಜಕೀಯ ಜೀವನ ಕುರಿತಾದ ಪೋಟೋಗಳನ್ನು ತೆಗೆಯಲಾಗಿದ್ದು ಅದರಲ್ಲಿ ಕೊಲಾಜ್ ಮಾಡಲಾಗಿರುವ ಫೋಟೊ ಕೂಡ ಇದೆ.

1970 ರಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಪಕ್ಷದ ಮಹಿಳಾ ಪ್ರಧಾನ ಕಾರ್ಯದರ್ಶಿ ಆಗಿದ್ದಾಗಿನ ಚಿತ್ರ
1970 ರಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಪಕ್ಷದ ಮಹಿಳಾ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ತೆಗೆದ ಚಿತ್ರ

ಮಮತಾ ಬ್ಯಾನರ್ಜಿಯವರ ಮೂಲ ಫೋಟೋದಲ್ಲಿ ಯಾವುದೇ ಮೇಕಪ್ ಮತ್ತು ಲಿಪ್ಸ್ ಸ್ಟಿಕ್ ಇಲ್ಲದಿರುವುದನ್ನು ಕಾಣಬಹುದು, ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾದ ಫೋಟೊದಲ್ಲಿ ಮಮತಾ ಬ್ಯಾನರ್ಜಿಯವರ ಫೋಟೊವನ್ನು ಎಡಿಟ್ ಮಾಡುವ ಮೂಲಕ ಮೇಕಪ್ ಹಾಕಿರುವಂತೆ ಮಾಡಲಾಗಿದೆ.

ಎರಡನೇ ಫೋಟೊ ಕುರಿತು ಹುಡುಕಿದಾಗ 2015 ರಲ್ಲಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಭಗವಾನ್ ಜಗನ್ನಾಥ ರತವನ್ನು ನಟಿ ಕೋಯೆಲ್ ಮಲ್ಲಿಕ್ ಅವರೊಂದಿಗೆ ಎಳೆಯುತ್ತಿರುವಾಗ ತೆಗೆದಿದ್ದು, ರಥವನ್ನು ಬಲವಾಗಿ ಎಳೆಯುವ ವೇಳೆ ಈ ಫೋಟೋವನ್ನು ತೆಗೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ  1970 ರಲ್ಲಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ತೆಗೆದಿರುವ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೇಕಪ್ ಮಾಡುವುದು ಅಪರಾಧವಾಗಲಿ, ತಪ್ಪಾಗಲಿ ಅಲ್ಲ, ಮಮತಾ ಬ್ಯಾನರ್ಜಿವರ ರಾಜಕೀಯ ಯಶಸ್ಸನ್ನು ಸಹಿಸದ ಕೆಲವರು ಅವರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಲು ಈ ರೀತಿ ಎಡಿಟ್ ಮಾಡಿರುವ ಫೋಟೋವನ್ನು ವೈರಲ್ ಮಾಡಿದ್ದಾರೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನೃತ್ಯ ಮಾಡುತ್ತಿರುವ ಮಹಿಳೆ ರಾಜಸ್ಥಾನದ ಶ್ರೀಗಂಗಾನಗರದ ಜಿಲ್ಲಾಧಿಕಾರಿಯಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights