ಫ್ಯಾಕ್ಟ್‌ಚೆಕ್: CRPF ಶಿಬಿರದ ಮೇಲೆ ಬುರ್ಖಾ ಧರಿಸಿ ಪೆಟ್ರೋಲ್ ಬಾಂಬ್ ಎಸೆದದ್ದು ಪುರುಷನೆಂಬುದು ಸುಳ್ಳು!

ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನ  ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ವ್ಯಕ್ತಿ ರಯೀಸ್ ಅಹ್ಮದ್ ಭಟ್ ಎಂಬ ಹೇಳಿಕೆಯೊಂದಿಗೆ ಎರಡು ಕೊಲಾಜ್ ಮಾಡಲಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗೂ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿಯನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

30 ಮಾರ್ಚ್ 2022 ರಂದು, ಸೋಪೋರ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು CRPF ಬಂಕರ್‌ಗೆ ಬಾಂಬ್ ಎಸೆದಿದ್ದಾರೆ ಎಂದು ಹಲವಾರು ಮಾಧ್ಯಮ ಏಜೆನ್ಸಿಗಳು ವರದಿ ಮಾಡಿವೆ. ಅದೇ ದಿನ, ‘ANI’ ಜೊತೆ ಮಾತನಾಡುತ್ತಾ, ಕಾಶ್ಮೀರ IGP ವಿಜಯ್ ಕುಮಾರ್  “ನಿನ್ನೆ ಸೋಪೋರ್‌ನ CRPF ಬಂಕರ್‌ಗೆ ಬಾಂಬ್ ಎಸೆದ ಮಹಿಳೆಯನ್ನು ತಕ್ಷಣವೆ ಗುರುತಿಸಿ ಆಕೆಯನ್ನು ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಹಸೀನಾ ಅಖ್ತರ್ ಅವರನ್ನು ಬಂಧಿಸಿರುವುದಾಗಿ ಐಜಿಪಿ ವಿಜಯ್ ಕುಮಾರ್ 31 ಮಾರ್ಚ್ 2022 ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಮಾಹಿತಿಯ ಆಧಾರದಲ್ಲಿ CRPF ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದದ್ದು ರಯೀಸ್ ಅಹ್ಮದ್ ಭಟ್ ಅಲ್ಲ ಎಂದು ಗೊತ್ತಾಗುತ್ತದೆ.

ಗುರುತಿನ ಚೀಟಿ ಹೊಂದಿರುವ  ಫೋಟೋವನ್ನು ಕಾಶ್ಮೀರ ವಲಯ ಪೊಲೀಸರು 30 ಮಾರ್ಚ್ 2022 ರಂದು ಟ್ವೀಟ್ ಮಾಡಿರುವುದು  ಕಂಡುಬಂದಿದೆ. ಟ್ವೀಟ್ ಮಾಡಲಾಗಿರುವ  ಫೋಟೋದಲ್ಲಿ  “ ಎನ್‌ಕೌಂಟರ್‌ನಲ್ಲಿ ಹತನಾದ ಭಯೋತ್ಪಾದಕ (ರಯೀಸ್ ಅಹ್ಮದ್ ಭಟ್) ಮೊದಲು ಪತ್ರಕರ್ತನಾಗಿ ಮತ್ತು ಅನಂತನಾಗ್‌ನಲ್ಲಿ ಆನ್‌ಲೈನ್ ನ್ಯೂಸ್ ಪೋರ್ಟಲ್ ‘ವ್ಯಾಲಿ ನ್ಯೂಸ್ ಸರ್ವಿಸ್’ ಎಂಬ ವೆಬ್‌ ಪೋರ್ಟ್‌ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಸೋಪೋರ್‌ನ ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ರಯೀಸ್ ಅಹ್ಮದ್ ಭಟ್ ಎಂದು ಅಧಿಕಾರಿಗಳು ಹೇಳಿಲ್ಲ. ರಯೀಸ್ ಅಹ್ಮದ್ ಭಟ್ ಅವರ ಎನ್‌ಕೌಂಟರ್‌ಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಜಮ್ಮು ಕಾಶ್ಮೀರದ ಸೋಪೋರ್‌ನ  ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ವ್ಯಕ್ತಿ ಮಹಿಳೆಯೇ ಹೊರತು ಪುರುಷನಲ್ಲ. ವೈರಲ್ ಪೋಸ್ಟ್‌ನಲ್ಲಿ ಕೊಲಾಜ್ ಮಾಡಲಾದ ಫೋಟೋದಲ್ಲಿ ಇರುವ ಗುರುತಿನ ಚೀಟಿ ರಯೀಸ್ ಅಹ್ಮದ್ ಭಟ್ ಎಂಬ ವ್ಯಕ್ತಿಯದ್ದು, ಆತನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು 30 ಮಾರ್ಚ್ 2022 ರಂದು ಟ್ವೀಟ್ ಮಾಡಿದರೆ, ಐಜಿಪಿ ವಿಜಯ್ ಕುಮಾರ್ ಅವರು ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಹಸೀನಾ ಅಖ್ತರ್‌ನನ್ನು ಬಂಧಿಸಿರುವುದಾಗಿ 31 ಮಾರ್ಚ್ 2022 ರಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವ ಬುರ್ಖಾ ತೊಟ್ಟು ಪೆಟ್ರೋಲ್ ಬಾಂಬ್ ಎಸೆದಿರುವ ವ್ಯಕ್ತಿಯು ಮಹಿಳೆ ಎಂದು ದೃಡಪಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ಸುಳ್ಳು ಎಂದು ಖಾತ್ರಿಯಾಗಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಯೋಧ್ಯೆಯಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಇಟ್ಟು ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights