ಇಹಲೋಕ ತ್ಯಜಿಸಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್: ಆತ್ಮಹತ್ಯೆ ಶಂಕೆ

ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈನ್ಲಿರುವ ತಮ್ಮ ಮನೆಯಲ್ಲಿ ಸಾವಿನಪ್ಪಿದ್ದಾರೆ. ಸುಶಾಂತ್‌ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮುಂಬೈ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

34 ವರ್ಷದ ಸುಶಾಂತ್‌ ಅವರ ಶವ ಬಾಂದ್ರಾದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಟಿವಿ ಧಾರಾವಾಹಿ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಸುಶಾಂತ್, ಪವಿತ್ರಾ ರಿಷ್ಟಾ ಕಾರ್ಯಕ್ರಮದ ಮೂಲಕ ಹೆಸರು ಗಳಿಸಿದರು. ಕೈ ಪೊ ಚೆ ಚಿತ್ರದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ನಂತರ ಎಂಎಸ್ ಧೋನಿ ಬಯೋಪಿಕ್ ಮತ್ತು ಕೇದಾರನಾಥ ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ಚಿಚೋರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅವರ ಸಾವಿಗೆ ಆಘಾತ ವ್ಯಕ್ತಪಡಿಸಿದ ನಿರ್ದೆಶಕ ಅನುರಾಗ್ ಕಶ್ಯಪ್, “ಇದು ನಿಜವಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

“ಪ್ರಾಮಾಣಿಕವಾಗಿ ಈ ಸುದ್ದಿ ನನಗೆ ಆಘಾತ ಮತ್ತು ಮಾತಿಲ್ಲದಂತಾಗಿದೆ … ಚಿಚೋರ್‌ನಲ್ಲಿ ಸುಶಾಂತ್‌ಸಿಂಗ್‌ ರಜ್‌ಪುತ್‌ ರನ್ನು ನೋಡಿದ್ದೇನೆ. ಆ ಚಿತ್ರವನ್ನು ನಾನ ಎಷ್ಟು ಆನಂದಿಸಿದ್ದ ಎಂದರೆ ನಾನು ಅದರ ಭಾಗವಾಗಬೇಕೆಂದು ಅದರ ನಿರ್ಮಾಪಕ ನನ್ನ ಸ್ನೇಹಿತ ಸಾಜಿದ್‌ಗೆ ಹೇಳಿದ್ದೆ. ಅಂತಹ ಪ್ರತಿಭಾವಂತ ನಟ … ದೇವರು ಆತನ ಕುಟುಂಬಕ್ಕೆ ಬಲವನ್ನು ನೀಡಲಿ” ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

https://twitter.com/akshaykumar/status/1272096708537638912

ಕಳೆದ ವಾರವಷ್ಟೇ, ಸುಶಾಂತ್ ಅವರ ಮಾಜಿ ವ್ಯವಸ್ಥಾಪಕ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights