MLC election : ಕೈ ಪಾಳೆಯದಲ್ಲಿ ಟಿಕೆಟ್‌ಗಾಗಿ ಡಜನ್‌ಗೂ ಹೆಚ್ಚು ನಾಯಕರ ಪೈಪೋಟಿ..

ಎಂಎಲ್‌ಸಿ ಟಿಕೆಟ್‌ಗಾಗಿ ಕೈ ಪಾಳೆಯದಲ್ಲಿ ಜೋರಾದ ಪೈಪೋಟಿ.. ಆಗಿರುವ ಎಂಆರ್‍ ಸೀತಾರಾಮ್ ಹಾಗೂ ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವಾ ಹೆಸರು ಮುಂಚೂಣಿಗೆ ಬಂದಿವೆ… ಇವರ ಹೆಸರಗಳ ಜೋತೆಗೆ ರೇವಣ್ಣ, ನಜೀರ್, ಬೋಸ್‌ರಾಜು, ವೇಣು ಲಾಬಿಯೂ ಜೋರಾಗಿದೆ…

ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳು ತೀವ್ರ ಲಾಬಿ ನಡಸುತ್ತಿದ್ದು, ಮೂರು ಪಕ್ಷಗಳಲ್ಲಿಯೂ ಚಟುವಟಿಕೆ ಬಿರುಸುಗೊಂಡಿದೆ. ಪರಿಷತ್ತಿನ ಏಳು ಸ್ಥಾನಗಳಿಗೆ ಇದೇ 29ರಂದು ಚುನಾವಣೆ ನಿಗದಿಯಾಗಿದೆ. ತಮ್ಮಗಳ ಸ್ವಂತ ಬಲದ ಆಧಾರದ ಮೇಲೆ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನ ಗೆಲ್ಲುವ ಸ್ಥಿತಿಯಲ್ಲಿವೆ.

Congress candidates list 2019: Party announces names for Lok Sabha ...

ಬಿಜೆಪಿಯಲ್ಲಿ ಮೂವರು ಪಕ್ಷಾಂತರಿಗಳು ಹಾಗೂ ಪಕ್ಷ ನಿಷ್ಢರ ನಡುವೆ ಟಿಕೆಟ್‌ಗಾಗಿ ಯಾದವೀ ಕಲಹವೇ ಏರ್ಪಟ್ಟಿದೆ. ಒಂದು ಸ್ಥಾನಕ್ಕಾಗಿ ಜೆಡಿಎಸ್‌ನಲ್ಲಿ ಮೂವರು ರೇಸಿನಲ್ಲಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಸ್ಥಾನಗಳಿಗೆ ಡಜನ್‌ಗೂ ಹೆಚ್ಚು ಮಂದಿ ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ.

ಆಕಾಂಕ್ಷಿಗಳ ಜೊತೆಗೆ ತಮ್ಮ ಬೆಂಬಲಿಗರಿಗರಿಗೆ ಟಿಕೆಟ್ ಕೊಡಿಸಲು ಕೈ ಮುಖಂಡರು ಸಹ ಅಖಾಡಕ್ಕಿಳಿದಿದ್ದಾರೆ. ಇಲ್ಲಿಂದ ದಿಲ್ಲೀವರೆಗೆ ಲಾಬಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲ ಕೈ ಪಾಳೆಯವನ್ನು ಆವರಿಸಿಕೊಂಡಿದೆ. ನಿವೃತ್ತರಾಗಲಿರುವ ಹಾಲಿಗಳು ಸಹ ತಮಗೆ ಮತ್ತೊಂದು ಅವಧಿ ಬೇಕು ಎಂದು ರಚ್ಚೆ ಹಿಡದಿದ್ದಾರೆ.

ಆದರೆ ಹೈಕಮಾಂಡಿನ ಮರ್ಮ ಅರಿತ ದಿಲ್ಲಿ ಮೂಲಗಳು ಹೇಳುವ ಪ್ರಕಾರ ಲಾಬಿಗಳು ಜೋರಾಗಿದ್ದರೂ ಇಬ್ಬರ ಹೆಸರು ಮುಂಚೂಣಿಗೆ ಬಂದಿವೆ. ಮಾಜಿ ಮಂತ್ರಿ ಹಾಗೂ ರಾಮಯ್ಯ ಸಮೂಹದ ಪ್ರಭಾವಿ ಉದ್ಯಮಿಯೂ ಆಗಿರುವ ಎಂಆರ್‍ ಸೀತಾರಾಮ್ ಹಾಗೂ ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ ಹೆಸರು ಮುನ್ನೆಲೆಗೆ ಬಂದಿವೆ ಎಂದು ಮೂಲಗಳು ಹೇಳಿತ್ತಿವೆ.

ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸೀತಾರಾಮ್ ಮಂತ್ರಿಯಾಗಿದ್ದರೂ ಕಳೆದ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದುಳಿದಿದ್ದರು. ಅಂದಿನಿಂದಲೇ ಅವರು ಎಂಎಲ್ಸಿ ಆಗಲು ಶತ ಪ್ರಯತ್ನ ಆರಂಭಿಸಿದ್ದರು.

ಇನ್ನು ಮಾರ್ಗರೆಟ್ ಆಳ್ ಅವರ ದಿಲ್ಲಿ ಸಂಪರ್ಕ ಬಲವಾಗಿದ್ದು ಈ ಹಿಂದೆ ನೀಡಿದ್ದ ಭರವಸೆಯಂತೆ ಅವರ ಪುತ್ರ ನಿವೇದಿತ್‌ಗೆ ಮಣೆ ಹಾಕಲು ಹೈಕಮಾಂಡ್ ಉತ್ಸುಕವಾಗಿದೆ ಎಂಬ ವರದಿಗಳಿವೆ. ಇನ್ನುಳಿದಂತೆ ಹಾಲಿ ಎಂಎಲ್ಸಿ ವೇಣುಗೋಪಾಲ್, ಮಾಜಿ ಸಚಿವ ರೇವಣ್ಣ, ನಜೀರ್‍ ಅಹ್ಮದ್, ಬೋಸ‌ರಾಜು, ರಾಣಿ ಸತೀಶ್ ಕೂಡ ಮೇಲ್ಮನೆ ಟಿಕೆಟ್ ಆಕಾಂಕ್ಷಿಗಳಾಗಿದ್ದು ಜೊರು ಲಾಬಿ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights