ಫ್ಯಾಕ್ಟ್‌ಚೆಕ್: ಪಂಚಾಯ್ತಿ PDO ಒಬ್ಬರು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಘಟನೆ ಆಂದ್ರಪ್ರದೇಶದ್ದಲ್ಲ

ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜದಲ್ಲಿ ತನ್ನ ಕಚೇರಿಯ ಟೇಬಲ್ , ಕುರ್ಚಿ ಅಂತಿಮವಾಗಿ ತನ್ನ ಕೈಗಳನ್ನು ಧ್ವಜದಿಂದ ಒರೆಸಿಕೊಳ್ಳುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ಗಂಭೀರ ಅಪರಾಧ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ರೀತಿ ಮಾಡುತ್ತಿರುವುದು ತಪ್ಪಲ್ಲವೇ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಸದ್ಯ ಈ ದೃಶ್ಯಾವಳಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಆಂಧ್ರಪ್ರದೇಶದ ಅನಂತಪುರದ ಡೆಪ್ಯುಟಿ ರಿಜಿಸ್ಟ್ರಾರ್ ಎಂದು ಆರೋಪಿಸಲಾಗಿದೆ. ವೀಡಿಯೊವನ್ನು ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರು, ರಾಜ್ಯದಲ್ಲಿ ಆಡಳಿತ YCP ಪಕ್ಷವನ್ನು ದೂಷಿಸಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಸಂಬಂಧಿತ ಕೀವರ್ಡ್‌ಗಳ ಮೂಲಕ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೀಡಿಯೊ ಒಡಿಸ್ಸಾ ರಾಜ್ಯದ್ದು ಎಂಬ ಮಾಹಿತಿ ಲಭ್ಯವಾಗಿದೆ. ವರದಿಯ ಪ್ರಕಾರ, ರಾಷ್ಟ್ರಧ್ವಜವನ್ನು ಧೂಳನ್ನು ಒರೆಸಿ ಪೀಠೋಪಕರಗಳನ್ನು ಸ್ವಚ್ಚಗೊಳಿಸಿವ ಬಟ್ಟೆಯಂತೆ ಬಳಸಿದ ವ್ಯಕ್ತಿ ಸಿಮಿಲಿ ಗ್ರಾಮ ಪಂಚಾಯತ್‌ನ ಪಂಚಾಯತ್ PDO ಪ್ರಶಾಂತ್ ಕುಮಾರ್ ಸ್ವೈನ್ ಎಂದು TIMES OF INDIA ವರದಿ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಅಕ್ಟೋಬರ್ 2022 ರಲ್ಲಿ ಪುರಿಯಲ್ಲಿರುವ ಸಿಮಿಲಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪಂಚಾಯ್ತಿ ಕಚೇರಿಯಲ್ಲಿ ಸಭೆ ನಡೆಸಲು ನಿಶ್ಚಯಿಸಲಾಗಿತ್ತು ಮೊದಲು, ಪೀಠೋಪಕರಣಗಳು ಧೂಳಿನಿಂದ ಕೂಡಿರುವುದನ್ನು ಕಂಡು ಸ್ವೇನ್ ಅವುಗಳನ್ನು ರಾಷ್ಟ್ರಧ್ವಜದಿಂದ ಒರೆಸಿದರು ಎಂದು ಹೇಳಲಾಗಿದೆ.

ಈ ವೀಡಿಯೊವನ್ನು ವಾರ್ಡ್ ಸದಸ್ಯರೊಬ್ಬರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ  ನಂತರ, ಪೊಲೀಸರು ಸ್ವೇನ್ ಅವರನ್ನ ಬಂಧಿಸಲಾಗಿತ್ತು.ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜನವರಿ 12, 2023 ರಂದು, ಸ್ವೈನ್ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಕೇರಳ ಪೊಲೀಸ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಜನವರಿ 21 ರಂದು ಅದೇ ವೀಡಿಯೊದ ಬಗ್ಗೆ ಅನೇಕರು ವಿಚಾರಿಸಿದ್ದಾರೆ ಎಂದು ತಿಳಿಸಿದ್ದು ಗಮನಾರ್ಹವಾಗಿದೆ. ಈ ಘಟನೆ ಒಡಿಶಾದದ್ದು ಎಂದು ಕೇರಳ ಪೊಲೀಸರು ಪುನರುಚ್ಚರಿಸಿದ್ದಾರೆ ಮತ್ತು ಸ್ವೈನ್ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ವ್ಯಕ್ತಿ ಆಂದ್ರಪ್ರದೇಶದ ಡೆಪ್ಯುಟಿ ರಿಜಿಸ್ಟ್ರಾರ್ ಅಲ್ಲ, ಈ ಘಟನೆ 2022ರ ಅಕ್ಟೋಬರ್‌ನಲ್ಲಿ ನಡೆದಿದ್ದು ಒಡಿಸ್ಸಾದ  ಪುರಿಯಲ್ಲಿರುವ ಸಿಮಿಲಿ ಗ್ರಾಮ ಪಂಚಾಯತ್ ನ PDO ಪ್ರಶಾಂತ್ ಕುಮಾರ್ ಸ್ವೈನ್ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಾಂಧೀಜಿ ಬ್ರಿಟೀಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights