FACT CHECK | ಲಕ್ನೋದ ಸಲಾಹುದ್ದೀನ್ ಮನೆಯಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಕೀಮ್ ಸಲಾಹುದ್ದೀನ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಫೋಟೋ ಎಂದು ಚಿತ್ರವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಹಲವು ಪಿಸ್ತೂಗಳನ್ನು ಇಟ್ಟಿರುವುದನ್ನು ಕಾಣಬಹುದು. ಇದರೊಂದಿಗಿರುವ ಹೇಳಿಕೆಯಲ್ಲಿ “ಲಕ್ನೋದ ಹಲೀಮ್ ಸಲಾಹುದ್ದೀನ್ ಮನೆಯಿಂದ 3,000 ಬಂದೂಕುಗಳು ಮತ್ತು 50,000 ಗುಂಡುಗಳನ್ನು ಹೊಂದಿರುವ 20 ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದಿದೆ.

ಹಕೀಮ್ ಮನೆಯಲ್ಲಿ ಕಂಡುಬಂದ 3,000 ಬಂದೂಕುಗಳು, 50,000 ಬುಲೆಟ್ ಕಾರ್ಟ್ರಿಡ್ಜ್ಗಳು ಮತ್ತು 20 ಚೀಲಗಳು ಡಾಲರ್ ಕರೆನ್ಸಿ ನೋಟುಗಳಿಂದ ತುಂಬಿರುವುದನ್ನು ತೋರಿಸುವ ಫೋಟೋ ಮತ್ತು ವೀಡಿಯೊ (ಇಲ್ಲಿ, ಇಲ್ಲಿ, ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2021ರ ಎಕ್ಸ್ ಪೋಸ್ಟ್, 2020ರ ಫೇಸ್ಬುಕ್ ಪೋಸ್ಟ್ ಮತ್ತು 2017 ರಲ್ಲಿ ಹಂಚಿಕೊಂಡ ಮತ್ತೊಂದು ಪೋಸ್ಟ್ನಲ್ಲಿ ಇದೇ ರೀತಿಯ ಫೋಟೊವೊಂದು ಕಂಡುಬಂದಿದೆ.
ಆದರೆ, ಈ ಚಿತ್ರ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಈ ಪೋಸ್ಟ್ಗಳಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಲಕ್ನೋದಲ್ಲಿರುವ ಸಲಾಹುದ್ದೀನ್ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ತನಿಖೆಯ ಸಮಯದಲ್ಲಿ, ಫೋಟೋ ಸ್ಟಾಕ್ ಏಜೆನ್ಸಿ ಅಲಮಿಯ ವೆಬ್ಸೈಟ್ನಲ್ಲಿ ವೈರಲ್ ಫೋಟೋ ಹೋಲುವ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ಅದೇ ದೃಶ್ಯಗಳನ್ನು ಕಾಣಬಹುದು.
![]()
“ಅಯೋವಾ ಅಪರಾಧ ತನಿಖಾ ಇಲಾಖೆಯ ಅಪರಾಧಶಾಸ್ತ್ರಜ್ಞ ಕಾರ್ಲ್ ಬೇಸ್ಮನ್, ಜೂನ್ 7, 2005 ರ ಮಂಗಳವಾರ ಅಯೋವಾದ ಅಂಕೆನಿಯಲ್ಲಿರುವ ಬ್ಯಾಲಿಸ್ಟಿಕ್ಸ್ ಲ್ಯಾಬ್ನಲ್ಲಿ ಇರಿಸಲಾದ 3,300 ಕ್ಕೂ ಹೆಚ್ಚು ಬಂದೂಕುಗಳಲ್ಲಿ ಒಂದನ್ನು ನೋಡುತ್ತಿದ್ದಾರೆ. ಈ ಬಂದೂಕುಗಳನ್ನು ತನಿಖೆಯಲ್ಲಿ ಉಲ್ಲೇಖಗಳಾಗಿ ಬಳಸಲಾಗುತ್ತದೆ” ಎಂದು ಅಸೋಸಿಯೇಟೆಡ್ ಪ್ರೆಸ್ನ ಸ್ಟೀವ್ ಪೋಪ್ಗೆ ಈ ಫೋಟೋದ ಕ್ರೆಡಿಟ್ ನೀಡಲಾಗಿದೆ.
ಅಂಕೆನಿ ಅಮೆರಿಕದ ಅಯೋವಾ ರಾಜ್ಯದ ಒಂದು ನಗರ. ಇಲ್ಲಿನ ಪ್ರಯೋಗಾಲಯವು ಅಪರಾಧಗಳ ತನಿಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ.
ಅಲಮಿಯ ಫೋಟೋ ಮತ್ತು ವೈರಲ್ ಫೋಟೋ ನಡುವಿನ ಹೋಲಿಕೆಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು. ಪಿಸ್ತೂಲ್ ಅನ್ನು ಪರಿಶೀಲಿಸುವ ವ್ಯಕ್ತಿಯನ್ನು ದೃಶ್ಯದಿಂದ ತೆಗೆದರೆ, ಪಿಸ್ತೂಲ್ ಗಳು ಮತ್ತು ಮುಂಭಾಗದ ಗೋಡೆಯ ಮೇಲೆ ಕಂಡುಬರುವ ವಿದ್ಯುತ್ ತಂತಿ ಮತ್ತು ಸಾಕೆಟ್ ನಡುವಿನ ಭಾಗಗಳು ಹೋಲುತ್ತವೆ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಫೋಟೋವನ್ನು ಕ್ವಾಡ್ ಸಿಟಿ ಟೈಮ್ಸ್ ನ 2005 ರ ವರದಿಯಲ್ಲಿಯೂ ಬಳಸಲಾಗಿದೆ.
![]()
ಅಯೋವಾ ಸಾರ್ವಜನಿಕ ಸುರಕ್ಷತಾ ಇಲಾಖೆಯ ವೆಬ್ಸೈಟ್ ಅನ್ನು ಪರಿಶೀಲಿಸುವಾಗ, ಅಯೋವಾ ಅಪರಾಧ ತನಿಖಾ ವಿಭಾಗದ ಅಪರಾಧಶಾಸ್ತ್ರ ಪ್ರಯೋಗಾಲಯದ ವರ್ಚುವಲ್ ಪ್ರವಾಸವನ್ನು ತೋರಿಸುವ ಯೂಟ್ಯೂಬ್ ವೀಡಿಯೋಗೆ ಲಿಂಕ್ ಅನ್ನು ನಾವು ನೋಡಿದ್ದೇವೆ. ವೈರಲ್ ಫೋಟೋದಲ್ಲಿ ಕಂಡುಬರುವಂತೆ 4:11 ರಿಂದ 4:13 ಮತ್ತು 4:48 ರಿಂದ 4:54 ರ ಅವಧಿಯಲ್ಲಿ ಅದೇ ದೃಶ್ಯವನ್ನು ವೀಡಿಯೋ ತೋರಿಸುತ್ತದೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಪಿಸ್ತೂಲ್ಗಳನ್ನು ಅಚ್ಚುಕಟ್ಟಾಗಿ ಇಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ. ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಕೀಮ್ ಸಲಾಹುದ್ದೀನ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಫೋಟೋ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಚಿತ್ರವು ವಾಸ್ತವವಾಗಿ ಅಮೆರಿಕದ ಅಯೋವಾದ ಅಪರಾಧಿಗಳ ಪ್ರಯೋಗಾಲಯದಿಂದ ಬಂದಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಗ್ನಿಶಾಮಕ ಠಾಣೆ ಕುಸಿದು ಬಿದ್ದಿರುವ video ಉಡುಪಿಯದ್ದಲ್ಲ

