FACT CHECK | ಅಗ್ನಿಶಾಮಕ ಠಾಣೆ ಕುಸಿದು ಬಿದ್ದಿರುವ video ಉಡುಪಿಯದ್ದಲ್ಲ

ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ #Udupi ಎಂದು ಟ್ಯಾಗ್ ಮಾಡಲಾಗಿದ್ದು, ಜೊತೆಗೆ ಇದು ಭ್ರಷ್ಟಾಚಾರ ಕಾರಣದಿಂದ ಕುಸಿದಿದೆ ಎಂದು ಹೇಳಲಾಗುತ್ತಿದೆ.

“ಅಗ್ನಿಶಾಮಕ ದಳಕ್ಕೆ ಹಿಂಗಾದ್ರೆ ಅವರ ರಕ್ಷಣೆಗೆ ಬರೋದ್ಯಾರಿ” ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಂಡುಬಂದಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್ ನಲ್ಲಿ ಮೇ 24, 2025 ರಂದು
Sagaing Earthquake Archive ನಲ್ಲಿ ಪ್ರಕಟವಾದ ವಿಡಿಯೋ ಲಭ್ಯವಾಗಿದೆ. ಈ ವೀಡಿಯೋದಲ್ಲಿ ಮ್ಯಾನ್ಮಾರ್‍ನ ಸೇಜಿಯಾಂಗ್‌ ನಲ್ಲಿ ಅಗ್ನಿಶಾಮಕ ದಳದ ಕೇಂದ್ರಕ್ಕೆ ಹಾನಿಯಾಗಿದೆ ಎಂದಿದೆ.

ಈ ಮಾಹಿತಿ ಆಧಾರದಲ್ಲಿಮತ್ತಷ್ಟು ಸರ್ಚ್ ಮಾಡಿದಾಗ, ದಿ ಗಾರ್ಡಿಯನ್ ಏಪ್ರಿಲ್ 1, 2025ರಂದು ಪ್ರಕಟಿಸಿದ ವರದಿ ಲಭ್ಯವಾಗಿದೆ. ಇದರಲ್ಲಿ ನೀಡಲಾದ ಕ್ಯಾಪ್ಷನ್ ನಲ್ಲಿ ”ಮ್ಯಾನ್ಮಾರ್‌ನ ಸಾಗೈಂಗ್‌ನಲ್ಲಿ ಪ್ರಬಲ ಭೂಕಂಪದ ನಂತರ ಕುಸಿದ ಅಗ್ನಿಶಾಮಕ ಠಾಣೆಯ ಬಳಿ ಜನರು ನಿಂತಿದ್ದಾರೆ.” ಎಂದಿದೆ.

ಅದೇ ರೀತಿ ಮಾರ್ಚ್ 29, 2025ರಂದು ಬಿಬಿಸಿ ಕೂಡ ಮ್ಯಾನ್ಮಾರ್ ಭೂಕಂಪ ಬಗ್ಗೆ ವರದಿ ಪ್ರಕಟಿಸಿದ್ದು, ಅದರಲ್ಲೂ ಸಾಗೈಂಗ್ ನಲ್ಲಿ ಅಗ್ನಿಶಾಮಕ ದಳದ ಕಟ್ಟಡ ಬಿದ್ದ ಬಗ್ಗೆ ಫೊಟೋ-ವರದಿಯನ್ನು ಪ್ರಕಟಿಸಿದೆ. ಇದೇ ರೀತಿಯ ವರದಿ ಇಲ್ಲಿ ಇಲ್ಲಿ ನೋಡಬಹುದು. ಹಾಗಾಗಿ ಇದು ಭಾರತದಲ್ಲಿ ನಡೆದ ಘಟನೆಯಲ್ಲ, ಬದಲಾಗಿ ಭೂಕಂಪದಿಂದಾಗಿ ಮ್ಯಾನ್ಮಾರ್‍ ನಲ್ಲಿ ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದ ವಿದ್ಯಮಾನವಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದದಾದರೆ , ಅಗ್ನಿಶಾಮಕ ದಳದ ಠಾಣೆಯ ಕಟ್ಟಡ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದ್ದಲ್ಲ, ಜೊತೆಗೆ ಭ್ರಷ್ಟಾಚಾರದಿಂದಾಗಿ ಕಳಪೆ ಕಾಮಗಾರಿಯ ಪ್ರಕರಣವೂ ಅಲ್ಲ, ಇದು ಮ್ಯಾನ್ಮಾರ್ ನ ಸಾಗೈಂಗ್ ನಲ್ಲಿ ಭೂಕಂಪದಿಂದಾಗಿ ಬಿದ್ದ ಕಟ್ಟಡ ಎನ್ನಲಾಗಿದೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 85 ವರ್ಷದ ವೃದ್ದನ ಮೇಲೆ ಹಸುಗಳು ದಾಳಿ ಮಾಡಿ ಕೊಂದ ಘಟನೆ ನಡೆದಿದ್ದು ತಿರುಪತಿಯಲ್ಲಿ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights