ಅಕಾಲಿದಳದ ಯುವ ಘಟಕದ ನಾಯಕರ ಮೇಲೆ 20 ಸುತ್ತು ಗುಂಡಿಕ್ಕಿ ಹತ್ಯೆ..!
ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಅಕಾಲಿದಳದ ಯುವ ಘಟಕದ ನಾಯಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ದೈಶ್ಯ ಸೆರೆಯಾಗಿದೆ.
ವಿಕಿ ಮಿಡ್ಡುಖೇರಾ ಎಂದು ಕರೆಯಲ್ಪಡುವ ವಿಕ್ರಮ್‌ಜಿತ್ ಸಿಂಗ್ ಮಿಡ್ಡುಖೇರರನ್ನು ಇಬ್ಬರು ಮುಸುಕುಧಾರಿ ದಾಳಿಕೋರರು ಹಿಂಬಾಲಿಸಿ ಪದೇ ಪದೇ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಮಿಡ್ಡುಖೇರಾ ಅವರು ಸೆಕ್ಟರ್ 71 ರಲ್ಲಿರುವ ಮಾಟೌರ್ ಮಾರುಕಟ್ಟೆಯಲ್ಲಿರುವ ಆಸ್ತಿ ಡೀಲರ್ ಕಚೇರಿಗೆ ಭೇಟಿ ನೀಡಲು ಹೋಗುತ್ತಿದ್ದರು.
ಶೂಟರ್‌ಗಳು ವಿಕ್ಕಿಗಾಗಿ ಕಾಯುತ್ತಿರುವುದ ಮತ್ತು ಗುಂಡು ಹಾರಿಸುವುದು ಇಡೀ ಘಟನೆಯ ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.