ನಿಮ್ ಹುಡುಗಿಗೆ ಈ ಪ್ರೇಮಿಗಳ ದಿನ ಯಾವ ರೀತಿ ಇದ್ರೆ ಲೈಕ್ ಆಗಬಹುದು…?

ಪ್ರೇಮಿಗಳ ದಿನ ಆಚರಣೆಗೆ ಪ್ರೇಮಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲ ಗಂಟೆಯಲ್ಲಿ ಪ್ರೇಮಿಗಳ ದಿನವನ್ನ ವೆಲ್ ಕಂ ಮಾಡ್ಬೇಕು. ಆದರೆ ಈ ಪ್ರೇಮಿಗಳ ದಿನವನ್ನು ಯಾರೂ ಕೂಡ ಸುಮ್ ಸುಮ್ನೆ ವೆಲ್ ಕಂ ಮಾಡೋದಕ್ಕೆ ಆಗೋದಿಲ್ಲ. ಯಾಕಂದ್ರೆ ಇದನ್ನ ವೆಲ್ ಕಂ ಮಾಡಿ ಪ್ರೇಯಸಿಗೆ ವಿಶ್ ಮಾಡಬೇಕು ಅಂದ್ರೆ ಬಾಯಲ್ಲಿ ಪ್ರೀತಿಯ ಮಾತು, ಕೈಯಲ್ಲೊಂದು ಗಿಫ್ಟ್ ಹಾಗೂ ಒಂದೊಳ್ಳೆ ಸುಂದರವಾದ ಸ್ಥಳವಿದ್ದರೆನೇ ಅದಕ್ಕೊಂದು ಕಳೆ ಬರೋದು. ಮಾತ್ರವಲ್ಲ ಇಷ್ಟಪಡುವವರನ್ನು ಮೆಚ್ಚಿಸಲು ಸಾಧ್ಯವಾಗೋದು.

ಎಲ್ಲಾ ಹುಡುಗ ಹುಡುಗಿಯರಿಗೆ ಅದ್ರಲ್ಲೂ ಪ್ರೇಮಿಗಳಿಗೆ ಇದೊಂದು ಮಹತ್ವದ ದಿನ. ತಮ್ಮ ಪ್ರೇಮ ನಿವೇದನೆಯನ್ನು ಪ್ರಸ್ತಾಪ ಮಾಡಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ದಿನ. ಹೀಗಾಗಿ ಬಹುತೇಕ ಯುವ ಜೋಡಿಗಳು ಇದನ್ನ ಆದಷ್ಟು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡ್ಬೇಕು ಅಂತ ಯೋಚನೆ ಮಾಡ್ತಾರೆ. ಹೀಗೇನಾದ್ರು ನೀವು ಯೋಚನೆ ಮಾಡ್ತಾಯಿದ್ರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು..

ಪ್ರೇಮಿಗಳ ದಿನ ಹೆಚ್ಚು ಜನ ಗಿಫ್ಟ್ ಗಳನ್ನು ಕೊಡಲು ಬಯಸುತ್ತಾರೆ. ಹೀಗೆ ನಿಮ್ಮ ಪ್ರೀತಿ ಪಾತ್ರರಿಗೆ ಕೊಡುವ ಗಿಫ್ಟ್ ಸರ್ಪೈಸ್ ಆಗಿರಬೇಕು. ಆಗ ಮಾತ್ರ ಒಂದೊಳ್ಳೆ ಥ್ರಿಲ್ ಇರುತ್ತೆ. ಉತ್ಸಾಹ ಕೂಡ ಹೆಚ್ಚಾಗಿರುತ್ತೆ. ಗಿಫ್ಟ್ ಕೊಡುವಾಗ ನಿಮಗೆ ತೋಚಿದ ಗಿಫ್ಟ್ ಖರೀದಿ ಮಾಡುವುದಕ್ಕಿಂತ ಹಿಂದೊಮ್ಮೆ ಮೆಚ್ಚಿ ಅದನ್ನು ಖರೀದಿ ಮಾಡಲಾಗದೇ ಬಿಟ್ಟ ವಸ್ತುವನ್ನು ಗಿಫ್ಟ್ ಆಗಿ ಕೊಡಬಹುದು. ಇದು ನೀವು ಅವರನ್ನು ಎಷ್ಟು ತಿಳಿದುಕೊಂಡಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಜೊತೆಗೆ ಅವರಿಗಿಷ್ಟವಾದದ್ದನ್ನೇ ಕೊಟ್ಟಂತಾಗುತ್ತದೆ.

ಮಾತ್ರವಲ್ಲದೇ ಅವರಿಗೆ ಇಷ್ಟವಾಗುವ ಸ್ಥಳಗಳಿಗೆ ಕರೆದುಕೊಂಡು ಹೋಗುವುದು, ಅವರಿಗೆ ಇಷ್ಟವಾದ ಉಡುಪು ಧರಿಸುವುದು ಅಥವಾ ಧರಿಸಲು ಬಿಡುವುದು. ಇಷ್ಟವಾದ ಆಹಾರ ತಿನ್ನುವುದು ಅಥವಾ ನೀವು ನಿಮ್ಮ ಕೈರುಚಿ ತೋರಿಸಿದರೂ ಇನ್ನೂ ಡಿಫ್ರೆಂಟಾಗಿರುತ್ತದೆ. ಸಿನಿಮಾ ಹೋಗಿ, ಸ್ಪಾ, ಶಾಪಿಂಗ್ ಮಾಡಿಸಿ, ಪಾರ್ಟಿ ಮಾಡುವುದು ಕೂಡ ಒಂದೊಳ್ಳೆ ಅನುಭವ ನೀಡುತ್ತದೆ.

ಮಾತ್ರವಲ್ಲದೇ ಕೊಂಚ ದೂರದ ಪ್ರಯಾಣ ಬೆಳಸುವವರಾಗಿದ್ದರೆ, ಅಂಥವರು ಇಷ್ಟವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸೆಲೆಬ್ರೇಟ್ ಮಾಡಬಹುದು. ಒಂದೆರೆಡು ದಿನ ಕಾಲ ಕೂಡ ಕಳೆಯಬಹುದು. ಆದರೆ ಹೋಗುವಂತ ಸ್ಥಳ ಮಾತ್ರ ಇಬ್ಬರಿಗೂ ಇಷ್ಟ ಆಗರಬೇಕು ಅಷ್ಟೆ. ಒಟ್ಟಿನಲ್ಲಿ ಪ್ರೀತಿ, ಸ್ನೇಹ ಹಾಗೂ ಭಾವನೆಗಳು ಮನುಷ್ಯನಿಗೆ ಅತ್ಯಗತ್ಯ. ಭಾವನೆ ಹಾಗೂ ಮನಸ್ಸಿಗೆ ನೋವುಂಟಾದರೆ ಅದನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಪ್ರೇಮಿ ಅಥವಾ ಸಂಗಾತಿಯ ಮೇಲೆ ನಿಮ್ಮ ಪ್ರೀತಿ ಸತ್ಯ ಹಾಗೂ ನಿಷ್ಕಲ್ಮಶವಾಗಿರಲಿ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights