ರಾಹುಲ್‌ಗಾಂಧಿಯನ್ನು ‘ಡೂಮ್ಸ್ ಡೇ ಮ್ಯಾನ್ ಆಫ್ ಇಂಡಿಯಾ’ ಎಂದ ನಿರ್ಮಲಾ ವಿರುದ್ಧ ಪ್ರಿವಿಲೈಜ್ ಹಕ್ಕುಚ್ಯುತಿ‌ ಜಾರಿಮಾಡಿದ ಕಾಂಗ್ರೆಸ್‌ ಸಂಸದ!

ಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್‌ ಗಾಂಧಿ ಅವರನ್ನು ‘ಡೂಮ್ಸ್ ಡೇ ಮ್ಯಾನ್ ಆಫ್ ಇಂಡಿಯಾ’ (ಭಾರತದ ವಿನಾಶಕಾರಿ ಮನುಷ್ಯ) ಎಂದು ಕರೆದಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್ ಸಂಸದ ಟಿ.ಎನ್.ಪ್ರಥಾಪನ್ ಶನಿವಾರ ಪ್ರಿವಿಲೈಜ್ ಹಕ್ಕುಚ್ಯುತಿ‌  ನೋಟಿಸ್ ನೀಡಿದ್ದಾರೆ.

ಶುಕ್ರವಾರ ನಡೆದ ಲೋಕಸಭೆ ಅಧಿವೇಶನದಲ್ಲಿ ನಡೆದ ಬಜೆಟ್ ಚರ್ಚೆಯ ವೇಳೆ ವಿತ್ತ ಸಚಿವರು ಈ ಹೇಳಿಕೆ ನೀಡಿದ್ದರು.

“ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಗಾಂಧಿಯನ್ನು ‘ಡೂಮ್ಸ್ ಡೇ ಮ್ಯಾನ್ ಆಫ್ ಇಂಡಿಯಾ’ ಎಂದು ನಿಂದಿಸಿದ್ದಾರೆ. ಅಲ್ಲದೆ, ಲೋಕಸಭೆಗೆ ಚುನಾಯಿತ ಸದಸ್ಯರಾಗಿರುವ ರಾಹುಲ್ ಗಾಂಧಿ ಫ್ರಿಂಜ್ ಎಲಿಮೆಂಟ್ ಗುಂಪುಗಳೊಂದಿಗೆ ಸೇರಿಕೊಂಡು ದೇಶವನ್ನು ಕೆಣಕುತ್ತಿದ್ದಾರೆ ಎಂದು ಸೀತಾರಾಮನ್‌ ಆರೋಪಿಸಿದ್ದರು.

ಇದು ಪ್ರಿವಿಲೈಜ್‌ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಸಂಸದ ಪ್ರಥಾಪನ್‌ ಅವರು ಸೀತಾರಾಮನ್‌ ವಿರುದ್ಧ ನೋಟಿಸ್ ನೀಡಿದ್ದಾರೆ.

ರಾಹುಲ್‌ಗಾಂಧಿಯನ್ನು “ದೇಶದಲ್ಲಿ ವಿನಾಶಕಾರಿ ಶಕ್ತಿ” ಎಂದು ಸೀತಾರಾಮನ್ ಯಾವ ಆಧಾರದ ಮೇಲೆ ಆರೋಪಿಸಿದ್ದಾರೆ. ಅಂತಹ ಪದಗಳನ್ನು ಬಳಸುವುದು “ಸಂಸತ್ತಿನ ಹೆಮ್ಮೆ ಮತ್ತು ಸವಲತ್ತುಗಳ ಮೇಲಿನ ದಾಳಿ” ಎಂದು ಅವರು ಹೇಳಿದ್ದಾರೆ.

“ಭಿನ್ನಾಭಿಪ್ರಾಯದ ಧ್ವನಿಗಳು ಮತ್ತು ಟೀಕೆಗಳನ್ನು ವಿನಾಶಕಾರಿ ಅಥವಾ ರಾಷ್ಟ್ರ ವಿರೋಧಿ ಎಂದು ಬ್ರಾಂಡ್ ಮಾಡುವ ಪ್ರವೃತ್ತಿಯನ್ನು ನಾವು ರಂಜಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಸೀತಾರಾಮನ್ ಅವರು ಪ್ರಶ್ನೆಗಳಿಗೆ ನೀಡಿದ್ದ ತನ್ನ ಉತ್ತರದಲ್ಲಿ “ರಾಹುಲ್‌ ಗಾಂಧಿಯವರು ವಿವಿಧ ವಿಷಯಗಳ ಬಗ್ಗೆ “ನಕಲಿ” ಆರೋಪಗಳನ್ನುಮಾಡುತ್ತಿದ್ದಾರೆ. ಬಹುಶಃ ಅವರು “ಭಾರತದ ಡೂಮ್ಸ್ ಡೇ ಮ್ಯಾನ್” ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆಗಾಗಿ 8 ಕೋಟಿ ಖರ್ಚು ಮಾಡಿದೆ ಮೋದಿ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights