ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆಯೇ ಸಿಕ್ಕಿಲ್ಲ; ಮಂಗಳವಾರ ಪಿಯುಸಿ ಫಲಿತಾಂಶ ನೋಡುವುದು ಹೇಗೆ?
ಕೊರೊನಾ ಬಿಕ್ಕಟ್ಟಿನಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸದೆಯೇ ಫಲಿತಾಂಶ ಪ್ರಕರಟಿಸಲು ನಿರ್ಧರಿಸಲಾಗಿದೆ. ನಾಳೆ (ಮಂಗಳವಾರ) ಪಿಯು ಫಲಿತಾಂಶ ಪ್ರಕಟವಾಗಲಿದೆ. ನಾಳೆ ಸಂಜೆ 4;30 ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಶಿಕ್ಷಣ ಇಲಾಖೆಯ http://karresults.nic.in ವಬ್ಸೈಟ್ನಲ್ಲಿ ನೋಡಬಹುದು ಎಂದು ಪಿಯು ಬೋರ್ಡ್ ತಿಳಿಸಿದೆ.
ಪರೀಕ್ಷೆಗಳನ್ನು ನಡೆಸದ ಕಾರಣ, ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿ ಅಂಕಗಳು ಹಾಗೂ ಇಂಟರ್ನಲ್ ಅಸೆಸ್ಮೆಂಟ್ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆಗಳು ನಡೆಯದ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆ ನೀಡಲಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಫಲಿತಾಂಶ ನೋಡುವುದು ಹೇಗೆ ಎಂಬಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ know your Number ಎಂಬ ಆಯ್ಕೆಯಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡು ಫಲಿತಾಂಶ ಪರಿಶೀಲಿಸಬಹುದು. ಅಲ್ಲದೆ, ಎಸ್ಎಂಎಸ್ ಮೂಲಕವೂ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಕಳುಹಿಸಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.
ಮಾತ್ರವಲ್ಲ, ಎಲ್ಲಾ ಕಾಲೇಜುಗಳಿಗೆ ಆಯಾ ಕಾಲೇಜಿನ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿಯನ್ನು ಕಳುಹಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ವೆಬ್ಸೈಟ್: http://karresults.nic.in
ಇದನ್ನೂ ಓದಿ: ದೆಹಲಿಯಿಂದ ಬರ್ತಾರೆ ಕರ್ನಾಟಕದ ಹೊಸ ಸಿಎಂ..! ವೈರಲ್ ಆದ ಆಡಿಯೋ ನನ್ನದಲ್ಲ ಎಂದ ಕಟೀಲ್!

