ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ; ಸಂಸತ್ತಿಗೆ ಸೈಕಲ್‌ನಲ್ಲಿ ಹೊರಟ ಟಿಎಂಸಿ ಸಂಸದರು!

ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಹಲವಾರು ತೃಣಮೂಲ ಕಾಂಗ್ರೆಸ್ ಸಂಸದರು ಸೋಮವಾರ ಸಂಸತ್ತಿಗೆ ಸೈಕಲ್‌ನಲ್ಲಿ ತೆರಳಿದ್ದಾರೆ.

ಟಿಎಂಸಿ ಪಕ್ಷದ ಲೋಕಸಭೆ ಮತ್ತು ರಾಜ್ಯಸಭೆಯ ಪಕ್ಷದ ಸಂಸದರು ಬೆಳಿಗ್ಗೆ 10: 15 ಕ್ಕೆ ಪ್ರತಿಭಟನೆ ಆರಂಭಿಸಿದ್ದು, ವಿಜಯ್ ಚೌಕ್‌ನಲ್ಲಿ ಧರಣಿ ನಡೆಸಿದ್ದಾರೆ. ಬಳಿಕ ಸಂಸತ್ತಿಗೆ ಸೈಕಲ್‌ ಮೂಲಕ ತರಳುತ್ತಿದ್ದಾರೆ.

ಮಾನ್ಸೂನ್ ಅಧಿವೇಶನವು ಸೋಮವಾರ ಆರಂಭವಾಗಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು, ಸಂಸತ್ತಿನ ಉಭಯ ಸದನಗಳಲ್ಲಿ ವಿವಿಧ ನಿಯಮಗಳ ಅಡಿಯಲ್ಲಿ ಅನೇಕ ನೋಟಿಸ್‌ಗಳನ್ನು ನೀಡಿದ್ದಾರೆ ಎಂದು ಪಕ್ಷ ತಿಳಿಸಿದೆ.

ಡೀಸೆಲ್, ಪೆಟ್ರೋಲ್, ಎಲ್‌ಪಿಜಿ ಮತ್ತು ಇತರ ಸರಕುಗಳ ಬೆಲೆ ಏರಿಕೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆ, ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತ, ಎಂಪಿಎಲ್‌ಎಡಿ ನಿಧಿಗಳ ಪುನಃಸ್ಥಾಪನೆ ಮತ್ತು ಸರ್ಕಾರವು ಫೆಡರಲ್ ರಚನೆಯನ್ನು ದುರ್ಬಲಗೊಳಿಸಿದೆ ಎಂಬ ಆರೋಪಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪೆಗಾಸಸ್ ಬಳಸಿ ಭಾರತೀಯ ಪತ್ರಕರ್ತರ ಮೇಲೆ ನಿಗಾ; ವಿರೋಧಿಗಳನ್ನು ನಿಯಂತ್ರಿಸಲು ಸರ್ಕಾರ ಯತ್ನ!?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights