FACT CHECK | ಸಂಬಂಧವಿಲ್ಲ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡ ಬಲಪಂಥೀಯರು

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಕೊಲಾಜ್ ಒಂದು ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಒಂದು ವಿಡಿಯೊ ತುಣುಕಿನಲ್ಲಿ ಶಾಲಾ ಬಾಲಕಿಯರು ರಸ್ತೆಯಲ್ಲಿ ನಡೆದುಹೋಗುತ್ತಿರುವಾಗ, ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ.  ನಂತರ ಒಬ್ಬ ವ್ಯಕ್ತಿಯನ್ನು ಪೊಲೀಸರು ಥಳಿಸಿ, ಪರೇಡ್ ಮಾಡುವುದನ್ನು ಮತ್ತೊಂದು ತುಣುಕಿನಲ್ಲಿ ತೋರಿಸಲಾಗಿದೆ. ಆರೋಪಿ ಮುಸ್ಲಿಂ ಆಗಿದ್ದು, ಉತ್ತರ ಪ್ರದೇಶದ ಪೊಲೀಸರು ಅವನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಬಾಬಾ ಬನಾರಸ್ (@RealBababanaras), ಎಂಬ X ಬಳಕೆದಾರ ಡಿಸೆಂಬರ್ 20, 2024 ರಂದು ಕೊಲಾಜ್ ಮಾಡಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ, “ಅಬ್ದುಲ್ ಪ್ರತಿದಿನ ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದನು. ಈತನ ಚಟುವಟಿಕೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುಪಿ ಪೋಲೀಸರು ಅತಿಥಿಗೆ ವಿಶ್ರಾಂತಿ ನೀಡಿದ್ದಾರೆ. ಪೊಲೀಸರ ಈ ಕ್ರಮವನ್ನು ನೀವು ಬೆಂಬಲಿಸುತ್ತೀರಾ? ಎಂದು ಬರೆದುಕೊಂಡಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಸ್ಕ್ರೀನ್‌ಶಾಟ್‌ ತೆಗೆದು  ಹಲವು ಕೀಫ್ರೇಮ್‌ಗಳಾಗಿ ವಿಂಗಡಿಸಿ, ಮೊದಲ ತುಣುಕನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, News75.com ಎಂಬ  ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದ ವರದಿಯೊಂದು ಲಭ್ಯವಾಗಿದೆ.
ಡಿಸೆಂಬರ್ 6, 2024 ರಂದು, ಕಾಲೇಜು ಹುಡುಗಿಯರ ಗುಂಪು ಮಹಾರಾಷ್ಟ್ರದ ಪರ್ಭಾನಿಯ ಮಹಾತ್ಮ ಫುಲೆ ಕಾಲೇಜಿನ ಹಿಂದಿನ ರಸ್ತೆಯ ಮೂಲಕ ಜಿಲ್ಲಾ ಜನರಲ್ ಆಸ್ಪತ್ರೆಗೆ ಹೋಗುತ್ತಿತ್ತು. ಈ ವೇಳೆ ಬೈಕ್ ನಲ್ಲಿ ಬಂದ ಯುವಕನೊಬ್ಬ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದಾನೆ. ಆರೋಪಿಗಳ ವಿರುದ್ಧ ನಾನಾಪೇಟ್ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಡಿಸೆಂಬರ್ 8, 2024 ರಂದು, ಮೊಹಮದ್ ಅಸ್ಲಂ ಎಂಬ ವ್ಯಕ್ತಿಯನ್ನು ಪರ್ಲಿ ತಾಲೂಕಿನ ಧರ್ಮಪುರಿಯಿಂದ ಬಂಧಿಸಿ ಮುಂದಿನ ಕ್ರಮಕ್ಕಾಗಿ ನಾನಲ್‌ಪೇಟ್ ಪೊಲೀಸ್ ಠಾಣೆಗೆ ಕರೆತರಲಾಯಿತು ಎಂದು ವರದಿಯಾಗಿದೆ.
ವಿಡಿಯೊದ ಎರಡನೇ ಭಾಗವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, 2024ರ ಡಿ.8ರಂದು News21 ಎಂಬ ಯೂಟ್ಯೂಬ್‌ನಲ್ಲಿ ಪ್ರಕಟವಾಗಿದ್ದ ವರದಿ ಲಭ್ಯವಾಗಿದೆ. ವಿಡಿಯೋ ವರದಿಯ ಪ್ರಕಾರ 40 ಸಾವಿರ ಸಾಲ ಹಿಂತಿರುಗಿಸದೇ ಇದ್ದ ಕಾರಣಕ್ಕೆ ಸ್ನೇಹಿತನನ್ನು ಕೊಂದ ಆರೋಪದ ಮೇರೆಗೆ ಮಧ್ಯಪ್ರದೇಶದ ಗದ್ವಾರಾ ಪೊಲೀಸರು ವಿಕಾಸ್ ಕುಚ್‌ಬಂಡಿಯಾ ಎನ್ನುವವನನ್ನು ಬಂಧಿಸಿದ್ದ ಪೊಲೀಸರು, ಅವನಿಗೆ ಥಳಿಸಿದ್ದರು. ಈ ಎರಡೂ ಪ್ರತ್ಯೇಕ ವಿಡಿಯೊಗಳನ್ನು ಸೇರಿಸಿ ಒಂದೇ ಎಂದು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮೊದಲ ಘಟನೆಯಲ್ಲಿ ಆರೋಪಿಯನ್ನು ಮೊಹಮದ್ ಅಸ್ಲಂ ಎಂದು ಗುರುತಿಸಲಾಗಿದೆ. ಎರಡನೇ ಘಟನೆಯಲ್ಲಿ, ಕೊಲೆ ಆರೋಪದಡಿ ಬಂಧಿತ ವ್ಯಕ್ತಿ ವಿಕಾಸ್ ಕುಚಬಂಡಿಯಾ ಎನ್ನಲಾಗಿದೆ. ಎರಡು ಘಟನೆಗಳು ಸಂಪೂರ್ಣವಾಗಿ ಸಂಬಂಧವಿಲ್ಲ ಮತ್ತು ಇವೆರಡೂ ಉತ್ತರ ಪ್ರದೇಶದವರಲ್ಲ. ಯುಪಿ ಪೊಲೀಸರು ಮುಸ್ಲಿಂ ಆರೋಪಿಯನ್ನು (ಸಾರ್ವಜನಿಕವಾಗಿ ಥಳಿಸಿ ಮೆರವಣಿಗೆ ಮಾಡುವ ಮೂಲಕ) ಹೇಗೆ ನಡೆಸಿಕೊಂಡರು ಎಂಬ ನಿರೂಪಣೆಯನ್ನು ರಚಿಸಲು ಎರಡು ಬೇರೆ ಬೇರೆ ವಿಡಿಯೋಗಳನ್ನು ಒಟ್ಟಿಗೆ ಹಂಚಿಕೊಳ್ಳಲಾಗಿದೆ. ಇದು ದಾರಿತಪ್ಪಿಸುವಂತಿದೆ. ಮತ್ತು ಬಲಪಂಥೀಯರು ಯುಪಿ ಪೊಲೀಸರಿಗೆ ‘ಮನ್ನಣೆ’ ನೀಡುವ ಸಲುವಾಗಿಈ ರೀತಿ ಮಾಡಲಾಗಿದೆ. ಪೂರೈಸಲು ಪ್ರಯತ್ನಿಸುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights